ನವದೆಹಲಿ: ಸಮಾಜವಾದಿ ಪಕ್ಷದ ಹಿರಿಯ ನಾಯಕ ಅಜಂ ಖಾನ್ ಪದ್ಮವಾತ್ ಚಿತ್ರದಲ್ಲಿನ ಖಿಲ್ಜಿ ಇದ್ದ ಹಾಗೆ ಎಂದು ನಟಿ ಮತ್ತು ರಾಜಕಾರಣಿ ಜಯಪ್ರದಾ ಕಿಡಿಕಾರಿದ್ದಾರೆ.



COMMERCIAL BREAK
SCROLL TO CONTINUE READING

ಎಎನ್ಐ ಸುದ್ದಿ ಸಂಸ್ಥೆಗೆ ಪ್ರತಿಕ್ರಯಿಸಿರುವ ಜಯಪ್ರದಾ "ಪದ್ಮಾವತ್ ಚಿತ್ರದಲ್ಲಿನ ಖಿಲ್ಜಿ ಪಾತ್ರವನ್ನು ವಿಕ್ಷಿಸುತ್ತಿರುವಾಗ ನನಗೆ ಅಜಂ ಖಾನ್ ರ ನೆನಪು ಬಂದಿತು, ಕಾರಣ ಅವರು 2009 ರಲ್ಲಿ  ಉತ್ತರಪ್ರದೇಶದ ರಾಮಪುರ ಕ್ಷೇತ್ರಕ್ಕೆ ಸ್ಪರ್ಧಿಸಿದ್ದಾಗ ತಮಗೆ ಸಾಕಷ್ಟು ಕಿರುಕುಳ ನೀಡಿದ್ದಲ್ಲದೆ ತಮ್ಮ ವ್ಯಕ್ತಿತ್ವವನ್ನು ಹಿನಗೋಳಿಸುವ ಪ್ರಯತ್ನ ಮಾಡಿದ್ದರು ಎಂದು ತಿಳಿಸಿದರು. 


ಈ ಹಿಂದೆ ತಿರುಚಿದ ಫೋಟೋಗಳನ್ನು ಹೊಂದಿರುವ ಸಿಡಿಗಳನ್ನು ಸಹಿತ ಅಜಂ ಖಾನ್ ವಿತರಿಸಿದ್ದರು ಎಂದು ಜಯಪ್ರದಾ ಆರೋಪಿಸಿದರು.