`ಜನವರಿ 26 ರ ಪಂಜಾಬ್ ರೈತರ ಕೇಸರಿ ಟ್ರ್ಯಾಕ್ಟರ್ ರ್ಯಾಲಿಯನ್ನು ನಿಲ್ಲಿಸಬೇಡಿ`
ಜನವರಿ 26 ರಂದು ನಡೆಯುವ ಪಂಜಾಬ್ ರೈತರ ಕೇಸರಿ ಟ್ರ್ಯಾಕ್ಟರ್ ರ್ಯಾಲಿಯನ್ನು ನಿಲ್ಲಿಸಬೇಡಿ ಎಂದು ಸಿಖ್ಸ್ ಫಾರ್ ಜಸ್ಟೀಸ್ (ಎಸ್‌ಎಫ್‌ಜೆ) ಭಾರತದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಶರದ್ ಅರವಿಂದ್ ಬೊಬ್ಡೆ, ಅವರಿಗೆ ಹೇಳಿದೆ.
ನವದೆಹಲಿ: ಜನವರಿ 26 ರಂದು ನಡೆಯುವ ಪಂಜಾಬ್ ರೈತರ ಕೇಸರಿ ಟ್ರ್ಯಾಕ್ಟರ್ ರ್ಯಾಲಿಯನ್ನು ನಿಲ್ಲಿಸಬೇಡಿ ಎಂದು ಸಿಖ್ಸ್ ಫಾರ್ ಜಸ್ಟೀಸ್ (ಎಸ್‌ಎಫ್‌ಜೆ) ಭಾರತದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಶರದ್ ಅರವಿಂದ್ ಬೊಬ್ಡೆ, ಅವರಿಗೆ ಹೇಳಿದೆ.
'ನೀವು ಸಿಖ್ಖರ ಹತ್ಯಾಕಾಂಡವನ್ನು ನಡೆಸಿದವರೊಂದಿಗೆ ಕೈಜೋಡಿಸಿದ್ದೀರಿ ಮತ್ತು ಈಗ ನೀವು ಪಂಜಾಬ್ ರೈತರ ಹತ್ಯಾಕಾಂಡದ ಹೊಣೆ ಹೊತ್ತಿರುವ (ನರೇಂದ್ರ) ಮೋದಿ ಸರ್ಕಾರದ ಪರವಾಗಿದ್ದೀರಿ. ಇದು 1990 ರ ದಶಕವಲ್ಲ; ಇದು 2021 ಮತ್ತು ಎಸ್‌ಎಫ್‌ಜೆ ಎಲ್ಲಾ ನ್ಯಾಯಮೂರ್ತಿಗಳನ್ನು ಅಂತರರಾಷ್ಟ್ರೀಯ ಕಾನೂನುಗಳ ಅಡಿಯಲ್ಲಿ ಹೊಣೆಗಾರರನ್ನಾಗಿ ಮಾಡುತ್ತದೆ' ಎಂದು ಎಸ್‌ಎಫ್‌ಜೆ ಜನರಲ್ ಕೌನ್ಸಿಲ್ ಗುರುಪತ್ವಂತ್ ಸಿಂಗ್ ಪನ್ನುನ್ ತಿಳಿಸಿದ್ದಾರೆ.
ಇದನ್ನೂ ಓದಿ: ರೈತರ ಪ್ರತಿಭಟನೆಯನ್ನು ಸಾಂವಿಧಾನಿಕ ಎಂದ ಸುಪ್ರೀಂಕೋರ್ಟ್
ಜನವರಿ 12 ರಂದು, ಸುಪ್ರೀಂ ಕೋರ್ಟ್ ವಿವಾದಾತ್ಮಕ ಮೂರು ಹೊಸ ಕೃಷಿ ಕಾನೂನುಗಳ (Agriculture laws) ಅನುಷ್ಠಾನವನ್ನು ತಡೆಯಲು ಆದೇಶಿಸಿತ್ತು,ಇದಕ್ಕಾಗಿ ಈಗ ನಾಲ್ಕು ಕೃಷಿ ತಜ್ಞ ಸದಸ್ಯರ ಸಮಿತಿಯನ್ನು ರಚಿಸಲಾಗಿದೆ.ಆದರೆ ರೈತರು ಈಗಾಗಲೇ ಈ ಸಮಿತಿ ಸದಸ್ಯರು ಸರ್ಕಾರದ ಕಾನೂನುಗಳ ಪರವಾಗಿದ್ದಾರೆ ಎಂದು ಆರೋಪಿಸಿದ್ದಾರೆ.ಅಷ್ಟೇ ಅಲ್ಲದೆ ಸೆಪ್ಟೆಂಬರ್‌ನಲ್ಲಿ ಜಾರಿಗೆ ತಂದ ಮೂರು ಕಾನೂನುಗಳನ್ನು ರದ್ದುಗೊಳಿಸುವವರೆಗೂ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ಕೇಂದ್ರ ಸರ್ಕಾರದ ಜೊತೆಗಿನ 9 ನೇ ಸಭೆ 120 ರಷ್ಟು ವಿಫಲ ಎಂದ ರೈತರು...!
ಮೂರು ಕಾನೂನುಗಳನ್ನು ರದ್ದುಪಡಿಸುವಂತೆ ಮತ್ತು ತಮ್ಮ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ವ್ಯವಸ್ಥೆಗೆ ಕಾನೂನು ಖಾತರಿ ನೀಡುವಂತೆ ಒತ್ತಾಯಿಸಿ ಸಾವಿರಾರು ರೈತರು, ಹೆಚ್ಚಾಗಿ ಹರಿಯಾಣ ಮತ್ತು ಪಂಜಾಬ್ ಮೂಲದವರು ಕಳೆದ ನವೆಂಬರ್ 28 ರಿಂದ ದೆಹಲಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಕೃಷಿ ಕಾನೂನುಗಳ ಕುರಿತಾದ ಸುಪ್ರೀಂ ಸಮಿತಿಯಿಂದ ಹೊರಬಂದ ಭೂಪಿಂದರ್ ಸಿಂಗ್ ಮಾನ್ ಹೇಳಿದ್ದೇನು?
ಜನವರಿ 14 ರಂದು, ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರೊಂದಿಗೆ ಮಾತುಕತೆ ನಡೆಸಲು ಸುಪ್ರೀಂ ಕೋರ್ಟ್ ನಾಮನಿರ್ದೇಶನ ಮಾಡಿದ ನಾಲ್ವರು ತಜ್ಞರಲ್ಲಿ ಒಬ್ಬರಾದ ಭೂಪಿಂದರ್ ಸಿಂಗ್ ಮನ್, ಈಗ ಕೆನಡಾದಿಂದ ಬೆದರಿಕೆ ಕರೆಯನ್ನು ಸ್ವೀಕರಿಸಿದ ಹಿನ್ನಲೆಯಲ್ಲಿ ತಾವು ನಿಷ್ಪಕ್ಷವಾಗಿರಲು ಬಯಸಿರುವುದಾಗಿ ಹೇಳಿದರು, ಅಷ್ಟೇ ಅಲ್ಲದೆ ರೈತರ ನಿರಂತರ ಪ್ರತಿಭಟನೆಗೆ ಸಂಬಂಧಿಸಿದಂತೆ ಸಾರ್ವಜನಿಕ ಭಾವನೆಯಿಂದಾಗಿ ಅವರು ಸಮಿತಿಯಿಂದ ಹೊರಬಂದಿರುವುದಾಗಿ ಹೇಳಿದರು.
ಇದನ್ನೂ ಓದಿ: Farmers Protest: 'ಕೃಷಿ ಕಾನೂನುಗಳಿಗೆ ನೀವು ತಡೆ ನೀಡದಿದ್ದರೆ, ಆ ಕೆಲಸ ನಾವು ಮಾಡಬೇಕಾದೀತು'
"ಕೇಂದ್ರ ಸರ್ಕಾರವು ತಂದ ಮೂರು ಕಾನೂನುಗಳ ಬಗ್ಗೆ ಕಿಸಾನ್ ಯೂನಿಯನ್‌ಗಳೊಂದಿಗೆ ಸಂವಾದವನ್ನು ಪ್ರಾರಂಭಿಸಲು 4 ಸದಸ್ಯರ ಸಮಿತಿಯಲ್ಲಿ ನನ್ನನ್ನು ನಾಮಕರಣ ಮಾಡಿದ್ದಕ್ಕಾಗಿ ನಾನು ಭಾರತದ ಗೌರವಾನ್ವಿತ ಸುಪ್ರೀಂ ಕೋರ್ಟ್‌ಗೆ ಕೃತಜ್ಞನಾಗಿದ್ದೇನೆ.ಒಬ್ಬ ಕೃಷಿಕನಾಗಿ ಮತ್ತು ನಾನು ಯೂನಿಯನ್ ನಾಯಕನಾಗಿ, ಸಾಮಾನ್ಯವಾಗಿ ಕೃಷಿ ಒಕ್ಕೂಟಗಳು ಮತ್ತು ಸಾರ್ವಜನಿಕರಲ್ಲಿ ಚಾಲ್ತಿಯಲ್ಲಿರುವ ಭಾವನೆಗಳು ಮತ್ತು ಆತಂಕಗಳನ್ನು ಗಮನದಲ್ಲಿಟ್ಟುಕೊಂಡು, ಪಂಜಾಬ್ ಮತ್ತು ದೇಶದ ರೈತರ ಹಿತಾಸಕ್ತಿಗಳಿಗೆ ಧಕ್ಕೆಯಾಗದಂತೆ ನಾನು ನೀಡುವ ಅಥವಾ ನನಗೆ ನೀಡಿದ ಯಾವುದೇ ಸ್ಥಾನವನ್ನು ತ್ಯಾಗಮಾಡಲು ನಾನು ಸಿದ್ಧನಿದ್ದೇನೆ, ನಾನು ಸಮಿತಿಯಿಂದ ಹಿಂದೆ ಸರಿಯುತ್ತಿದೇನೆ ಮತ್ತು ನಾನು ಯಾವಾಗಲೂ ನನ್ನ ರೈತರು ಮತ್ತು ಪಂಜಾಬ್ ಜೊತೆ ನಿಲ್ಲುತ್ತೇನೆ' ಎಂದು ಭೂಪಿಂದರ್ ಸಿಂಗ್ ಮನ್ ತಿಳಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.