ಬ್ಯಾಂಕ್ ನೌಕರರು 11 ರಿಂದ 13ನೇ ಮಾರ್ಚ್ ಮಧ್ಯೆ ನಡೆಸಲು ನಿರ್ಧರಿಸಿದ್ದ ಮುಷ್ಕರವನ್ನು ಕೈಬಿಟ್ಟಿದ್ದಾರೆ. ಆದರೂ ಕೂಡ 8 ರಿಂದ 15 ಮಾರ್ಚ್ ಮಧ್ಯೆ ಒಟ್ಟು ಐದು ದಿನಗಳ ಕಾಲ ಬ್ಯಾಂಕ್ ಗಳು ಬಂದ್ ಇರಲಿವೆ. ಇವುಗಳಲ್ಲಿ ಎರಡನೇ ಶನಿವಾರ, ಭಾನುವಾರ, ಹೋಳಿ ಹಬ್ಬದ ರಜೆ ಹೀಗೆ ಒಟ್ಟು ಐದು ದಿನಗಳ ಕಾಲ ಬ್ಯಾಂಕ್ ಗಳು ಬಂದ್ ಇರಲಿವೆ. ಹಾಗೆ ನೋಡಿದರೆ  ಮಾರ್ಚ್ ದಿನಗಳಲ್ಲಿ ದೇಶಾದ್ಯಂತ ಒಟ್ಟು 16 ದಿನಗಳ ಕಾಲ ಬ್ಯಾಂಕ್ ಗಳು ಬಂದ್ ಇರಲಿವೆ.


COMMERCIAL BREAK
SCROLL TO CONTINUE READING

ಬ್ಯಾಂಕ್ ನೌಕರರು ತಮ್ಮ ಮುಷ್ಕರ ಕೈಬಿಟ್ಟ ಕಾರಣ 11ರಿಂದ 13 ಮಾರ್ಚ್ ನಡುವೆ ಎಲ್ಲ ಬ್ಯಾಂಕ್ ಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ. ಇದರಿಂದ ಬ್ಯಾಂಕ್ ಗ್ರಾಹಕರಿಗೆ ನೆಮ್ಮದಿಯ ಸುದ್ದಿ ಸಿಕ್ಕಂತಾಗಿದೆ. ಇದಕ್ಕೂ ಮೊದಲು ಜನವರಿ ಹಾಗೂ ಫೆಬ್ರುವರಿ ತಿಂಗಳಿನಲ್ಲಿ ಬ್ಯಾಂಕ್ ನೌಕರರು ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಒಂದು ದಿನದ ಸಾಂಕೇತಿಕ ಮುಷ್ಕರ ನಡೆಸಿದ್ದರು. ದೇಶಾದ್ಯಂತ ಇರುವ ಒಟ್ಟು 8.47 ಲಕ್ಷ ಬ್ಯಾಂಕ್ ನೌಕರರ ವೇತನ ಪರಿಷ್ಕರಣೆ ನವೆಂಬರ್ 1, 2017 ರಿಂದ ನಿಂತು ಹೋಗಿದೆ. ಆದರೆ, ಬ್ಯಾಂಕರ್ ಗಳಿಗೆ ಒಂದು ತಿಂಗಳ ವೇತನವನ್ನು ಮುಂಗಡವಾಗಿ ನೀಡಲಾಗಿದೆ.


ಸದ್ಯ ಬ್ಯಾಂಕ್ ನೌಕರರ ವೇತನದಲ್ಲಿ ಶೇ.15ರಷ್ಟು ವೃದ್ಧಿಯಾಗಲಿದೆ ಎನ್ನಲಾಗಿದೆ. ಸರ್ಕಾರದ ನಿರ್ದೇಶನಗಳ ಮೇರೆಗೆ PSB ಬ್ಯಾಂಕ್ ಗಳ ಸಂಘಟನೆಯಾಗಿರುವ ಇಂಡಿಯನ್ ಬ್ಯಾಂಕ್ ಅಸ್ಸೋಸಿಯೇಶನ್ (IBA), ಬ್ಯಾಂಕ್ ನೌಕರರ ವೇತನದಲ್ಲಿ ಇಷ್ಟೊಂದು ಹೈಕ್ ಮಾಡಲು ಒಪ್ಪಿಕೊಂಡಿದೆ. ಜೊತೆಗೆ ವಾರದಲ್ಲಿ 5 ದಿನಗಳ ಕಾಲ ಸೇವೆಯ ಕುರಿತೂ ಕೂಡ ಒಮ್ಮತ ಮೂಡಿದೆ ಎನ್ನಲಾಗಿದೆ.


ಆಲ್ ಇಂಡಿಯಾ ಬ್ಯಾಂಕ್ ಎಂಪ್ಲಾಯೀಸ್ ಅಸೋಸಿಯೇಷನ್ ಪ್ರಕಾರ IBA ಜೊತೆಗೆ ನಡೆದ ಸಭೆಯಲ್ಲಿ ಕೆಲ ಸಕಾರಾತ್ಮಕ ಪ್ರಗತಿಯಾಗಿದೆ. ಇವುಗಳಲ್ಲಿ ವೇತನದಲ್ಲಿ ಶೇ.15ರಷ್ಟು ವೃದ್ಧಿ ಹಾಗೂ 5 ಡೇ ವೀಕ್ ಮೇಲೆ ಒಮ್ಮತ ಕೂಡ ಶಾಮೀಲಾಗಿವೆ. ಈ ವಿಷಯಗಳ ಕುರಿತು IBA ಮುಂದುವರೆಯಲು ಸಿದ್ಧವಾಗಿದೆ. ಬ್ಯಾಂಕ್ ನೌಕರರ ವೇತನ ಹೆಚ್ಚಳದ ಕುರಿತು ರಾಜ್ಯಸಭೆಯಲ್ಲಿಯೂ ಕೂಡ ಚರ್ಚೆ ನಡೆಸಲಾಗಿದೆ.


ಈ ಕುರಿತು ರಾಜ್ಯಸಭೆಗೆ ಮಾಹಿತಿ ನೀಡಿರುವ ಕೇಂದ್ರ ಹಣಕಾಸು ಸಚಿವಾಲಯದ ರಾಜ್ಯ ಸಚಿವ ಅನುರಾಗ್ ಸಿಂಗ್ ಠಾಕೂರ್, ಸರ್ಕಾರ PUBLIC SECTOR BANKS ನ ಅಸೋಸಿಯೇಷನ್ ಆಗಿರುವ IBAಗೆ ಈ ಕುರಿತು ನಿರ್ದೇಶನಗಳನ್ನು ನೀಡಿದೆ ಎಂದು ಹೇಳಿದ್ದಾರೆ.