ಸಣ್ಣ ಉಳಿತಾಯ ಖಾತೆಯ ಲಾಭ ಪಡೆಯಲು ಜನರು ಪೋಸ್ಟ್ ಆಫೀಸ್ ನಲ್ಲಿ ತಮ್ಮ ಖಾತೆ ತೆರೆಯುತ್ತಾರೆ. ಆದರೆ, ದೀರ್ಘ ಕಾಲದ ಬಳಿಕ ಪೋಸ್ಟ್ ಆಫೀಸ್ ನಲ್ಲಿರುವ ನಿಮ್ಮ ಖಾತೆಯ ಕುರಿತು ಹೊಸ ನಿಯಮಗಳು ಜಾರಿಗೆ ಬಂದಿವೆ. ಇಂತಹುದೇ ಒಂದು ನಿಯಮದಲ್ಲಿ ನೀವು ನಿಮ್ಮ ಪೋಸ್ಟ ಆಫೀಸ್ ಖಾತೆಯಲ್ಲಿ ರೂ.500 ಮಿನಿಮಮ್ ಬ್ಯಾಲೆನ್ಸ್ ಇಡುವುದು ಅಗತ್ಯವಾಗಿದೆ. ಮೊದಲು ಈ ಮೊತ್ತ ರೂ.50 ನಿಗದಿಪಡಿಸಲಾಗಿತ್ತು. ನೂತನ ನಿಯಮದ ಅನುಸಾರ ಒಂದು ವೇಳೆ ನಿಮ್ಮ ಖಾತೆಯಲ್ಲಿ ಮಾರ್ಚ್ 31, 2020ರವರೆಗೆ ಕನಿಷ್ಠ 500 ರೂ ಬ್ಯಾಲೆನ್ಸ್ ಇರದಿದ್ದರೆ, ಪೋಸ್ಟ್ ಆಫೀಸ್ ನಿಮ್ಮಿಂದ ದಂಡದ ರೂಪದಲ್ಲಿ ರೂ.500 ವಸೂಲಿ ಮಾಡಲಿದೆ.


COMMERCIAL BREAK
SCROLL TO CONTINUE READING

ಅಷ್ಟೇ ಅಲ್ಲ ನೂತನ ನಿಯಮದ ಅನುಸಾರ ನಿಮ್ಮ ಖಾತೆಯಲ್ಲಿ ಒಂದು ವೇಳೆ ಶೂನ್ಯ ಬ್ಯಾಲೆನ್ಸ್ ಇದ್ದರೆ ನಿಮ್ಮ ಖಾತೆ ಬಂದ್ ಆಗಲಿದೆ. ಒಟ್ಟಾರೆ ಹೇಳುವುದಾದರೆ ಬ್ಯಾಂಕ್ ನಂತೆ ಇದೀಗ ಪೋಸ್ಟ್ ಆಫೀಸ್ ನಲ್ಲಿಯೂ ಕೂಡ ನೀವು ಮಿನಿಮಮ್ ಬ್ಯಾಲೆನ್ಸ್ ಹೊಂದಿರುವುದು ಅನಿವಾರ್ಯವಾಗಿದ್ದು, ಕನಿಷ್ಠ ಬ್ಯಾಲೆನ್ಸ್ ಹೊಂದಿರದೆ ಹೋದಲ್ಲಿ ನೀವು ತೊಂದರೆಗೆ ಸಿಲುಕುವ ಸಾಧ್ಯತೆ ಇದೆ


ಪೋಸ್ಟ್ ಆಫೀಸ್ ನಿಮ್ಮಿಂದ ಪ್ರತಿವರ್ಷ ನಿಮ್ಮಿಂದ ಪೆನಾಲ್ಟಿ ಪಡೆಯಲಿದೆ. ಹೀಗಾಗಿ ಕೂಡಲೇ ನಿಮ್ಮ ಅಕೌಂಟ್ ನಲ್ಲಿ ಮಿನಿಮಮ್ ಬ್ಯಾಲೆನ್ಸ್ ಮೆಂಟೈನ್ ಮಾಡಿ. ಮಾಧ್ಯಮಗಳ ವರದಿ ಪ್ರಕಾರ, ತನ್ನ ಗ್ರಾಹಕರ ಖಾತೆಯಲ್ಲಿ ಮಿನಿಮಮ್ ಬ್ಯಾಲೆನ್ಸ್ ಗಳಿಲ್ಲದ ಕಾರಣ ಪೋಸ್ಟ್ ಆಫೀಸ್ ವಾರ್ಷಿಕವಾಗಿ ರೂ.2800 ಕೋಟಿ ನಷ್ಟ ಅನುಭವಿಸುತ್ತಿದ್ದು, ಇದೆ ಒಂದು ಕಾರಣದಿಂದ ಪೋಸ್ಟ್ ಆಫೀಸ್ ಈ ನಿಯಮ ಜಾರಿಗೆ ತಂದಿದೆ ಎನ್ನಲಾಗಿದೆ.