ಈ ಕೆಲಸ ಇಂದೇ ಮಾಡಿ, ಇಲ್ಲದಿದ್ದರೆ 20% ಹೆಚ್ಚುವರಿ tax ಭರಿಸಬೇಕು
ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸಸ್(CBDT) ನಿಯಮಗಳ ಪ್ರಕಾರ, TDS ಡಿಡಕ್ಷನ್ ಗಾಗಿ ನೌಕರರು ತಮ್ಮ ಕಂಪನಿಯಲ್ಲಿ ಈ ಎರಡು ದಾಖಲೆಗಳನ್ನು ನೀಡುವುದು ಅನಿವಾರ್ಯವಾಗಿದೆ.
ಪ್ಯಾನ್-ಆಧಾರ್ ಮಾಹಿತಿಯನ್ನು ಮುಚ್ಚಿಡುವುದು ಅಥವಾ ಅವುಗಳನ್ನು ನೀಡದೆ ಇರುವುದು ನಿಮಗೆ ಭಾರಿ ದುಬಾರಿಯಾಗಿ ಪರಿಣಮಿಸಲಿದೆ. ಈ ದಾಖಲೆಗಳ ಕುರಿತು ಮಾಹಿತಿ ನೀಡದೆ ಇದ್ದರೆ ನೀವು ಶೇ.20ರಷ್ಟು ಹೆಚ್ಚುವರಿ ಟ್ಯಾಕ್ಸ್ ಭರಿಸಬೇಕಾಗಲಿದೆ. ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸಸ್(CBDT) ನಿಯಮಗಳ ಪ್ರಕಾರ, TDS ಡಿಡಕ್ಷನ್ ಗಾಗಿ ನೌಕರರು ತಮ್ಮ ಕಂಪನಿಯಲ್ಲಿ ಈ ಎರಡು ದಾಖಲೆಗಳನ್ನು ನೀಡುವುದು ಅನಿವಾರ್ಯವಾಗಿದೆ. ಯಾವುದೇ ಓರ್ವ ನೌಕರ ತನ್ನ ನೌಕರಿದಾತನಿಗೆ PAN ಅಥವಾ AADHAAR NUMBER ನೀಡದೆ ಹೋದಲ್ಲಿ ಅಂತಹ ನೌಕರರು ತಮ್ಮ ಆದಾಯದ ಮೇಲೆ ಶೇ.20ರಷ್ಟು TAX ಭರಿಸಬೇಕು.
PAN-AADHAAR ಎಲ್ಲಿ ಅವಶ್ಯಕವಾಗಿದೆ?
CBDT ಒಂದು ಸರ್ಕ್ಯುಲರ್ ನಲ್ಲಿ ಈ ನಿಯಮದ ಕುರಿತು ಉಲ್ಲೇಖಿಸಲಾಗಿದೆ. ಸರ್ಕ್ಯುಲರ್ ಪ್ರಕಾರ, ಇನ್ಕಮ್ ಟ್ಯಾಕ್ಸ್ ಕಾಯ್ದೆಯ 206AA ಸೆಕ್ಷನ್ ಅಡಿ ನೌಕರರಿಗೆ ಸಿಗುವ ಟ್ಯಾಕ್ಸೇಬಲ್ ಅಮೌಂಟ್ ಮೇಲೆ ಪ್ಯಾನ್ ಹಾಗೂ ಆಧಾರ್ ಮಾಹಿತಿ ಒದಗಿಸುವುದು ಅನಿವಾರ್ಯವಾಗಿದೆ ಎಂದು ಉಲ್ಲೇಖಿಸಲಾಗಿದೆ. ಇದನ್ನು ನೀವು ಮಾಡದೆ ಹೋದಲ್ಲಿ ನಿಮ್ಮ ನೌಕರಿದಾತರು ನಿಮ್ಮ ಆದಾಯದ ಮೇಲೆ ಟ್ಯಾಕ್ಸ್ ಕಡಿತ ಮಾಡಬಹುದಾಗಿದೆ. ಒಟ್ಟಾರೆ ಹೇಳುವುದಾದರೆ ನಿಮ್ಮ ಆದಾಯದ ಮೇಲೆ ಶೇ.20ರಷ್ಟು ಟ್ಯಾಕ್ಸ್ ಕಡಿತವಾಗುವ ಸಾಧ್ಯತೆ ಇದೆ.
ತಪ್ಪು ಮಾಹಿತಿ ನೀಡಿದಲ್ಲಿ ದಂಡ ತೆರಬೇಕು
ಆದಾಯ ತೆರಿಗೆ ಪಾವತಿದಾರರು ತಮ್ಮ ಆದಾಯ ಹಾಗೂ ಪ್ಯಾನ್-ಆಧಾರ್ ಮಾಹಿತಿಯನ್ನು ಸರಿಯಾಗಿ ನೀಡಬೇಕು. ಒಂದು ವೇಳೆ ನಿಮ್ಮ ಎಂಪ್ಲಾಯರ್ ಬಳಿ ಈ ಮಾಹಿತಿ ಸರಿಯಾಗಿ ಇರದೇ ಹೋದಲ್ಲಿ, ಕಾಯ್ದೆಯ ಪ್ರಕಾರ ನಿಮ್ಮ ಆದಾಯದ ಮೇಲೆ ಅತಿ ಹೆಚ್ಚು TDS ಕಟ್ ಆಗುವ ಸಾಧ್ಯತೆ ಇದೆ.
ಯಾವ ಸ್ಥಿತಿಯಲ್ಲಿ ನೀವು ಟ್ಯಾಕ್ಸ್ ನಿಂದ ಪಾರಾಗಬಹುದು
CBDT ನಿಯಮಗಳ ಅನುಸಾರ ಒಂದುವೇಳೆ ಸೆಕ್ಷನ್ 192ರ ಅಡಿ TDS ಕ್ಯಾಲ್ಕ್ಯುಲೆಟ್ ಮಾಡಿದಾಗ ನಿಮ್ಮ ಆದಾಯ ಟ್ಯಾಕ್ಸೇಬಲ್ ಲಿಮಿಟ್ ಒಳಗೆ ಇದ್ದರೆ ನೌಕರರು ಯಾವುದೇ ರೀತಿಯ ಟ್ಯಾಕ್ಸ್ ಭರಿಸಬೇಕಾಗಿಲ್ಲ. ಆದರೆ ನಿಮ್ಮ ಆದಾಯ ಈ ಲಿಮಿಟ್ ಹೊರಗಿದ್ದರೆ ಸೆಕ್ಷನ್ 192 ಅಡಿ ನೀವು ಟ್ಯಾಕ್ಸ್ ಪಾವತಿಸಲೇಬೇಕು.