ತ್ರಿವರ್ಣ ಧ್ವಜದ ಬಗ್ಗೆ ಕಮಲ್ ಹಾಸನ್ ಹೇಳಿದ್ದೇನು ಗೊತ್ತೇ ?
ಚೆನ್ನೈ: ಕಮಲ್ ಹಾಸನ್ ರಾಜಕೀಯ ಪಕ್ಷ ' ಮಕ್ಕಳ್ ನೀಧಿ ಮಯ್ಯಂಗೆ ಚಾಲನೆ ನೀಡಿದ ನಂತರ ಅವರು ಬಿಜೆಪಿ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇದಕ್ಕೆ ಭಾರತದ ಧ್ವಜದ ಉದಾಹರಣೆ ನೀಡುತ್ತಾ ಕೇಸರಿ ಬಣ್ಣವು ತ್ರಿವರ್ಣ ಧ್ವಜದ ಮೂರು ಬಣ್ಣಗಳಲ್ಲಿ ಒಂದಾಗಿದೆ. ಆದರೆ ಅದು ಇಡಿ ಧ್ವಜವನ್ನು ಆವರಿಸಿಕೊಳ್ಳಬಾರದು ಎಂದು ತಿಳಿಸಿದರು.
ಈ ಕುರಿತಾಗಿ ತಮಿಳು ಮ್ಯಾಗಜಿನ್ ಆನಂದ ವಿಕತನ ದಲ್ಲಿ ಪ್ರಸ್ತಾಪಿಸಿರುವ ಅವರು "ತ್ರಿವರ್ಣ ಧ್ವಜದಲ್ಲಿರುವ ಕೇಸರಿಯು ತ್ಯಾಗದ ಸಂಕೇತವಾಗಿದೆ ಹಾಗೆಂದ ಮಾತ್ರಕ್ಕೆ, ನಾನು ಅದಕ್ಕೆ ಅಗೌರವ ತೋರುತ್ತೇನೆ ಎಂದಲ್ಲ ಎಂದು ತಿಳಿಸಿದರು. ಮಕ್ಕಳ್ ನೀಧಿ ಮಯ್ಯಂ ಪಕ್ಷಕ್ಕೆ ಚಾಲನೆಯ ಸಂದರ್ಭದಲ್ಲಿ ಅನಾವರಣಗೊಳಿಸಿದ ಪಕ್ಷದ ಧ್ವಜವು ದ್ರಾವಿಡ್ ಸಿದ್ದಾಂತ ಮತ್ತು ಅಸ್ಮಿತೆಯನ್ನು ಪ್ರತಿನಿಧಿಸುತ್ತದೆ. ಆದ್ದರಿಂದ ಎಲ್ಲರಿಗೂ ಕೂಡ ಗೌರವ ಮತ್ತು ಅವಕಾಶ ನೀಡುವುದು ಅವಶ್ಯಕ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಆ ಮೂಲಕ ಕಮಲ್ ಹಾಸನ್ ತಮ್ಮ ಬಣ್ಣ ಕೇಸರಿಯಲ್ಲ ಎನ್ನುವುದನ್ನು ಮತ್ತೊಮ್ಮೆ ಸಾಬಿತುಪಡಿಸಿದ್ದಾರೆ.