ನವದೆಹಲಿ: 2015 ರಲ್ಲಿ ದೇಶದ ಪ್ರತಿಷ್ಟಿತ ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ಟಾಪರ್ ಆಗಿದ್ದ ಟಿನಾ ದಾಬಿ ಮತ್ತು ಅಥರ್ ಅಮೀರ್ ಉಲ್ ಶಫಿ ಈಗ ಇಬ್ಬರು ಕಾಶ್ಮೀರದ ಪಹಲ್ ಘಾಂ ನಲ್ಲಿ  ಪ್ರೇಮ ವಿವಾಹವಾಗಿದ್ದಾರೆ.



COMMERCIAL BREAK
SCROLL TO CONTINUE READING

ಈ ಐಎಎಸ್ ಜೋಡಿಗಳ ಪ್ರೇಮ ವಿವಾಹವಿಗ ದೇಶದ ಗಮನ ಸೆಳೆದಿದೆ. ಈ ಜೋಡಿಗೆ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ರಾಹುಲ್ ಗಾಂಧಿ ಕೂಡಾ ಹಾರಿಸಿದ್ದಾರೆ.ಈ ಕುರಿತಾಗಿ ಟ್ವೀಟ್ ಮಾಡಿರುವ ಅವರು" ಧನ್ಯವಾದಗಳು 2015 ರ ಐಎಎಸ್ ಟಾಪರ್ ಆಗಿರುವ ಟಿನಾ ದಾಬಿ ಮತ್ತು ಅಥರ್ ಉಲ್ ಶಫಿ ಯವರಿಗೆ! ನಿಮ್ಮ ಪ್ರೀತಿಯೂ ಪ್ರತಿ ಶಕ್ತಿಯಿಂದ ಶಕ್ತಿಗೆ ಬೆಳೆಯಲಿ, ಅಸಹಿಷ್ಣುತೆ ಮತ್ತು ಕೋಮು ದ್ವೇಷ ಹೆಚ್ಚುತ್ತಿರುವ ಈ ಕಾಲಘಟ್ಟದಲ್ಲಿ  ಎಲ್ಲ ಭಾರತೀಯರಿಗೆ ನೀವು ಸ್ಪೂರ್ಥಿದಾಯಕವಾಗಲಿ,ದೇವರು ಒಳ್ಳೆಯದನ್ನು ಮಾಡಲಿ" ಎಂದು ಶುಭ ಹಾರೈಸಿದ್ದಾರೆ. 



ಈ ಹಿಂದೆ ಅಖಿಲ ಭಾರತೀಯ ಹಿಂದು ಮಹಾಸಭಾ ಈ ಜೋಡಿಯನ್ನು ಲವ್ ಜಿಹಾದ್ ಎಂದು ಹೇಳಿತ್ತು,ಈ ಕುರಿತಾಗಿ ಟೀನಾ ಪೋಷಕರಿಗೆ ಪತ್ರ ಬರೆದು  ಮುಸ್ಲಿಮ ವ್ಯಕ್ತಿಯನ್ನು ಮದುವೆಯಾಗುತ್ತಿರುವುದು ದುರದೃಷ್ಟಕರ ಎಂದು ತಿಳಿಸಿತ್ತು.