ಹೆಚ್ಚಿನ ಪ್ರಯಾಣಿಕರಿಗೆ Flight ನಲ್ಲಿ ಪ್ರಯಾಣಿಸಲು ಅನುಮತಿ ಇಲ್ಲ, ಇಲ್ಲಿದೆ ಸರ್ಕಾರದ ತೀರ್ಮಾನ
ಕೊರೊನಾವೈರಸ್ನಿಂದಾಗಿ ವಿಮಾನಯಾನ ಉದ್ಯಮದಲ್ಲಿ ಹೇರಲಾಗಿರುವ ನಿರ್ಬಂಧಗಳು ಮುಂದುವರಿಯಲಿವೆ. ಅಂತರರಾಷ್ಟ್ರೀಯ ವಿಮಾನಯಾನ ಸೇವೆಗಳನ್ನು ಸಹ ನಿರ್ಬಂಧಿಸಲಾಗಿದೆ ಮತ್ತು ಶೇ. 60% ಪ್ರಯಾಣಿಕರನ್ನು ದೇಶೀಯ ಮಾರ್ಗಗಳಲ್ಲಿ ಇರಿಸಿಕೊಳ್ಳಲು ಆದೇಶ ನೀಡಲಾಗಿದೆ.
ನವದೆಹಲಿ: ಕೊರೊನಾವೈರಸ್ (Coronavirus)ನಿಂದಾಗಿ ವಿಮಾನಯಾನ ಉದ್ಯಮದಲ್ಲಿ ಹೇರಲಾಗಿರುವ ನಿರ್ಬಂಧಗಳು ಮುಂದುವರಿಯಲಿವೆ. ಅಂತರರಾಷ್ಟ್ರೀಯ ವಿಮಾನಯಾನ ಸೇವೆಗಳನ್ನು ಸಹ ನಿರ್ಬಂಧಿಸಲಾಗಿದೆ ಮತ್ತು ಶೇ. 60% ಪ್ರಯಾಣಿಕರನ್ನು ದೇಶೀಯ ಮಾರ್ಗಗಳಲ್ಲಿ ಇರಿಸಿಕೊಳ್ಳಲು ಆದೇಶ ನೀಡಲಾಗಿದೆ. ಏತನ್ಮಧ್ಯೆ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ನಾಗರಿಕ ವಿಮಾನಯಾನ ಸೇವೆಗಳ ಮೇಲೆ ವಿಧಿಸಲಾಗಿರುವ ನಿರ್ಬಂಧನೆಯನ್ನು ಫೆಬ್ರುವರಿ 24, 2021ರವರೆಗೆ ಮುಂದುವರೆಸುವ ನಿರ್ಣಯ ಕೈಗೊಂಡಿದೆ. ಇದಕ್ಕೂ ಮೊದಲು ನವೆಂಬರ್ 24, 2020 ರವರೆಗೆ ಈ ರೀತಿ ಮಾಡಲು ಸೂಚಿಸಲಾಗಿತ್ತು. ಇದೀಗ ಮತ್ತೆ ಮೂರು ತಿಂಗಳ ಅವಧಿಗೆ ನಿರ್ಬಂಧನೆಯನ್ನು ವಿಸ್ತರಿಸಲಾಗಿದೆ.
ಇದನ್ನು ಓದಿ- ಹೆಚ್ಚು ಸಾಮಾಗ್ರಿ ಹೊತ್ತು ವಿಮಾನ ಯಾತ್ರೆ ಮಾಡುವವರಿಗೆ ಬ್ಯಾಡ್ ನ್ಯೂಸ್
ಮಾರ್ಚ್ 22ರಂದು ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ ಜನತಾ ಕರ್ಫೂ ಹಿನ್ನೆಲೆ ಟ್ರೇನ್, ಬಸ್ ಹಾಗೂ ವಿಮಾನಯಾನ ಸೇವೆಯ ಮೇಲೆ ನಿರ್ಬಂಧನೆಯನ್ನು ವಿಧಿಸಲಾಗಿತ್ತು. ಇದಾದ ಬಳಿಕ ಇಡೀ ದೇಶಾದ್ಯಂತ ಲಾಕ್ ಡೌನ್ ಜಾರಿಗೆ ಬಂದಿತ್ತು. ಬಳಿಕ ಮೇ 25 ರಂದು ದೇಸೀಯ ವಿಮಾನಯಾನ ಸೇವೆ ಪುನರಾರಂಭಗೊಂಡಿದೆ. ನಂತರದ ಕಾಲದಲ್ಲಿ ಫ್ಲೈಟ್ ಫ್ರಿಕ್ವೆನ್ಸಿಯಲ್ಲಿ ನಿರಂತರ ಏರಿಕೆಯಾಗಿದೆ. ನವೆಂಬರ್ ತಿಂಗಳಿನಲ್ಲಿ ನಿತ್ಯ ಸುಮಾರು 2 ಲಕ್ಷ ಯಾತ್ರಿಗಳು ವಿಮಾನಯಾನ ಸೇವೆಯ ಲಾಭ ಪಡೆದಿದ್ದಾರೆ ಎಂಬುದು ಇಲ್ಲಿ ಉಲ್ಲೇಖನೀಯ.
ಕೇಂದ್ರ ವಿಮಾನಯಾನ ಸಚಿವಾಲಯ ಅನ್ಲಾಕ್ 5.0 ಕಾಲಾವಧಿಯಲ್ಲಿ ಡೊಮೆಸ್ಟಿಕ್ ರೂಟ್ ಗಳಲ್ಲಿ ಹೆಚ್ಚುವರಿ ಮಾರ್ಗಗಳನ್ನು ಜೋಡಿಸಿದೆ. ನ್ಯಾಷನಲ್ ಕ್ಯಾರಿಯರ್ ಏರ್ ಇಂಡಿಯಾವತಿಯಿಂದ ಮೊದಲು ಈ ಮಾರ್ಗಗಳ ಮೇಲೆ ಸೇವೆ ಆರಂಭಗೊಂಡಿದೆ.
ಇದನ್ನು ಓದಿ- ಅಕ್ಟೋಬರ್ 15ರಂದು ಪುನಃ ತೆರೆದುಕೊಳ್ಳಲಿವೆ ಶಾಲೆಗಳು, ಕೇಂದ್ರ ಸರ್ಕಾರದಿಂದ ಗೈಡ್ ಲೈನ್ಸ್ ಜಾರಿ
ಈ ಮಾರ್ಗಗಳ ಮೇಲೆ ಹೆಚ್ಚಾದ ಫ್ರಿಕ್ವೆನ್ಸಿ
- ದೆಹಲಿ-ರಾಂಚಿ
- ಮುಂಬೈ-ಹೈದರಾಬಾದ್
- ಹೈದರಾಬಾದ್-ವಿಶಾಖಪಟ್ಟಣಂ
- ದೆಹಲಿ-ಕೊಯಮತ್ತೂರು
- ಮುಂಬೈ-ಭೋಪಾಲ್
- ಮುಂಬೈ-ಕೋಲ್ಕತಾ
- ದೆಹಲಿ-ಇಂದೋರ್
- ಬೆಂಗಳೂರು-ಚಂಡೀಗಢ
- ದೆಹಲಿ-ತಿರುಪತಿ
- ಮುಂಬೈ-ರಾಜ್‌ಕೋಟ್
- ಮುಂಬೈ-ಕೊಚ್ಚಿನ್
ಇದಲ್ಲದೆ ಏರ್ ಏಷ್ಯಾ ಮತ್ತು ಸ್ಪೈಸ್‌ಜೆಟ್ ದೇಶೀಯ ಮತ್ತು ಅಂತರರಾಷ್ಟ್ರೀಯ ಮಾರ್ಗಗಳಲ್ಲಿ 68 ವಿಮಾನಗಳನ್ನು ಪ್ರಾರಂಭಿಸಲು ನಿರ್ಧರಿಸಿವೆ. ಇದರ ಅಡಿಯಲ್ಲಿ ದೆಹಲಿ (Delhi) ಮತ್ತು ಅಹಮದಾಬಾದ್ (Ahmedabad) ನಿಂದ ಮಸ್ಕತ್‌ಗೆ 4 ಅಂತರರಾಷ್ಟ್ರೀಯ ಸೇವೆಗಳನ್ನು ಒಳಗೊಂಡಂತೆ 62 ಹೊಸ ವಿಮಾನಗಳನ್ನು ಪ್ರಾರಂಭಿಸುವುದಾಗಿ ಸ್ಪೈಸ್‌ಜೆಟ್ ಪ್ರಕಟಿಸಿದೆ.
ಇದನ್ನು ಓದಿ- ಇಂದಿನಿಂದ Unlock-5 ಜಾರಿ: ಏನಿರುತ್ತೆ? ಏನಿರಲ್ಲ? ಎಂಬುದರ ಬಗ್ಗೆ ಇಲ್ಲಿದೆ ವಿವರ
ಇನ್ನೊಂದೆಡೆ ಏರ್ ಏಷ್ಯಾ ಇಂಡಿಯಾ 6 ಹೊಸ ದೇಶೀಯ ವಿಮಾನ ಮಾರ್ಗಗಳಲ್ಲಿ ವಿಮಾನಯಾನ ಸೇವೆಯನ್ನು ಪುನರಾರಂಭಿಸಿದೆ. ಇವುಗಳಲ್ಲಿ ಚೆನ್ನೈನಿಂದ ಅಹಮದಾಬಾದ್ (Chennai-Ahmedaba) ಮತ್ತು ಗೋವಾ, ಮುಂಬೈಯಿಂದ ವಿಶಾಖಪಟ್ಟಣಂ ಮತ್ತು ಗೋವಾ ಮತ್ತು ಜೈಪುರದಿಂದ ಕೋಲ್ಕತ್ತಾಗೆ (Jaipur-Kolkata) ವಿಮಾನಗಳು ಶಾಮೀಲಾಗಿವೆ.