ನವದೆಹಲಿ: ಲೋಕಸಭೆ ಚುನಾವಣೆಗೆ ಈಗಾಗಲೇ ಎಲ್ಲ ಪಕ್ಷಗಳು ಭರ್ಜರಿ ತಯಾರಿ ನಡೆಸಿವೆ ಇದೇ ಬೆನ್ನಲ್ಲೇ ಈಗ ಮೊದಲ ಬಾರಿಗೆ ಡಿಎಂಕೆ ಕನಿಮೋಳಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಪಕ್ಷದ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದ್ದಾರೆ.



COMMERCIAL BREAK
SCROLL TO CONTINUE READING

2007 ರಲ್ಲಿ ಮೊದಲ ಬಾರಿಗೆ ಸಂಸತ್ತಿನ ಮೇಲ್ಮನೆ ರಾಜ್ಯಸಭಾಗೆ ಧುಮುಕಿದ ಅವರು ಮುಂದೆ 2013 ರಲ್ಲಿಯೂ ಕೂಡ ಮರು ಆಯ್ಕೆಯಾದರು. ಕರುಣಾನಿಧಿ ಹಾಗೂ ಮೂರನೇ ಪತ್ನಿ  ರಜಥಿ ಅಮ್ಮಾಳ್ ಅವರಿಗೆ ಜನಿಸಿದ ಕನಿಮೋಳಿ.ತಂದೆಯಂತೆ ಬರಹಗಾರ್ತಿಯೂ ಹೌದು. ರಾಜ್ಯಸಭಾ ಸದಸ್ಯೆಯಾಗಿ ತಮಿಳುನಾಡಿನ ಧ್ವನಿಯನ್ನು ಸಮರ್ಥವಾಗಿ ಪ್ರತಿನಿಧಿಸುತ್ತಾ ಬಂದಿರುವ ಅವರು 12 ವರ್ಷಗಳ ರಾಜಕೀಯ ಜೀವನದಲ್ಲಿ ಮೊದಲ ಬಾರಿಗೆ ಬಾರಿಗೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಅಣಿಯಾಗಿದ್ದಾರೆ. 


ಈಗ ಅವರು ಈ ಬಾರಿ ತೂತುಕುಡಿಯಿಂದ  ಲೋಕಸಭಾ ಚುನಾವಣೆಗೆ ಡಿಎಂಕೆ ಅಭ್ಯರ್ಥಿಯಾಗಿ ಸ್ಪರ್ಧಿಸಲು ಅಣಿಯಾಗಿದ್ದಾರೆ.ಆ ಮೂಲಕ ಈಗ ಈ ಕ್ಷೇತ್ರ ಮಹಿಳೆಯರ ನಡುವಿನ ಸಮರವಾಗಲಿದೆ.ಇದೇ ಕ್ಷೇತ್ರದಿಂದ ಬಿಜೆಪಿ ರಾಜ್ಯಾಧ್ಯಕ್ಷೆ ತಮಿಳಿಸೈ ಸುಂದರ್ ರಾಜನ್ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲಿದ್ದಾರೆ.


ಲೋಕಸಭೆ ಸ್ಪರ್ಧಿಸಲು ಪಕ್ಷದ ಕಚೇರಿಯಲ್ಲಿ ಅರ್ಜಿ ಸಲ್ಲಿಸಿ ಮಾತನಾಡಿದ ಕನಿಮೋಳಿ ತಾನು ಎಲ್ಲ ಪ್ರಶ್ನೆಗಳಿಗೆ ಉತ್ತರಿಸುವ  ಮೊದಲು ಪಕ್ಷವು ಅಭ್ಯರ್ಥಿಯನ್ನು ಘೋಷಣೆ ಮಾಡಬೇಕು ಎಂದು ಹೇಳಿದರು.