ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಸರ್ಕಾರದ ಮಹಿಳೆಯರಿಗೆ ಉಚಿತ ಮೆಟ್ರೋ ಸಾರಿಗೆ ನೀಡುವ ಮಹತ್ವಾಕಾಂಕ್ಷೆಯ ಯೋಜನೆ ಸಾರಿಗೆ ವ್ಯವಸ್ಥೆಯನ್ನು ಅದಕ್ಷತೆ ಮತ್ತು ದಿವಾಳಿತನದ ಕಡೆಗೆ ಕೊಂಡೊಯ್ಯುತ್ತದೆ. ಆದ್ದರಿಂದ ಈ ಯೋಜನೆಗೆ ಒಪ್ಪಿಗೆ ನೀಡಬೇಡಿ ಎಂದು ನಿವೃತ್ತ ದೆಹಲಿ ಮೆಟ್ರೋ ಮುಖ್ಯಸ್ಥ ಇ-ಶ್ರೀಧರನ್ ಅವರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.  


COMMERCIAL BREAK
SCROLL TO CONTINUE READING

ಪ್ರಧಾನಿ ಮೋದಿ ಗೆ ಬರೆದಿರುವ ಪತ್ರದಲ್ಲಿ ಮೆಟ್ರೋ ಮ್ಯಾನ್ ಎಂದೇ ಜನಪ್ರಿಯರಾಗಿರುವ ಇ-ಶ್ರೀಧರನ್ "ಮೆಟ್ರೋದಲ್ಲಿನ ಮಹಿಳೆಯರಿಗೆ ಉಚಿತ ಪ್ರಯಾಣದ ದೆಹಲಿ ಸರ್ಕಾರದ ಪ್ರಸ್ತಾವನೆಯನ್ನು ಒಪ್ಪಿಕೊಳ್ಳಬಾರದು ಎಂದು ನಾನು ಮನಃ ಪೂರ್ವಕವಾಗಿ ಮನವಿ ಮಾಡುತ್ತೇನೆ" ಎಂದು ಅವರು ತಿಳಿಸಿದ್ದಾರೆ.ಮೆಟ್ರೋ ಸೇವೆ 2002 ರಲ್ಲಿ ಪ್ರಾರಂಭವಾದಾಗ ಎಲ್ಲರೂ ಕ್ಷಿಪ್ರ ಸಾರಿಗೆ ವ್ಯವಸ್ಥೆಗೆ ಸವಾರಿ ಮಾಡಲು ಟಿಕೆಟ್ಗಳನ್ನು ಖರೀದಿಸಬೇಕಾಗಿತ್ತು ಮತ್ತು ಇದಕ್ಕೆ ಯಾರೂ ಹೊರತಾಗಿಲ್ಲ ಎಂದು ಶ್ರೀಧರನ್ ಹೇಳಿದರು.


ಆ ನಿರ್ಧಾರವನ್ನು ಆಗಿನ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರು ಸ್ವಾಗತಿಸಿ ಅವರು ಶಹದಾರಾದಿಂದ ಡಿಸೆಂಬರ್ ಮೊದಲ ಬಾರಿಗೆ ಕಾಶ್ಮೀರ್ ಗೇಟ್ಗೆ ಟಿಕೆಟ್ ಖರೀದಿಸಿದರು.ದೆಹಲಿ ಮೆಟ್ರೊ ರೈಲ್ವೆ ಕಾರ್ಪೊರೇಷನ್ (ಡಿಎಂಆರ್ಸಿ) ದೆಹಲಿ ಸರ್ಕಾರ ಮತ್ತು ಕೇಂದ್ರದ ಜಂಟಿ ಉದ್ಯಮವಾಗಿದೆ ಆದ್ದರಿಂದ ಒಂದು ವಿಭಾಗಕ್ಕೆ ರಿಯಾಯಿತಿ ನೀಡಲು ಏಕಪಕ್ಷೀಯ ನಿರ್ಧಾರವನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ ಇದು ದೆಹಲಿ ಮೆಟ್ರೋವನ್ನು "ಅದಕ್ಷತೆ ಮತ್ತು ದಿವಾಳಿತನಕ್ಕೆ ತೆಗೆದುಕೊಂಡೊಯ್ಯುತ್ತದೆ ಎಂದರು.


"ದೆಹಲಿ ಮೆಟ್ರೋದಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ದೇಶದಲ್ಲಿನ ಇತರ ಎಲ್ಲ ಮೆಟ್ರೋಗಳಿಗೆ ಇದು ಅಪಾಯಕಾರಿ ಆದ್ಯತೆಯಾಗಲಿದೆ ಎಂದು ಅವರು ಹೇಳಿದ್ದಾರೆ. 1995 ರಿಂದ 2012 ರವರೆಗೆ ದೆಹಲಿ ಮೆಟ್ರೊ ಮುಂದಾಳತ್ವ ವಹಿಸಿದ್ದ ಶ್ರೀ ಶ್ರೀಧರನ್, ಸಿಬ್ಬಂದಿ ಮತ್ತು ವ್ಯವಸ್ಥಾಪಕ ನಿರ್ದೇಶಕರು ಕೂಡ ಮೆಟ್ರೋ ಸೇವೆಯನ್ನು ಬಳಸಲು ಟಿಕೆಟ್ಗಳನ್ನು ಖರೀದಿಸುತ್ತಾರೆ ಎಂದು ಹೇಳಿದರು. ಕೇಜ್ರಿವಾಲ್ ಈ ಯೋಜನೆಯನ್ನು ಮುಂದುವರಿಯಬೇಕೆಂದು ಬಯಸಿದರೆ, ಅವರು ನೇರವಾಗಿ ಫಲಾನುಭವಿಗಳ ಖಾತೆಗೆ ಹಣ ಹಾಕಬೇಕು ಎಂದು ಸಲಹೆ ನೀಡಿದರು.