ನವದೆಹಲಿ: ದೇಶದ ಪ್ರತಿಷ್ಠಿತ ತೈಲ ಕಂಪನಿ ಇಂಡಿಯನ್ ಆಯಿಲ್ ಸ್ಪರ್ಧೆಯೊಂದನ್ನು ಏರ್ಪಡಿಸಿದ್ದು, ಈ ಮೂಲಕ ನೀವು 5 ಲಕ್ಷ ರೂ. ಮೌಲ್ಯದ ಪೆಟ್ರೋಲ್ ಮತ್ತು ಡೀಸೆಲ್ ಕೂಪನ್'ಗಳನ್ನೂ ಉಚಿತವಾಗಿ ಪಡೆಯಬಹುದು.


COMMERCIAL BREAK
SCROLL TO CONTINUE READING

ಇಂಡಿಯನ್ ಆಯಿಲ್ ಏರ್ಪಡಿಸಿರುವ 'I Love Indian Oil' ಸ್ಪರ್ಧೆಯಲ್ಲಿ ದೇಶದ ಪ್ರತಿಯೊಬ್ಬ ನಾಗರಿಕನೂ ಫೇಸ್ ಬುಕ್ ಅಥವಾ ವಾಟ್ಸಪ್ ಮೂಲಕ ಜನವರಿ 3 ರಿಂದ ಜನವರಿ 9ರ ವರೆಗೆ ಭಾಗವಹಿಸಬಹುದು. ಜನವರಿ 9ರಂದು ಆಚರಿಸಲಾಗುವ ಗ್ರಾಹಕರ ದಿನದ ಅಂಗವಾಗಿ ಇಂಡಿಯನ್ ಆಯಿಲ್ ಈ ಸ್ಪರ್ಧೆ ಏರ್ಪಡಿಸಿದೆ. 


ಸ್ಪರ್ಧಿಸುವುದು ಹೇಗೆ?
ಇಂಡಿಯನ್ ಆಯಿಲ್ ನಿಮ್ಮ ದೈನಂದಿನ ಜೀವನದಲ್ಲಿ ಎಷ್ಟು ಮಹತ್ವ ಪಡೆದುಕೊಂಡಿದೆ ಹಾಗೂ ಎಷ್ಟರಮಟ್ಟಿಗೆ ಪ್ರಭಾವ ಬೀರಿದೆ ಎಂಬುದನ್ನು ವೀಡಿಯೋ ಅಥವಾ ಚಿತ್ರಬರಹ ಅಥವಾ ಅಭಿಪ್ರಾಯದ ಮೂಲಕ ತಿಳಿಸಿ 5 ಲಕ್ಷ ರೂ. ಮೌಲ್ಯದ ಪೆಟ್ರೋಲ್-ಡೀಸೆಲ್ ವೋಚರ್ ಗೆಲ್ಲಬಹುದು. ಈ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಗೆದ್ದ 5 ಜನರಿಗೆ ಇಂಡಿಯನ್ ಆಯಿಲ್ 25 ಸಾವಿರ ರೂ.ಗಳ ಪೆಟ್ರೋಲ್ ವೋಚರ್ ನೀಡಲಿದೆ. 


ಈ ಸ್ಪರ್ಧೆಯಲ್ಲಿ ಭಾಗವಹಿಸಲು ನೀವು ಇಂಡಿಯನ್ ಆಯಿಲ್ ಫೇಸ್ ಬುಕ್ ಪುಟವನ್ನು ಫಾಲೋ ಮಾಡಬೇಕು. ನಂತರ ಪ್ರತಿ ಪರ್ಷೆಗೆ ಉತ್ತರಿಸುವಾಗ #ILoveIndianOil ಹ್ಯಾಶ್ ಟ್ಯಾಗ್ ಅನ್ನು ಮರೆಯದೇ ಹಾಕಬೇಕು. ನೀವು ನೀಡಿದ ಉತ್ತರದ ಆಧಾರದ ಮೇಲೆ ಅದೃಷ್ಟಶಾಲಿ ವಿಜೇತರನ್ನು ಆಯ್ಕೆ ಮಾಡಲಾಗುವುದು. ಈ ಸ್ಪರ್ಧೆಯ ವಿಜೇತರನ್ನು ಇಂಡಿಯನ್ ಆಯಿಲ್ ಫೇಸ್ಬುಕ್ ಪೇಜ್ ಮತ್ತು ಟ್ವಿಟ್ಟರ್ ಖಾತೆಗಳಲ್ಲಿ ಘೋಶಿಸಲಾಗುವುದು. 



ಯಾರಿಗೆ ಎಷ್ಟು ಬಹುಮಾನ ದೊರೆಯಲಿದೆ?
'I Love Indian Oil' ಸ್ಪರ್ಧೆ ವಿಜೇತರಿಗೆ ಮೊದಲ ಬಹುಮಾನ- ಐವರು ವಿಜೇತರಿಗೆ 25,000 ರೂ.ಗಳ ಪೆಟ್ರೋಲ್ ಅಥವಾ ಡೀಸೆಲ್ ವೋಚರ್, ಎರಡನೇ ಬಹುಮಾನ- 10 ವಿಜೇತರಿಗೆ ತಲಾ 10,000 ರೂ. ಮೌಲ್ಯದ ಪೆಟ್ರೋಲ್ ಅಥವಾ ಡೀಸೆಲ್ ವೋಚರ್, ಮೂರನೇ ಬಹುಮಾನ- 30 ವಿಜೇತರಿಗೆ ತಲಾ 5,000ರೂ ಮೌಲ್ಯದ ಪೆಟ್ರೋಲ್ ಅಥವಾ ಡೀಸೆಲ್ ವೋಚರ್, ಸಮಾಧಾನಕರ ಬಹುಮಾನ - 60 ವಿಜೇತರಿಗೆ ತಲಾ 2,000 ರೂ. ಮೌಲ್ಯದ ಪೆಟ್ರೋಲ್ ಅಥವಾ ಡೀಸೆಲ್ ವೋಚರ್ ದೊರೆಯಲಿದೆ.