ಎಐಎಡಿಎಂಕೆ ಶಾಸಕರ ಅನರ್ಹತೆ: ಸುಪ್ರೀಂಕೋರ್ಟ್ ತುರ್ತು ವಿಚಾರಣೆಗೆ ಡಿಎಂಕೆ ಮನವಿ
ಕಳೆದ ವರ್ಷ ಏಪ್ರಿಲ್ ನಲ್ಲಿ ಎಐಎಡಿಎಂಕೆಯ 11 ಶಾಸಕರನ್ನು ಅನರ್ಹಗೊಳಿಸಬೇಕೆಂಬ ಡಿಎಂಕೆ ಮನವಿಯನ್ನು ಮದ್ರಾಸ್ ಹೈಕೋರ್ಟ್ ತಿರಸ್ಕರಿಸಿತ್ತು.
ನವದೆಹಲಿ: 2017ರಲ್ಲಿ ತಮಿಳು ನಾಡು ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ ವಿರುದ್ಧ ವಿಶ್ವಾಸ ಮತ ಗೊತ್ತುವಳಿಯ ವೇಳೆ ವಿರುದ್ಧ ಮತ ಚಲಾಯಿಸಿದ್ದ 11 ಎಐಎಡಿಎಂಕೆ ಶಾಸಕರನ್ನು ಅನರ್ಹಗೊಳಿಸಬೇಕೆಂಬ ತನ್ನ ಮನವಿಯನ್ನು ತುರ್ತು ವಿಚಾರಣೆ ನಡೆಸಬೇಕೆಂದು ಕೋರಿ ಡಿಎಂಕೆ ಇಂದು ಮಂಗಳವಾರ ಸುಪ್ರಿಂ ಕೋರ್ಟ್ ಮೆಟ್ಟಿಲೇರಿದೆ.
ಈ ಬಗ್ಗೆ ಮುಖ್ಯನ್ಯಾಯಮೂರ್ತಿ ರಂಜಾನ್ ಗೊಗೋಯ್ ನೇತೃತ್ವದ ಪೀಠವು ಪ್ರತಿಕ್ರಿಯಿಸಿದ್ದು, ಉಪ ಮುಖ್ಯಮಂತ್ರಿ ಓ ಪನ್ನೀರಸೆಲ್ವಂ ಸಹಿತ ಶಾಸಕರ ಅನರ್ಹತೆಯನ್ನು ಕೋರಿರುವ ಡಿಎಂಕೆ ಮನವಿಯನ್ನು ತುರ್ತು ವಿಚಾರಣೆ ಪಟ್ಟಿಗೆ ಸೇರಿಸುವಂತೆ ಸೂಚಿಸುವುದಾಗಿ ತಿಳಿಸಿದೆ.
ಕಳೆದ ವರ್ಷ ಏಪ್ರಿಲ್ ನಲ್ಲಿ ಎಐಎಡಿಎಂಕೆಯ 11 ಶಾಸಕರನ್ನು ಅನರ್ಹಗೊಳಿಸಬೇಕೆಂಬ ಡಿಎಂಕೆ ಮನವಿಯನ್ನು ಮದ್ರಾಸ್ ಹೈಕೋರ್ಟ್ ತಿರಸ್ಕರಿಸಿತ್ತು.
ಅಂದು ಬಂಡಾಯ ಬಣದಲ್ಲಿದ್ದ ಪನ್ನೀರಸೆಲ್ವಂ ಮತ್ತು ಇತರ 10 ಶಾಸಕರು 2017ರ ಫೆ.18ರ ವಿಶ್ವಾಸಮತ ಗೊತ್ತುವಳಿಯಲ್ಲಿ ಪಳನಿಸ್ವಾಮಿ ವಿರುದ್ಧ ವಿಶ್ವಾಸ ಮತ ಚಲಾಯಿಸಿದ್ದರು.