ಫೇಸ್‌ಬುಕ್ ತನ್ನ ಮೂರು ದೊಡ್ಡ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಾದ ವಾಟ್ಸಾಪ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಅನ್ನು ಸಂಯೋಜಿಸುವ ಯತ್ನಕ್ಕೆ ಕೈಹಾಕಿದೆ. ಈ ಪ್ರಕ್ರಿಯೆಯ ಭಾಗವಾಗಿ, ಕಂಪನಿಯು ತನ್ನ ಒಂದು ಪ್ಲಾಟ್‌ಫಾರ್ಮ್‌ನ ಹಲವಾರು ವೈಶಿಷ್ಟ್ಯಗಳನ್ನು ಮತ್ತೊಂದು ಪ್ಲಾಟ್ ಫಾರ್ಮ್ ನಲ್ಲಿ ಅಳವಡಿಸುವ ಕೆಲಸ ಆರಂಭಿಸಿದೆ. ಅಷ್ಟೇ ಅಲ್ಲ ಒಂದು ಆಪ್ ನಲ್ಲಿರುವ ಕೆಲವು ವೈಶಿಷ್ಟ್ಯಗಳನ್ನು ಬೇರೆ ಆಪ್ ಗಳಲ್ಲಿ ವಿಲೀನಗೊಳಿಸುವ ಪ್ರಕ್ರಿಯೇಯನ್ನೂ ಸಹ ಪ್ರಾರಂಭಿಸಿದೆ. ಇದರಿಂದ ಬಳಕೆದಾರರು ಒಂದೇ ಸಮಯದಲ್ಲಿ ಮೂರು ಪ್ಲಾಟ್ ಫಾರ್ಮ್ ಗಳಲ್ಲಿ ತಮ್ಮ ಸಂದೇಶ, ವಿಡಿಯೋ ಮತ್ತು ಫೋಟೋ ಇತ್ಯಾದಿಗಳನ್ನು ಹಂಚಿಕೊಳ್ಳಬಹುದಾಗಿದೆ. ಇದರದೇ ಒಂದು ಭಾಗವಾಗಿ ಸಂಸ್ಥೆ ನಿಮ್ಮ ವಾಟ್ಸ್ ಆಪ್ ಸ್ಟೇಟಸ್ ಅನ್ನು ಫೇಸ್ ಬುಕ್ ಸ್ಟೋರಿ ಆಗಿ ಹಂಚಿಕೊಳ್ಳಲು ಟ್ರಿಕ್ ವೊಂದನ್ನು ಕಲ್ಪಿಸಿದೆ. ಇದರಿಂದ ನಿಮ್ಮ ವಾಟ್ಸ್ ಆಪ್ ಸ್ಟೇಟಸ್ ಏಕಕಾಲಕ್ಕೆ ಫೇಸ್ ಬುಕ್ ಸ್ಟೋರಿ ಆಗಿ ಕೂಡ ಪ್ರಕಟಗೊಳ್ಳಲಿದೆ. ಇನ್ಮುಂದೆ ನೀವು ಅದನ್ನು ಪ್ರತ್ಯೇಕವಾಗಿ ಫೇಸ್ ಬುಕ್ ಪ್ರಕಟಿಸುವ ಅಗತ್ಯವಿಲ್ಲ. 


COMMERCIAL BREAK
SCROLL TO CONTINUE READING

ಇದೀಗ ಎರಡೂ ಪ್ಲಾಟ್ ಫಾರ್ಮ್ ಗಳ ಮೇಲೆ ಒಂದೇ ಸ್ಟೇಟಸ್ ಅನ್ನು ಏಕಕಾಲಕ್ಕೆ ಬಳಕೆದಾರರು ಹಂಚಿಕೊಳ್ಳಬಹುದಾಗಿದ್ದು, ಫಿಲ್ಟರ್, ಸ್ಟಿಕ್ಕರ್ ಮತ್ತು ಪಠ್ಯ ಇತ್ಯಾದಿಗಳನ್ನು ಎರಡು ಬಾರಿ ಸೇರಿಸುವ ಅಗತ್ಯವಿಲ್ಲ ಹಾಗೂ ಬಳಕೆದಾರರು ತಮ್ಮ ಸಮಯವನ್ನು ಸಹ ಉಳಿಸಬಹುದಾಗಿದೆ. ಈ ಹೊಸ ವೈಶಿಷ್ಟ್ಯ ಬಳಸಲು ಮೊದಲು  ನೀವು ನಿಮ್ಮ ಆಂಡ್ರಾಯ್ಡ್ ಅಥವಾ ಐಒಎಸ್ ಸ್ಮಾರ್ಟ್ಫೋನ್ಗಳಲ್ಲಿ ವಾಟ್ಸಾಪ್ ಮತ್ತು ಫೇಸ್ಬುಕ್ ಅಥವಾ ಫೇಸ್ಬುಕ್ ಲೈಟ್ ಇನ್ಸ್ಟಾಲ್ ಮಾಡುವ ಅಗತ್ಯವಿದೆ. ನಿಮ್ಮ ವಾಟ್ಸ್ ಆಪ್ ಸ್ಟೇಟಸ್ ಅನ್ನು ಫೇಸ್ ಬುಕ್ ಕಥೆಯಾಗಿ ಹೇಗೆ ಹೆಂಚಿಕೊಳ್ಳಬಹುದು ಎಂಬುದನ್ನು ಈ ಕೆಳಗೆ ವಿವರಿಸಲಾಗಿದೆ.


- ಮೊದಲು ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ವಾಟ್ಸ್ ಆಪ್ ಓಪನ್ ಮಾಡಿ
- ಈಗ ನಿಮ್ಮ ವಾಟ್ಸ್ ಆಪ್ ನ ಸ್ಟೇಟಸ್ ವಿಭಾಗಕ್ಕೆ ಹೋಗಿ.
- ನೀವು ಹಂಚಿಕೊಳ್ಳಲು ಬಯಸುವ ಸ್ಟೇಟಸ್ ಅಳವಡಿಸಿ.
- ಈಗ ಮೈ ಸ್ಟೇಟಸ್ ಆಪ್ಶನ್ ಗೆ ಭೇಟಿ ನೀಡಿ, ಶೇರ್ ಟು ಫೇಸ್ ಬುಕ್ ಸ್ಟೋರಿ ಕ್ಲಿಕ್ಕಿಸಿ.
- ಇದೀಗ ನಿಮ್ಮ ಫೇಸ್ ಬುಕ್ ಖಾತೆಗೆ ಭೇಟಿ ನೀಡಲು ಅನುಮತಿ ನೀಡಿ.
- ಯಾರ ಜೊತೆ ನೀವು ಈ ಸ್ಟೇಟಸ್ ಹಂಚಿಕೊಳ್ಳಬಯಸುವಿರೋ ಅವರನ್ನು ಆಯ್ಕೆ ಮಾಡಿ, ಶೇರ್ ನೌ ಮೇಲೆ ಕ್ಲಿಕ್ಕಿಸಿ.
- ಇದರಿಂದ ನಿಮ್ಮ ವಾಟ್ಸ್ ಆಪ್ ಸ್ಟೇಟಸ್, ನಿಮ್ಮ ಫೇಸ್ ಕಥೆಯಾಗಿ ಪ್ರಕಟಗೊಳ್ಳಲಿದೆ.


ವಾಟ್ಸಾಪ್ ಈಗಾಗಲೇ ಡಿಸೆಂಬರ್ 31 ರಿಂದ ವಿಂಡೋಸ್ ಫೋನ್‌ಗಳಿಗೆ ತನ್ನ ಸಪೋರ್ಟ್ ಸ್ಥಗಿತಗೊಳಿಸಿದ್ದು, ವಿಂಡೋಸ್ ಫೋನ್ ಗಾಗಿ ತನ್ನ ಆಪ್ ಅಭಿವೃದ್ಧಿಯನ್ನು ಸಹ ನಿಲ್ಲಿಸಿದೆ. ಫೆಬ್ರವರಿ 2020 ರಿಂದ ಆಂಡ್ರಾಯ್ಡ್ 2.3.7 ಅಥವಾ ಅದಕ್ಕಿಂತ ಹಳೆಯದಾದ ಆಂಡ್ರಾಯ್ಡ್ ಫೋನ್‌ಗಳಿಗೆ ತನ್ನ ಸಪೋರ್ಟ್ ಸ್ಥಗಿತಗೊಳಿಸುವುದಾಗಿ ಹೇಳಿರುವ ಸಂಸ್ಥೆ ಐಒಎಸ್ 8 ಮತ್ತು ಅದಕ್ಕಿಂತ ಹಳೆಯ ಆವೃತ್ತಿಯ ಆಪಲ್ ಐಫೋನ್‌ಗಳಿಗೂ ಫೆಬ್ರವರಿಯಲ್ಲಿ ಸಪೋರ್ಟ್ ಹಿಂಪಡೆಯಲಾಗುವುದು ಎಂದೂ ಸಹ ಹೇಳಿದೆ.