ನವದೆಹಲಿ: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ, ಜಾರಿ ನಿರ್ದೇಶನಾಲಯವು ಶಿವಸೇನಾ ಸಂಸದ ಸಂಜಯ್ ರಾವುತ್ ಮತ್ತು ಅರ್ಪಿತಾ ಮುಖರ್ಜಿ (ಈಗ ವಜಾಗೊಂಡಿರುವ ಸಚಿವ ಪಾರ್ಥ ಚಟರ್ಜಿ ಅವರ ಆಪ್ತ ಸಹಾಯಕಿ) ಅವರಿಂದ ಅಪಾರ ಪ್ರಮಾಣದ ನಗದು ಮತ್ತು ಚಿನ್ನವನ್ನು ಸಂಗ್ರಹಿಸಿದೆ.


COMMERCIAL BREAK
SCROLL TO CONTINUE READING

ಮುಂಬೈನ 'ಚಾಲ್' ಮರುಅಭಿವೃದ್ಧಿಯಲ್ಲಿ ಅಕ್ರಮಗಳ ಸಂಬಂಧದ ಆರೋಪದ ಮೇಲೆ ತನಿಖಾ ಸಂಸ್ಥೆ ರಾವುತ್ ಅವರ ನಿವಾಸದಿಂದ 11.50 ಲಕ್ಷ ರೂಪಾಯಿ ಮೌಲ್ಯದ ನಗದನ್ನು ವಶಪಡಿಸಿಕೊಂಡಿದ್ದರೆ, ಪಶ್ಚಿಮ ಬಂಗಾಳ ರಾಜ್ಯ ಶಿಕ್ಷಕರ ನೇಮಕಾತಿ ಹಗರಣದ ವಿಚಾರವಾಗಿ ಅರ್ಪಿತಾ ಅವರ ಫ್ಲಾಟ್‌ನಿಂದ 50 ಕೋಟಿ ರೂಪಾಯಿ ನಗದು ಮತ್ತು ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.ಹೀಗಾಗಿ ಈಗ ತನಿಖಾ ಸಂಸ್ಥೆಗಳ ದಾಳಿಯಿಂದಾಗಿ ತಾವು ಮನೆಯಲ್ಲಿ ಎಷ್ಟು ಪ್ರಮಾಣದವರೆಗೆ ಚಿನ್ನವನ್ನು ಹಾಗೂ ನಗದನ್ನು ಇರಿಸಿಕೊಳ್ಳಬಹುದು ಎನ್ನುವ ಕೂತೂಹಲ ಎಲ್ಲರಲ್ಲಿಯೂ ಇದೆ.


ನಿಮ್ಮ ಮನೆಯಲ್ಲಿ ಇಡಬಹುದಾದ ಹಣದ ಮಿತಿಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ: 


ಜನರು ಬಯಸಿದಲ್ಲಿ ತಮ್ಮ ಮನೆಯಲ್ಲಿ ಅಪಾರ ಪ್ರಮಾಣದ ಹಣವನ್ನು ಇಟ್ಟುಕೊಳ್ಳಬಹುದು, ಆದಾಗ್ಯೂ, ವಿಚಾರಣೆ ನಡೆಸಿದಾಗ ಹಣದ ಮೂಲವನ್ನು ತಿಳಿಸಬೇಕು.ತನಿಖಾ ಸಂಸ್ಥೆಗಳು ದಾಳಿಯ ಸಮಯದಲ್ಲಿ ನಿಮ್ಮ ಮನೆಯಲ್ಲಿ 1 ಕೋಟಿ ರೂ.ಗಳನ್ನು ಕಂಡುಕೊಂಡಿವೆ ಎಂದು ಭಾವಿಸೋಣ, ಈ ಪರಿಸ್ಥಿತಿಯಲ್ಲಿ ನಿಮ್ಮ ಸ್ಥಳದಲ್ಲಿ ಪತ್ತೆಯಾದ ಹಣ/ನಗದಿನ ಮೂಲವನ್ನು ನೀವು ಅವರಿಗೆ ತಿಳಿಸಿದರೆ ಓಕೆ, ಒಂದು ವೇಳೆ ನಿಮ್ಮ ಹಣ ಹಾಗೂ ಚಿನ್ನಾಭರಣಗಳ ಪುರಾವೆಗಳನ್ನು ತೋರಿಸಲು ವಿಫಲರಾದರೆ, ಆಗ ನೀವು ತೊಂದರೆಗೆ ಸಿಲುಕಬಹುದು ಅಥವಾ ಶೇ 137 ವರೆಗೆ ದಂಡಕ್ಕೆ ಗುರಿಯಾಗಬಹುದು.


ಒಬ್ಬ ವ್ಯಕ್ತಿ ಇಡಬಹುದಾದ ಚಿನ್ನದ ಮಿತಿಯ ಬಗೆಗಿನ ಮಾಹಿತಿ ಇಲ್ಲಿದೆ: 


ಆದಾಯ ತೆರಿಗೆಯ ಮಿತಿಯ ಪ್ರಕಾರ, ವಿವಾಹಿತ ಮಹಿಳೆಯರು, ಅವಿವಾಹಿತ ಮಹಿಳೆಯರು ಮತ್ತು ಕುಟುಂಬದ ಪುರುಷ ಸದಸ್ಯರು ಇಡಬೇಕಾದ ಚಿನ್ನಾಭರಣಗಳ ಪ್ರಮಾಣವು ಈ ಕೆಳಗಿನಂತಿರುತ್ತದೆ.


1 ವಿವಾಹಿತ ಮಹಿಳೆಯರು 500 ಗ್ರಾಂ ಚಿನ್ನ
2 ಅವಿವಾಹಿತ ಮಹಿಳೆ 250 ಗ್ರಾಂ ಚಿನ್ನಾಭರಣ
3 ಕುಟುಂಬದ ಪುರುಷ ಸದಸ್ಯರು 100 ಗ್ರಾಂ ಚಿನ್ನ


ಆದಾಗ್ಯೂ ಮೇಲಿನ ಚಿನ್ನದ ಸ್ವೀಕಾರಾರ್ಹ ಪ್ರಮಾಣ ಅಥವಾ ಚಿನ್ನದ ಮಿತಿಯು ಕುಟುಂಬದ ಸದಸ್ಯರಿಗೆ ಮಾತ್ರ ಅನ್ವಯಿಸುತ್ತದೆ ಎಂದು ಗಮನಿಸಬಹುದು. ಒಂದು ವೇಳೆ ಮೇಲೆ ಅನುಮತಿಸಲಾದ ಚಿನ್ನದ ಮೀತಿಯನ್ನು ಮೀರಿದರೆ ಮತ್ತು ಇತರ ಸದಸ್ಯರಿಗೆ ಸಂಬಂಧಪಟ್ಟಿದ್ದರೆ, ಚಿನ್ನ ಅಥವಾ ಚಿನ್ನಾಭರಣವನ್ನು ತೆರಿಗೆ ಅಧಿಕಾರಿಗಳು ವಶಪಡಿಸಿಕೊಳ್ಳಬಹುದು. 


ಇದಲ್ಲದೆ, ಕೌಟುಂಬಿಕ ಪದ್ಧತಿಗಳು ಮತ್ತು ಸಂಪ್ರದಾಯಗಳಂತಹ ಅಂಶಗಳ ಆಧಾರದ ಮೇಲೆ ಹೆಚ್ಚಿನ ಪ್ರಮಾಣದ ಚಿನ್ನಕ್ಕೆ ಅನುಮತಿ ನೀಡುವ ವಿಚಾರ ಅಧಿಕಾರಿಯ ವಿವೇಚನೆಗೆ ಬಿಟ್ಟಿದ್ದು, ಮೇಲಿನ ಅನುಮತಿಸುವ ಮಿತಿಯಲ್ಲಿ ವೈಯಕ್ತಿಕ ತೆರಿಗೆದಾರರಿಗೆ ಚಿನ್ನದ ಪ್ರಮಾಣವು ಅನ್ವಯಿಸುತ್ತದೆ. ಆದಾಗ್ಯೂ, ಅನೇಕ ಕುಟುಂಬಗಳಿಂದ ಚಿನ್ನ ಅಥವಾ ಚಿನ್ನದ ಆಭರಣಗಳನ್ನು ಸಂಗ್ರಹಿಸಲು ಒಬ್ಬ ವ್ಯಕ್ತಿಯನ್ನು ಬಳಸಿದರೆ, ಮಿತಿಯು ಪ್ರತಿಯೊಬ್ಬ ತೆರಿಗೆದಾರರ ಒಟ್ಟು ಮೊತ್ತವಾಗಿರುತ್ತದೆ. ಆದರೆ ನೀವು ವೈಯಕ್ತಿಕ ತೆರಿಗೆದಾರರ (ಚಿನ್ನ ಅಥವಾ ಚಿನ್ನಾಭರಣ ಹೊಂದಿರುವವರು) ಹೆಸರನ್ನು ಹೊಂದಿರುವ ಜಂಟಿ ಲಾಕರ್‌ಗಳನ್ನು ಹೊಂದಿದ್ದರೆ, ಈ ಗೊಂದಲವನ್ನು ಸುಲಭವಾಗಿ ತಪ್ಪಿಸಬಹುದು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.