Ram Mandir verdict: ರಾಮ ಮಂದಿರ- ಬಾಬ್ರಿ ವಿವಾದದ ಕುರಿತು ಮಹತ್ವದ ತೀರ್ಪು ನೀಡಿದ ಆ 5 ನ್ಯಾಯಾಧೀಶರು ಯಾರು ಗೊತ್ತಾ?
Pran Pratishtha Invitation: ಪ್ರಸ್ತುತ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಅವರಲ್ಲದೆ, ಈ ಸಮಿತಿಯಲ್ಲಿ ಆಗಿನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಮತ್ತು ಮಾಜಿ ಮುಖ್ಯ ನ್ಯಾಯಮೂರ್ತಿ ಎಸ್‌ಎ ಬೋಬ್ಡೆ, ಮಾಜಿ ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್ ಮತ್ತು ಎಸ್ ಅಬ್ದುಲ್ ನಜೀರ್ ಇದ್ದರು. ಆಗ ರಂಜನ್ ಗೊಗೊಯ್ ಸಿಜೆಐ ಹುದ್ದೆಯಲ್ಲಿದ್ದರು.
Pran Pratishtha Invitation: ಅಯೋಧ್ಯೆಯ ರಾಮಮಂದಿರದ ಪ್ರಾಣ ಪ್ರತಿಷ್ಠೆಯ ದಿನಾಂಕ ಬಹಳ ಹತ್ತಿರದಲ್ಲಿದೆ. ಈ ಕಾರ್ಯಕ್ರಮಕ್ಕಾಗಿ ಇನ್ನೂ ನಿರಂತರವಾಗಿ ಆಹ್ವಾನಗಳನ್ನು ಕಳುಹಿಸಲಾಗುತ್ತಿದೆ. ಈ ಸಂದರ್ಭದಲ್ಲಿ ರಾಮಮಂದಿರ-ಬಾಬ್ರಿ ವಿವಾದದ ತೀರ್ಪು ನೀಡಿದ ಐವರು ನ್ಯಾಯಾಧೀಶರ ಬಗ್ಗೆ ನಿಮಗೆ ಮಾಹಿತಿಯನ್ನು ನೀಡಲಿದ್ದೇವೆ.
ಇದನ್ನೂ ಓದಿ: ಶನಿಪ್ರಿಯ ಶನಿವಾರದಂದೇ ಶುಭಯೋಗ ರಚನೆ: ಇಂದು ಈ ರಾಶಿಯವರು ಕೈಯಿಟ್ಟ ಪ್ರತೀ ಕೆಲಸದಲ್ಲೂ ಅಗಾಧ ಯಶಸ್ಸು
ನವೆಂಬರ್ 9, 2019 ರಂದು ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಸಮಿತಿಯು ವಿವಾದಿತ ರಚನೆಯ ಬಗ್ಗೆ ನಿರ್ಧಾರವನ್ನು ಪ್ರಕಟಿಸಿತು. ಪ್ರಸ್ತುತ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಅವರಲ್ಲದೆ, ಈ ಸಮಿತಿಯಲ್ಲಿ ಆಗಿನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಮತ್ತು ಮಾಜಿ ಮುಖ್ಯ ನ್ಯಾಯಮೂರ್ತಿ ಎಸ್‌ಎ ಬೋಬ್ಡೆ, ಮಾಜಿ ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್ ಮತ್ತು ಎಸ್ ಅಬ್ದುಲ್ ನಜೀರ್ ಇದ್ದರು. ಆಗ ರಂಜನ್ ಗೊಗೊಯ್ ಸಿಜೆಐ ಹುದ್ದೆಯಲ್ಲಿದ್ದರು.
ರಂಜನ್ ಗೊಗೊಯ್
ರಂಜನ್ ಗೊಗೊಯ್ ಅವರು, ತೀರ್ಪಿನ ಸಮಯದಲ್ಲಿ ಸುಪ್ರೀಂ ಕೋರ್ಟ್’ನ ಮುಖ್ಯ ನ್ಯಾಯಮೂರ್ತಿಯಾಗಿದ್ದರು. ನವೆಂಬರ್ 17, 2019 ರಂದು ಸಿಜೆಐ ಹುದ್ದೆಯಿಂದ ನಿವೃತ್ತರಾದರು. 4 ತಿಂಗಳ ನಂತರ ರಾಷ್ಟ್ರಪತಿಗಳು ಅವರನ್ನು ರಾಜ್ಯಸಭಾ ಸಂಸದರಾಗಿ ನಾಮನಿರ್ದೇಶನ ಮಾಡಿದರು.
ಡಿವೈ ಚಂದ್ರಚೂಡ್
ಡಿವೈ ಚಂದ್ರಚೂಡ್ ಅವರು, ಸುದೀರ್ಘ ಕಾಲ ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ ನ್ಯಾಯಮೂರ್ತಿ ವೈವಿ ಚಂದ್ರಚೂಡ್ ಅವರ ಪುತ್ರ. ಪ್ರಸ್ತುತ ಸುಪ್ರೀಂ ಕೋರ್ಟ್’ನ ಸಿಜೆಐ ಆಗಿದ್ದಾರೆ.
ಎಸ್ ಎ ಬೋಬ್ಡೆ
ನ್ಯಾಯಮೂರ್ತಿ ರಂಜನ್ ಗೊಗೊಯ್ ನಂತರ ಭಾರತದ 47 ನೇ ಮುಖ್ಯ ನ್ಯಾಯಮೂರ್ತಿಯಾದ ಎಸ್ ಎ ಬೋಬ್ಡೆ, 23 ಏಪ್ರಿಲ್ 2021 ರಂದು ನಿವೃತ್ತರಾದರು. ನಿವೃತ್ತಿಯ ನಂತರ, ನಾಗ್ಪುರದ ಮಹಾರಾಷ್ಟ್ರ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ಕುಲಪತಿಯಾದರು.
ಎಸ್. ಅಬ್ದುಲ್ ನಜೀರ್
ನೋಟು ಅಮಾನ್ಯೀಕರಣವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ತೀರ್ಪು ನೀಡಿದ ನ್ಯಾಯಮೂರ್ತಿಗಳ ಪೀಠದಲ್ಲಿ ಎಸ್. ಅಬ್ದುಲ್ ನಜೀರ್ ಕೂಡ ಇದ್ದರು. ಜನವರಿ 2023ರಲ್ಲಿ ನಿವೃತ್ತರಾದ ಅವರು, ಒಂದು ತಿಂಗಳ ನಂತರ ಆಂಧ್ರಪ್ರದೇಶದ ರಾಜ್ಯಪಾಲರನ್ನಾಗಿ ಮಾಡಲಾಯಿತು.
ಅಶೋಕ್ ಭೂಷಣ್
ಜುಲೈ 2021 ರಲ್ಲಿ ನಿವೃತ್ತರಾದ ಅಶೋಕ್ ಭೂಷಣ್, ಕೇವಲ ನಾಲ್ಕು ತಿಂಗಳ ನಂತರ ಅಂದರೆ ನವೆಂಬರ್’ನಲ್ಲಿ ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿಯ ಅಧ್ಯಕ್ಷರನ್ನಾಗಿ ಮಾಡಲಾಯಿತು.
ಜನವರಿ 22 ರಂದು ನಡೆಯುವ ಪ್ರಾಣ ಪ್ರತಿಷ್ಠಾ ಸಮಾರಂಭಕ್ಕೆ ಆ ಸ್ಥಳದಲ್ಲಿ ರಾಮಮಂದಿರ ನಿರ್ಮಾಣಕ್ಕೆ ದಾರಿ ಮಾಡಿಕೊಟ್ಟ ಸಂವಿಧಾನ ಪೀಠದ ಭಾಗವಾಗಿದ್ದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಸೇರಿದಂತೆ ಐವರು ಸುಪ್ರೀಂ ಕೋರ್ಟ್ ನ್ಯಾಯಾಧೀಶರನ್ನು ರಾಜ್ಯ ಅತಿಥಿಗಳಾಗಿ ಆಹ್ವಾನಿಸಲಾಗಿದೆ
ಇದನ್ನೂ ಓದಿ: BBK 10: ಈ ಸ್ಪರ್ಧಿಗೆ ಬಿತ್ತು ಬರೋಬ್ಬರಿ 72 ಲಕ್ಷ ವೋಟ್! ಈ ಜನಮೆಚ್ಚಿದ ‘ಮಣ್ಣಿನ ಮಗನ’ ಪಾಲಾಗುತ್ತಾ ‘ಬಿಗ್ ಬಾಸ್ ಕಿರೀಟ’!
ಈ ಐವರು ನ್ಯಾಯಾಧೀಶರು ನವೆಂಬರ್ 9, 2019 ರಂದು ಈ ಐತಿಹಾಸಿಕ ತೀರ್ಪು ನೀಡಿದ ಪೀಠದ ಭಾಗವಾಗಿದ್ದರು. ಮಾಜಿ ಮುಖ್ಯ ನ್ಯಾಯಮೂರ್ತಿಗಳು, ಇತರ ನ್ಯಾಯಾಧೀಶರು ಮತ್ತು ಉನ್ನತ ವಕೀಲರು ಮತ್ತು ರಾಮ್ ಲಲ್ಲಾ ಪರ ವಕಾಲತ್ತು ಮಾಡಿದ್ದ ಕೆ ಪರಾಸರನ್ ಸೇರಿದಂತೆ 50 ಕ್ಕೂ ಹೆಚ್ಚು ನ್ಯಾಯಶಾಸ್ತ್ರಜ್ಞರನ್ನು ಸಮಾರಂಭಕ್ಕೆ ಉತ್ತರ ಪ್ರದೇಶ ಸರ್ಕಾರ ಆಹ್ವಾನಿಸಿದೆ. ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮತ್ತು ಮಾಜಿ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಅವರಿಗೂ ಆಹ್ವಾನ ನೀಡಲಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.