ದಿನಕ್ಕೆ 93 ರೂಪಾಯಿ ಗಳಿಸಲು ಲಾಲು ಮಾಡಿದ ಕಾರ್ಯವೇನು ಗೊತ್ತಾ?
ರಾಂಚಿ: ಮೇವು ಹಗರಣದಲ್ಲಿ ಭಾಗಿಯಾದ ಕಾರಣಕ್ಕೆ ಮೂರು ವರ್ಷಗಳ ಕಾಲ ಜೈಲುವಾಸ ಮತ್ತು ಐದು ಲಕ್ಷ ರೂಪಾಯಿಗಳ ದಂಡಕ್ಕೆ ಗುರಿಯಾಗಿರುವ ಆರ್ ಜೆ ಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಇಲ್ಲಿನ ಬಿರ್ಸಾ ಮುಂಡಾ ಜೈಲ್ ನಲ್ಲಿ ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ.
ಪ್ರಭಾತ್ ಖಬರ್ ಪ್ರಕಾರ ಲಾಲು ಜೈಲಿನಲ್ಲಿ ಸಮಯವನ್ನು ಕಳೆಯಲು ಅವರಿಗೆ ತೋಟಗಾರಿಕೆ ನಿರ್ವಹಣೆಯ ಕೆಲಸವನ್ನು ನಿಯೋಜಿಸಲಾಗಿದೆ. ಅದಕ್ಕೆ ಪ್ರತಿಯಾಗಿ ಅವರಿಗೆ 93 ರೂಪಾಯಿಗಳ ದಿನಗೂಲಿಯನ್ನು ನೀಡಲಾಗುತ್ತಿದೆ ಎಂದು ಅದು ವರದಿ ಮಾಡಿದೆ.
ತಮ್ಮ ಶಿಕ್ಷೆಯ ವಿಚಾರವಾಗಿ ಪ್ರತಿಕ್ರಿಯಿಸಿ ಟ್ವಿಟ್ಟರ್ ನಲ್ಲಿ ಹಿಂದಿಯಲ್ಲಿ ಬರೆದಿರುವ ಪತ್ರವನ್ನು ಹಂಚಿಕೊಂಡಿರುವ ಲಾಲು ಪ್ರಸಾದ್ ಯಾದವ್ ಈ ಶಿಕ್ಷೆ ಎಂದಿಗೂ ಕೂಡಾ ನನ್ನನ್ನು ಹೆದರುವಂತೆ ಮಾಡಿಲ್ಲ,ಮತ್ತು ನಾನೆಂದಿಗೂ ಕೂಡಾ ಜ್ಯಾತ್ಯಾತೀತ,ದಲಿತ ಮತ್ತು ಹಿಂದುಳಿದ ವರ್ಗಗಳ ಹಕ್ಕುಗಳ ವಿಚಾರದಲ್ಲಿ ರಾಜಿ ಮಾಡಿಕೊಂಡಿಲ್ಲ ಎಂದಿರುವ ಲಾಲು, ಇದೇ ಸಂದರ್ಭದಲ್ಲಿ ಬಿಜೆಪಿ, ಆರ್ ಎಸ್ ಎಸ್ ಮತ್ತು ಮನುವಾದಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.