ನವದೆಹಲಿ: ಹರಿಯಾಣದ ರೋಹ್ಟಕ್‌ನ ಸ್ನಾತಕೋತ್ತರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಎಂಡಿ ಕೋರ್ಸ್ ಓದುತ್ತಿದ್ದ ಕರ್ನಾಟಕದ 30 ವರ್ಷದ ವೈದ್ಯನೊಬ್ಬ ಆಸ್ಪತ್ರೆ ಕ್ಯಾಂಪಸ್‌ನ ಹಾಸ್ಟೆಲ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿಯನ್ನು ಧಾರವಾಡದ  ಓಂಕಾರ್ ಎಂದು ಗುರುತಿಸಲಾಗಿದ್ದು. ಗುರುವಾರ ರಾತ್ರಿ ತನ್ನ ಹಾಸ್ಟೆಲ್‌ನಲ್ಲಿ ನೇಣು ಹಾಕಿಕೊಂಡಿದ್ದಾನೆ ಎಂದು ರೋಹ್ಟಕ್ ಪೊಲೀಸ್ ಠಾಣೆ ಎಸ್‌ಎಚ್‌ಒ ಇನ್ಸ್‌ಪೆಕ್ಟರ್ ಕೈಲಾಶ್ ಚಂದರ್ ತಿಳಿಸಿದ್ದಾರೆ. ಓಂಕರ್ ಅವರು ಎಂಡಿ ವ್ಯಾಸಂಗ ಮಾಡುತ್ತಿದ್ದಾರೆ ಮತ್ತು ಇಲಾಖೆಯ ಮುಖ್ಯಸ್ಥರಿಂದ ಅವರು ಎದುರಿಸಿದ ಕಿರುಕುಳದಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಚಂದರ್ ಹೇಳಿದ್ದಾರೆ.


"ಅವರು ಯಾವುದೇ ಆತ್ಮಹತ್ಯೆ ಪತ್ರವನ್ನು ಬರೆಯದೆ ಇದ್ದರೂ, ಓಂಕಾರ್ ಅವರ ಸಹೋದ್ಯೋಗಿಗಳು ಮತ್ತು ಕುಟುಂಬ ಸದಸ್ಯರು ಅವರರಿಗೆ ವಿಭಾಗದ ಮುಖ್ಯಸ್ಥರು ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಿದ್ದಾರೆ. ತನ್ನ ಸಹೋದರಿಯ ಮದುವೆಗೆ ಹಾಜರಾಗಲು ಅವಳು ರಜೆ ನೀಡಲಿಲ್ಲ ಎಂಬ ಆರೋಪವೂ ಕೇಳಿ ಬಂದಿದೆ ಎಂದು ಎಸ್ ಎಚ್ ಓ ಹೇಳಿದ್ದಾರೆ.


"ನಾವು ವೈದ್ಯರನ್ನು ಸೆಕ್ಷನ್ 306 ಐಪಿಸಿ ಅಡಿಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದೇವೆ. ಆದರೆ ಇಲ್ಲಿಯವರೆಗೆ ಯಾವುದೇ ಬಂಧನವಾಗಿಲ್ಲ ಇನ್ನು ಹೆಚ್ಚಿನ ತನಿಖೆ ನಡೆಯುತ್ತಿದೆ" ಎಂದು ಅವರು ಹೇಳಿದರು. ಓಂಕರ್ ಸಾವಿನ ನಂತರ ಅವರ ಕೆಲವು ಸಹೋದ್ಯೋಗಿಗಳು ವೈದ್ಯರನ್ನು ತಕ್ಷಣ ಬಂಧಿಸುವಂತೆ ಒತ್ತಾಯಿಸಿ ಪ್ರತಿಭಟಿಸಿದರು ಎನ್ನಲಾಗಿದೆ.