ನವದೆಹಲಿ: ಇಂದು ಬಹುತೇಕ ಜನರ ಬಳಿ ಸ್ಮಾರ್ಟ್ ಫೋನ್ ಇದೆ. ಸ್ಮಾರ್ಟ್ ಫೋನ್ ನಲ್ಲಿ ಅತಿ ಹೆಚ್ಚು ವೈಶಿಷ್ಟ್ಯಗಳು ಅಂಡ್ರಾಯಿಡ್ ಸ್ಮಾರ್ಟ್ ಫೋನ್ ನಲ್ಲಿವೆ. ಇಂದು ಸ್ಮಾರ್ಟ್ ಫೋನ್ ನಲ್ಲಿ ಹಲವು ವೈಶಿಷ್ಟ್ಯಗಳಿದ್ದು, ಹಲವು ವೈಶಿಷ್ಟ್ಯಗಳ ಬಗ್ಗೆ ಬಳಕೆದಾರರ ಬಳಿ ಅದರ ಮಾಹಿತಿಯೇ ಇರುವುದಿಲ್ಲ. ಇಂತಹುದೇ ಒಂದು ವೈಶಿಷ್ಟ್ಯದ ಕುರಿತು ಈ ವರದಿ ಹೇಳುತ್ತದೆ. ಈ ವಿಶಿಷ್ಟ ಬಳಸಿ ನೀವು ನಿಮ್ಮ ಫೋನ್ ಅನ್ನು ಅನ್ ಲಾಕ್ ಮೋಡ್ ನಲ್ಲಿಯೂ ಕೂಡ ಸುರಕ್ಷಿತವಾಗಿಡಬಹುದು. ಅಂದರೆ, ನಿಮ್ಮ ಫೋನ್ ಅನ್ಲಾಕ್ ಇದ್ದರೂ ಕೂಡ ಯಾರೂ ಅದರಲ್ಲಿ ಏನೇ ಬದಲಾವಣೆ ಅಥವಾ ನೋಡಲು ಸಾಧ್ಯವಿಲ್ಲ. 


COMMERCIAL BREAK
SCROLL TO CONTINUE READING

ಅಂಡ್ರಾಯಿಡ್ ಫೋನ್ ಗಳಲ್ಲಿ ಕಂಡುಬರುವ ಈ ವಿಶೇಷ ವೈಶಿಷ್ಟ್ಯ ಎಂದರೆ ಅದು Pin The Screen. ಹಲವು ಫೋನ್ ಗಳಲ್ಲಿ ಇದು Screen Pinning ಲಭ್ಯವಿರುತ್ತದೆ. ಆದರೆ, ಇವೆರಡೂ ಕೂಡ ಒಂದೇ ಕೆಲಸ ಮಾಡುತ್ತವೆ. ಒಂದು ವೇಳೆ ನಿಮ್ಮ ಫೋನ್ ಇತರರ ಬಳಿ ಇದ್ದು ಮತ್ತು ಅದು ಅನ್ಲಾಕ್ ಆಗಿದ್ದರೆ. ಇತರರು ಬಯಸಿಯೂ ಕೂಡ ಅದರಲ್ಲಿ ಇಣುಕಲು ಅಥವಾ ಯಾವುದೇ ಬದಲಾವಣೆ ಮಾಡಲು ಸಾಧ್ಯವಿಲ್ಲ. ಅಂಡ್ರಾಯಿಡ್ 5.0 ಆವೃತ್ತಿ ಮತ್ತು ಅದರ ನಂತರದ ಬಹುತೇಕ ಆವೃತ್ತಿಯ ಸ್ಮಾರ್ಟ್ ಫೋನ್ ಗಳಲ್ಲಿ ಈ ವೈಶಿಷ್ಟ್ಯ ನೀಡಲಾಗಿದೆ.


ಈ ವೈಶಿಷ್ಟ್ಯ ಹೇಗೆ ಸಕ್ರೀಯಗೊಳಿಸಬೇಕು?
- ಈ ವೈಶಿಷ್ಟ್ಯ ಬಳಸಲು ಮೊದಲು ನೀವು ನಿಮ್ಮ ಸ್ಮಾರ್ಟ್ ಫೋನ್ ನ ಸೆಟ್ಟಿಂಗ್ಸ್ ವಿಭಾಗಕ್ಕೆ ಭೇಟಿ ನೀಡಬೇಕು.
- ಇದೀಗ Security & Locations ಆಪ್ಶನ್ ಆಯ್ಕೆ ಮಾಡಿ. ಇದು ನಿಮಗೆ Advanced ಆಪ್ಶನ್ ನಲ್ಲಿ ಕಾಣಸಿಗಲಿದೆ.
- ಇಲ್ಲಿ ನಿಮಗೆ Screen Pinning ಆಪ್ಶನ್ ಸಿಗಲಿದ್ದು, ಅದನ್ನು ಸೆಲೆಕ್ಟ್ ಮಾಡಿ.
- ಅಲ್ಲಿ ಒಂದು ವೇಳೆ ಸ್ಕ್ರೀನ್ ಪಿನ್ನಿಂಗ್ ಆಪ್ಶನ್ Off ಇದ್ದರೆ ಅದನ್ನು On ಮಾಡಿ.
- ಇದಾದ ಬಳಿಕ ಯಾವ ಆಪ್ ಅನ್ನು ಪಿನ್ ಮಾಡಬೇಕೋ ಅದನ್ನು ಓಪನ್ ಮಾಡಿ, ಪುನಃ Recent Appsಗೆ ಭೇಟಿ ನೀಡಿ.
- ಇದಾದ ಬಳಿಕ ಆಪ್ ಮೇಲೆ ಲಾಂಗ್ ಪ್ರೆಸ್ ಮಾಡುವ ಮೂಲಕ ಪಿನ್ ಆಪ್ಶನ್ ಅನ್ನು ಸೆಲೆಕ್ಟ್ ಮಾಡಿ.
- ನಂತರ ಇತರೆ ಆಪ್ ಗಳಿಗೆ ಹೋಗಲು Home ಹಾಗೂ Back ಗುಂಡಿಗಳನ್ನು ಏಕಕಾಲಕ್ಕೆ ಒತ್ತಿ ಮತ್ತು  ಲಾಕ್ ಸ್ಕ್ರೀನ್ ಪಾಸ್ವರ್ಡ್ ಅನ್ನು ಬಳಸಿ.