ನವದೆಹಲಿ: ದೆಹಲಿಯ ವಾಯು ಮಾಲಿನ್ಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಕೆಲವು ದಿನಗಳ ಮಟ್ಟಿಗೆ ರಾಷ್ಟ್ರ ರಾಜಧಾನಿ ದೆಹಲಿಯಿಂದ ದೂರ ಇರುವಂತೆ ಸಲಹೆ ನೀಡಿದ್ದಾರೆ ಎಂದು ತಿಳಿದುಬಂದಿದೆ.


COMMERCIAL BREAK
SCROLL TO CONTINUE READING

ವೈದ್ಯರ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿರುವ ಸೋನಿಯಾ ಗಾಂಧಿ (Sonia Gandhi) ಅವರು ಕೆಲವು ದಿನಗಳ ಮಟ್ಟಿಗೆ ಗೋವಾ ಅಥವಾ ಚೆನ್ನೈನಲ್ಲಿ ಉಳಿಯಬಹುದು. ಶುಕ್ರವಾರವೇ ದೆಹಲಿಯಿಂದ ತೆರಳಬಹುದು. ಸೋನಿಯಾ ಗಾಂಧಿ ಅವರೊಂದಿಗೆ ಮಕ್ಕಳಾದ ರಾಹುಲ್ ಗಾಂಧಿ ಅಥವಾ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ದೆಹಲಿಯಿಂದ ಹೋಗುವ ಸಾಧ್ಯತೆ ಇದೆ ಎಂದು ಕಾಂಗ್ರೆಸ್ ಪಕ್ಷದ  ಮೂಲಗಳು ತಿಳಿಸಿವೆ.


ಗಂಭೀರ ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ಸೋನಿಯಾ ಗಾಂಧಿ ಅವರು ವಿದೇಶದಲ್ಲೂ ಚಿಕಿತ್ಸೆ ಪಡೆದಿದ್ದಾರೆ. ಇತ್ತಿಚೆಗೆ ದೆಹಲಿಯಲ್ಲೂ ಆಸ್ಪತ್ರೆಗೆ ದಾಖಲಾಗಿದ್ದರು.‌ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ನಂತರ ವೈದ್ಯಕೀಯ ಮೇಲ್ವಿಚಾರಣೆಯಲ್ಲಿ ಇದ್ದರು. ಈಗ ದೆಹಲಿಯ ವಾಯು ಮಾಲಿನ್ಯ (Air Pollution) ತೀವ್ರವಾಗಿ ಹೆಚ್ಚಾಗುತ್ತಿರುವುದರಿಂದ ಹೃದಯ ಮತ್ತು ಶ್ವಾಶಕೋಶದ ಸಮಸ್ಯೆಯಿಂದ ಬಳಲುತ್ತಿರುವ ಸೋನಿಯಾ ಗಾಂಧಿ ಅವರಿಗೆ ಮೇಲ್ವಿಚಾರಣೆ ನಡೆಸುತ್ತಿರುವ ವೈದ್ಯರು ಕೆಲ ದಿನಗಳ ಮಟ್ಟಿಗೆ ದೆಹಲಿಯಿಂದ ಹೊರಗಡೆ ಇರಿ ಎಂಬ ಸಲಹೆ ನೀಡಿದ್ದಾರೆ ಎನ್ನಲಾಗಿದೆ.


ಕರೋನಾ ಕಾಳಗ: ಈ ನಗರದಲ್ಲಿ ರಾತ್ರಿ ಕರ್ಫ್ಯೂ ಜಾರಿ, ಮನೆಯಲ್ಲಿಯೇ ಇರುವಂತೆ ನಾಗರೀಕರಿಗೆ ಮನವಿ


ದೆಹಲಿಯಲ್ಲಿ ವಿಪರೀತವಾಗುತ್ತಿರುವ ವಾಯುಮಾಲಿನ್ಯದಿಂದಾಗಿ ಸೋನಿಯಾ ಗಾಂಧಿ ಅವರ ಎದೆ ಸೋಂಕು ಮತ್ತು ಆಸ್ತಮಾ ಹೆಚ್ಚಾಗಿದೆ ಎನ್ನುವ ಕಾರಣಕ್ಕೆ ವೈದ್ಯರು 'ದೆಹಲಿಯಿಂದ ಹೊರಗೋಗುವ' ಸಲಹೆ ನೀಡಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.


ದೆಹಲಿಯಲ್ಲಿ ತೀವ್ರ ಅಪಾಯದ ಮಟ್ಟ ತಲುಪಿದ ವಾಯುಮಾಲಿನ್ಯ


ಕಾಂಗ್ರೆಸ್ ಕಾರ್ಯವೈಖರಿಯ ಬಗ್ಗೆ ಪಕ್ಷದೊಳಗೆ ಸ್ವ-ನಿರ್ಣಯಕ್ಕಾಗಿ ಬೇಡಿಕೆ
ಬಿಹಾರ ಚುನಾವಣೆಯಲ್ಲಿ ಕಾಂಗ್ರೆಸ್ನ ಕೆಟ್ಟ ಪ್ರದರ್ಶನಕ್ಕೆ ಸಂಬಂಧಿಸಿದಂತೆ ಪಕ್ಷದೊಳಗಿನಿಂದ ಸ್ವ-ನಿರ್ಣಯದ ಬೇಡಿಕೆ ಉದ್ಭವಿಸುತ್ತಿರುವ ಸಮಯದಲ್ಲಿ ಸೋನಿಯಾ ಗಾಂಧಿ ದೆಹಲಿಯಿಂದ ಹೊರಟಿದ್ದಾರೆ.


ಭೀತಿ ಮತ್ತು ಅರಾಜಕತೆ ವಿರುದ್ಧ ಹೋರಾಡಲು ಜನರಲ್ಲಿ ಸೋನಿಯಾ ಗಾಂಧಿ ಮನವಿ


ಕಾಂಗ್ರೆಸ್ ಅಧ್ಯಕ್ಷರನ್ನು ಜುಲೈ 30ರಂದು ಸರ್ ಗಂಗಾರಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಂದ ಅವರನ್ನು ಕೆಲವು ದಿನಗಳ ನಂತರ ಬಿಡುಗಡೆ ಮಾಡಲಾಯಿತು. ನಂತರ ಸೆಪ್ಟೆಂಬರ್ 12ರಂದು ಅವರು ನಿಯಮಿತ ವೈದ್ಯಕೀಯ ಪರೀಕ್ಷೆಗಾಗಿ ವಿದೇಶಕ್ಕೆ ಹೋದರು. ಅವರೊಂದಿಗೆ ಮಗ ರಾಹುಲ್ ಗಾಂಧಿ ಇದ್ದರು. ಈ ಕಾರಣದಿಂದಾಗಿ ಇಬ್ಬರೂ ಸಂಸತ್ತಿನ ಮಾನ್ಸೂನ್ ಅಧಿವೇಶನಕ್ಕೆ ಹಾಜರಾಗಲು ಸಾಧ್ಯವಾಗಿರಲಿಲ್ಲ.