ನವದೆಹಲಿ: ಸಿಹಿ ತಿನಿಸುಗಳಿಲ್ಲದೆ ಹಬ್ಬಗಳು ಅಪೂರ್ಣ. ಹಾಗಾಗಿಯೇ ಈ ಬಾರಿಯ ರಕ್ಷಾ ಬಂಧನಕ್ಕೆ ಗುಜರಾತ್'ನಲ್ಲಿರುವ ವಿಶೇಷ ಸ್ವೀಟ್ ತಯಾರಿಸಿ ಮಾರಾಟಕ್ಕೆ ಇಡಲಾಗಿದೆ. ಈ ಸ್ವೀಟ್ ಬೆಲೆ ಒಂದು ಕೆ.ಜಿ.ಗೆ ಬರೋಬ್ಬರಿ 9 ಸಾವಿರ ರೂ.ಗಳು! ಅಚ್ಚರಿ ಆಗುತ್ತಿದೆಯಲ್ಲವೇ? ಆದರೆ ಇದು ಸತ್ಯ.


COMMERCIAL BREAK
SCROLL TO CONTINUE READING

ಗುಜರಾತ್ ರಾಜ್ಯದ ಸೂರತ್'ನಲ್ಲಿರುವ ಸ್ವೀಟ್ ಅಂಗಡಿಯಲ್ಲಿ ಈ ಬಾರಿಯ ರಕ್ಷಾ ಬಂಧನ ಹಬ್ಬಕ್ಕಾಗಿ ವಿಶೇಷವಾದ ಚಿನ್ನದ ಸ್ವೀಟ್ ತಯಾರಿಸಿ, ಮಾರಾಟಕ್ಕಿಡಲಾಗಿದೆ. ಈ ಸ್ವೀಟ್ ವಿಶೇಷ ಎಂದರೆ, ಆರೋಗ್ಯಕರವಾದ ಡ್ರೈ ಫ್ರೂಟ್ಸ್'ಗಳಿಂದ ತಯಾರಿಸಿದ ಈ ಸ್ವೀಟ್ ಅನ್ನು ಅಪ್ಪಟ 24 ಕ್ಯಾರಟ್ ಚಿನ್ನದ ಎಲೆಯಿಂದ ಕವರ್ ಮಾಡಲಾಗಿದೆ. ಇದರ ಹೆಸರು '24 ಕ್ಯಾರಟ್ ಮಿಠಾಯ್ ಮ್ಯಾಜಿಕ್'! ಹಾಗಾಗಿಯೇ ಇದರ ಬೆಲೆಯೂ ಕೂಡ ಅಷ್ಟೇ ದುಬಾರಿ!



ಆರೋಗ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಚಿನ್ನದ ಎಲೆಯಿಂದ ಸುತ್ತಿದ ಈ ಸ್ವೀಟ್ ತಯಾರಿಸಲಾಗಿದೆ. ಕೆಲವೇ ದಿನಗಳಲ್ಲಿ ರಕ್ಷಾಬಂಧನ ಹಬ್ಬ ಇರುವುದರಿಂದ ಸಾಕಷ್ಟು ಮಂದಿ ಈ ಸ್ವೀಟ್ ಅನ್ನು ಕೊಳ್ಳುತ್ತಿದ್ದಾರೆ ಎಂದು 'ಪ್ರಿನ್ಸ್ ಮಿಠಾಯಿವಾಲಾ' ಅಂಗಡಿಯ ಮಾಲೀಕರು ತಿಳಿಸಿದ್ದಾರೆ. 


ಇದೀಗ ಈ ಸ್ವೀಟನ್ನು ಜನರು ಗೋಲ್ಡ್ ಸ್ವೀಟ್ ಎಂದೇ ಕರೆಯುತ್ತಿದ್ದು, ಸ್ವೀಟ್ ಖರೀದಿಸಲು ಅಂಗಡಿಗೆ ಬರುವ ಗ್ರಾಹಕರ ಪ್ರಮುಖ ಆಕರ್ಷಣೆಯಾಗಿದೆ.