Doddaballapur Girl: ಯೋಗದ ವಿವಿಧ ಬಂಗಿಗಳನ್ನ ನೀರು ಕುಡಿದಂತೆ ಪ್ರದರ್ಶನ ಮಾಡ್ತಿರೋ ಈ ಬಾಲಕಿಯ ಹೆಸರು ಜಾನವಿ ... ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದ ಈ ಬಾಲಕಿ ಯೋಗ ಕ್ಷೇತ್ರದಲ್ಲಿ ದೇಶ ವಿದೇಶಗಳಲ್ಲಿ ಹಲವು ಸಾಧನೆಗೈದಿದ್ದಾಳೆ... ಅಂದಹಾಗೆ ದೊಡ್ಡಬಳ್ಳಾಪುರ ಯೋಗಪಟುಗಳ ತವರೂರಾಗಿದ್ದು, ನಗರದಲ್ಲಿ ಹಲವು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಯೋಗಪಟುಗಳಿದ್ದಾರೆ. 


COMMERCIAL BREAK
SCROLL TO CONTINUE READING

ಇದೀಗ 10 ನೇ ತರಗತಿ ಮುಗಿಸಿ ಮೊದಲ ಪಿಯುಸಿಗೆ ಕಾಲಿಟ್ಟಿರುವ ಈ  ಬಾಲಕಿ ಯೋಗ ಕ್ಷೇತ್ರದಲ್ಲಿ ಸಾಧನೆಗೈದಿದ್ದಾಳೆ. ಇನ್ನೂ ನಗರದ ಶಾಂತಿನಗರದ ನಿವಾಸಿಗಳಾದ ರವಿಕುಮಾರ್ ಮತ್ತು ರತ್ನ ದಂಪತಿ ಮಗಳಾದ  ಜಾನವಿ  ಅಂತರಾಷ್ಟ್ರೀಯ ಯೋಗ ಸ್ವರ್ಥೆಯಲ್ಲಿ ಭಾಗವಹಿಸಿ ಅತ್ಯುನ್ನತ ಸಾಧನೆ ಮಾಡಿದ್ದಾಳೆ. 2019ರ ಸೆಪ್ಟಂಬರ್ ನಲ್ಲಿ ದಕ್ಷಿಣಕೊರಿಯದಲ್ಲಿ  ನಡೆದ  9ನೇ ಏಷ್ಯನ್ ಯೋಗ ಸ್ಪೋರ್ಟ್ಸ್ ಚಾಂಪಿಯನ್ ಶಿಪ್ ನಲ್ಲಿ  ಭಾಗವಹಿಸಿ ಬೆಳ್ಳಿ ಪದಕ ಪಡೆದು ಸಾಧನೆ ಮಾಡಿದ್ದಾಳೆ. ಸಾಂಪ್ರದಾಯಿಕ ಯೋಗದಲ್ಲಿ ಬೆಳ್ಳಿ ರಿದಮಿಕ್ ಯೋಗದಲ್ಲಿ  ಕಂಚಿನ ಸಾಧನೆ ಮಾಡಿದ್ದಾಳೆ. ಅಲ್ಲದೆ ಮೈಸೂರು  ದಸರಾದಲ್ಲಿ ಯೋಗ ಪ್ರದರ್ಶನ ಮಾಡಿರುವ ಜಾನವಿ ರಾಜ್ಯ ಮಟ್ಟದ ಯೋಗ ಸ್ವರ್ಥೆಯಲ್ಲಿ  ಭಾಗವಹಿಸಿ  ಹಲವು  ಪದಕಗಳನ್ನ ಮುಡಿಗೇರಿಸಕೊಂಡಿದ್ದು ಮತ್ತೆ ಕ್ಲಿಷ್ಟಕರ ಯೋಗವನ್ನ ಮಾಡಲು ಸಜ್ಜಾಗುತ್ತಿದ್ದಾಳೆ


 ಅಂದಹಾಗೆ ಯೋಗಪಟು ಜಾನವಿ ನಗರದ ನಿಸರ್ಗ ಯೋಗ ಕೇಂದ್ರದಲ್ಲಿ ಕಳೆದ 10 ವರ್ಷಗಳಿಂದ  ತರಬೇತಿಯನ್ನು ಪಡೆಯುತ್ತಿದ್ದಾಳೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಯೋಗಸ್ವರ್ದೆಯಲ್ಲಿ ಭಾಗವಹಿಸುವ ಯೋಗಪಟುಗಳಿಗೆ ವಿದ್ಯಾಭ್ಯಾಸ ಮತ್ತು ಸರ್ಕಾರಿ ಕೆಲಸ ಸೇರಲು ನೇರವಾಗುತ್ತೆ ಜೊತೆಗೆ ಉತ್ತಮ ಆರೋಗ್ಯವನ್ನು ಹೊಂದಬಹುದು ಎನ್ನುವುದು ಜಾನವಿ ಪೋಷಕರ ಮಾತು .. 


ಯೋಗದಲ್ಲೆ ವಿವಿಧ ಕ್ಲಿಷ್ಟಕರ ಆಸನಗಳನ್ನ ಮಾಡುವ ಮೂಲಕ ಎಲ್ಲರನ್ನ ನೆಬ್ಬೆರಗುವಂತೆ ಮಾಡಿರುವ ಜಾಹ್ನವಿ ತಂದೆ ತಾಯಿ ಮಗಳ ಸಾಧನೆ ಕಂಡು ಖುಷಿಗೊಂಡಿದ್ದಾರೆ. ಪ್ಯಾನ್ಸಿ ಸ್ಟೋರ್ ನೆಡೆಸಿಕೊಂಡು ಮಗಳನ್ನ ಯೋಗದಲ್ಲೆ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿಸಬೇಕೆಂಬ ಹಂಬಲ ಇಟ್ಟುಕೊಂಡಿದ್ದಾರೆ. ಇನ್ನೂ ಸ್ಮರಣ ಶಕ್ತಿ ಮತ್ತು ಸದೃಢ ಆರೋಗ್ಯಕ್ಕಾಗಿ  ಚಿಕ್ಕ ವಯಸ್ಸಿಂದ ಮಗಳನ್ನು ಯೋಗ ಕಲಿಯಲು ಸೇರಿಸಿದ್ದು, ಈಗ ಅದೇ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವುದು ಜಾನವಿ  ಪೋಷಕರ ಸಂತಸಕ್ಕೆ ಕಾರಣವಾಗಿದೆ. 


ಒಟ್ಟಾರೇ ಯೋಗವನ್ನ ಅಳವಡಿಸಿಕೊಂಡ್ರೆ ಒಳ್ಳೆಯ ಆರೋಗ್ಯ ವೃದ್ದಿ ಆಗಬಹುದೆಂದು ಸೇರಿಕೊಂಡ ಈ ಬಾಲಕಿ ಯೋಗ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡಬೇಕೆಂಬ ಹಂಬಲ ಇಟ್ಟುಕೊಂಡಿದ್ದಾಳೆ. ಇನ್ನೂ ಪ್ರಪಂಚಕ್ಕೆ ಯೋಗವನ್ನು ಪರಿಚಯಿಸಿದ ಭಾರತ ತನ್ನ ನೆಲದಲ್ಲಿ ಹಲವು ಸಾಧಕರನ್ನ  ಹೊಂದಿದ್ದು, ಜಾನವಿ ಸಹ ಅಂತರಾಷ್ಟ್ರೀಯ  ಮಟ್ಟದ  ಯೋಗ ಸ್ವರ್ದೆಗಳಲ್ಲಿ ಭಾಗವಹಿಸಿ ಮತ್ತಷ್ಟು ಪ್ರಶಸ್ತಿ ಗೆದ್ದು ದೇಶಕ್ಕೆ ಹೆಸರು ತರಲಿ ಅನ್ನೋದು ನಮ್ಮ ಆಶಯವು ಸಹ 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.