ನವದೆಹಲಿ: ಅಧಿಕೃತ ಆದೇಶದ ಪ್ರಕಾರ ನಾಗರಿಕ ವಿಮಾನಯಾನ ಸಚಿವಾಲಯವು ಶುಕ್ರವಾರ (ಮೇ 28) ದರಗಳ ಮೇಲಿನ ಮಿತಿಯನ್ನು ಶೇಕಡಾ 15 ರಷ್ಟು ಹೆಚ್ಚಿಸಿರುವುದರಿಂದ ದೇಶೀಯ ವಿಮಾನ ಪ್ರಯಾಣವು ದುಬಾರಿಯಾಗಲಿದೆ.ಜೂನ್ 1 ರಿಂದ ವಿಮಾನಯಾನ ಹೆಚ್ಚಳ ಜಾರಿಗೆ ಬರಲಿದೆ ಎಂದು ಅದು ಹೇಳಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ : CBSE 12 ನೇ ತರಗತಿಯ ಪ್ರಮುಖ ವಿಷಯಗಳಿಗೆ ಮಾತ್ರ ನಡೆಯಲಿದೆಯೇ ಪರೀಕ್ಷೆ?


COVID-19 ನ ವಿನಾಶಕಾರಿ ಎರಡನೇ ಅಲೆಯ ಹಿನ್ನಲೆಯಲ್ಲಿ ವಿಮಾನ ಪ್ರಯಾಣ (Air travel) ವನ್ನು ಕಡಿತಗೋಳಿಸಲಾಗಿದೆ. ಈ ಹಿನ್ನಲೆಯಲ್ಲಿ ಈಗ ವಿಮಾನಯಾನ ಸಂಸ್ಥೆಗಳಿಗೆ ಸಹಾಯ ಮಾಡುವ ಉದ್ದೇಶದಿಂದ ಈ ಕ್ರಮವು ಜಾರಿಗೆ ತರಲಾಗಿದೆ.ಎರಡು ತಿಂಗಳ ಲಾಕ್‌ಡೌನ್ ನಂತರ ಕಳೆದ ವರ್ಷ ಮೇ 25 ರಂದು ಸೇವೆಗಳನ್ನು ಪುನರಾರಂಭಿಸಿದಾಗ ವಿಮಾನಯಾನ ಅವಧಿಯ ಆಧಾರದ ಮೇಲೆ ಭಾರತವು lower ಮತ್ತು Upper ಮಿತಿಗಳನ್ನು ವಿಧಿಸಿತ್ತು.


ಇದನ್ನೂ ಓದಿ: Baba Ramdev : 'ಅವರ ಅವರಪ್ಪನಿಂದಲೂ ಕೂಡ ನನ್ನನ್ನು ಬಂಧಿಸಲು ಸಾಧ್ಯವಿಲ್ಲ'


ಶುಕ್ರವಾರ, ಅಧಿಕೃತ ಆದೇಶದಲ್ಲಿ 40 ನಿಮಿಷಗಳ ಅವಧಿಯೊಳಗಿನ ವಿಮಾನಗಳ ಕಡಿಮೆ ಮಿತಿಯನ್ನು 2,300 ರೂ.ಗಳಿಂದ 2,600 ರೂಗಳಿಗೆ ಹೆಚ್ಚಿಸಲಾಗುವುದು.ಅಂತೆಯೇ, 40 ನಿಮಿಷದಿಂದ 60 ನಿಮಿಷಗಳ ನಡುವಿನ ಅವಧಿಯನ್ನು ಹೊಂದಿರುವ ವಿಮಾನಗಳು ಈಗ 2,900 ರೂಗಳ ಬದಲು 3,300 ರೂ.ಗಳ ಕಡಿಮೆ ಮಿತಿಯನ್ನು ಹೊಂದಿರುತ್ತವೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.