ಬೆಂಗಳೂರು: ಬಹುತೇಕರಿಗೆ ಚಂದ್ರಗ್ರಹಣದ ಬಗ್ಗೆ ಮಾಹಿತಿ ಇದೆ. ಆದರೆ ಈ ಬಾರಿಯ ಚಂದ್ರಗ್ರಹಣ ಅತ್ಯಂತ ಅಪರೂಪದ ಚಂದ್ರಗ್ರಹಣ ಎಂದು ಹೇಳಲಾಗುತ್ತಿದೆ. ಕಾರಣವಿಷ್ಟೇ ಜನವರಿ 31 ರಂದು ರಾತ್ರಿಯ ಬೆಳೆದಿಂಗಳು ಎಂದಿನಂತೆ ಇರುವುದಿಲ್ಲ. ಈ ದಿನದಂದು ಚಂದ್ರನು ನೀಲಿ, ದೈತ್ಯ,ಹಾಗೂ ತಾಮ್ರ ವರ್ಣದ ಚಂದ್ರನಾಗಿ ಗೋಚರಿಸಲಿದ್ದಾನೆ. 


COMMERCIAL BREAK
SCROLL TO CONTINUE READING

ಏನಿದು ನೀಲಿ, ದೈತ್ಯ, ತಾಮ್ರ ಚಂದ್ರನ ದರ್ಶನ ?


ಎರಡು ಹುಣ್ಣಿಮೆಗಳು ಒಂದೇ ತಿಂಗಳಿನಲ್ಲಿ ಬಂದರೆ ಎರಡನೆಯ ಹುಣ್ಣಿಮೆಯನ್ನು ನೀಲಿ ಚಂದ್ರ ಎಂದು ಕರೆಯಲಾಗುತ್ತದೆ. ಚಂದ್ರ  ಭೂಮಿಯನ್ನು ಧೀರ್ಘ ವೃತ್ತಾಕಾರದಲ್ಲಿ ಸುತ್ತುವ ಕಾರಣ  ಕೆಲವೊಮ್ಮೆ  ಭೂಮಿಗೆ ತುಸು ಹತ್ತಿರವಾಗಿ ಕೆಲವೊಮ್ಮೆ ತುಸು ದೂರವಾಗಿ ಕಾಣುತ್ತದೆ. ಈ ಸಂದರ್ಭದಲ್ಲಿ ಹತ್ತಿರವಾದಾಗ ಚಂದ್ರನು 14 ರಷ್ಟು ದೊಡ್ಡ ಮತ್ತು  30 ರಷ್ಟು ಅಧಿಕ ಪ್ರಕಾಶಮಾನವಾಗಿ ಕಾಣುತ್ತಾನೆ. ಈ ಪ್ರಕ್ರಿಯೆಗೆ ದೈತ್ಯ ಚಂದ್ರ ಎಂದು ಕರೆಯುತ್ತಾರೆ.


ಇದರ ಜೊತೆಗೆ ಚಂದ್ರ ಭೂಮಿ,ಮತ್ತು ಸೂರ್ಯ ಒಂದೇ ಸಾಲಿನಲ್ಲಿ ಬಂದಾಗ ಭೂಮಿಯ ನೆರಳು ಚಂದ್ರನ ಮೇಲೆ ಬೀಳುತ್ತದೆ,ಅದೇ ರೀತಿಯಾಗಿ  ನೆರಳು ಬಿದ್ದಾಗ  ಸೂರ್ಯ ರಶ್ಮಿಯು  ಭೂಮಿಯ ವಾತಾವರಣದಲ್ಲಿ ಚಲಿಸುವಾಗ  ಬೆಳಕಿನ ಕಿರಣಗಳು ಬಿಡಿಬಿಡಿಯಾಗಿ ಚದುರಿ ಕೆಂಪು ಕಿರಣಗಳು ಚಂದ್ರನ ಮೇಲೆ  ಬೀಳುತ್ತದೆ ಆಗ ಚಂದ್ರನು ತಾಮ್ರ ವರ್ಣಕ್ಕೆ ತಿರುಗುತ್ತಾನೆ. 


ಈ ಮೂರು ರೀತಿಯ ವರ್ಣದ ಚಂದ್ರನ ದರ್ಶನವಾಗುತ್ತಿರುವುದು 150 ವರ್ಷಗಳ ನಂತರ ಇಂಥ ಅಪರೂಪದ ಚಂದ್ರಗ್ರಹಣ ಸಂಭವಿಸುತ್ತಿದೆ ಅಂದರೆ ಈ ಹಿಂದೆ  1866 ಮಾರ್ಚ್  31 ರಂದು ಮೂರು ರೀತಿಯ ಚಂದ್ರನ ದರ್ಶನವಾಗಿತ್ತು. ಕರ್ನಾಟಕದ ಜನತೆಗೆ ಚಂದ್ರ ಉದಯಿಸುವ ವೇಳೆಗೆ, ಸಂಜೆ 6.31  ರ ವೇಳೆಗೆ  ಪೂರ್ಣ ಗ್ರಹಣವಾಗಿರುತ್ತದೆ 7,31 ಕ್ಕೆ  ಚಂದ್ರನು ಕೆಂಪು ಬಣ್ಣಕ್ಕೆ ತಿರುಗಿ ನಂತರ ಸಿಮೆಂಟ್ ಬಣ್ಣಕ್ಕೆ ತಿರುಗುತ್ತಾನೆ.ಈ ಸಂಪೂರ್ಣ ಗ್ರಹಣ ಬಿಡುವುದು ಸುಮಾರು ರಾತ್ರಿ  9.38 ರ ವೇಳೆಗೆ ಎಂದು ಖಗೋಳ ವಿಜ್ನಾನಿಗಳು ತಿಳಿಸಿದ್ದಾರೆ.


ಈ ಹಿಂದೆ ಏಷ್ಯಾದಲ್ಲಿ, ಕೊನೆಯದಾಗಿ ನೀಲಿ ಮತ್ತು ಪೂರ್ಣ ಚಂದ್ರ ಗ್ರಹಣವು ಡಿಸೆಂಬರ್ 30, 1982 ರಂದು ಸಂಭವಿಸಿತ್ತು .