SHOCKING NEWS: ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬಳು ತನ್ನ ಮೂತ್ರದಿಂದಲೇ ಅಡುಗೆ ಮಾಡುತ್ತಿದ್ದ ಆಘಾತಕಾರಿ ಘಟನೆ ನಡೆದಿದೆ. ರಾಷ್ಟ್ರರಾಜಧಾನಿ ದೆಹಲಿಯ ಪಕ್ಕದಲ್ಲಿರುವ ಗಾಜಿಯಾಬಾದ್‌ನಲ್ಲಿಯೇ ಈ ಘಟನೆ ನಡೆದಿದೆ. ಕೆಲಸದಾಕೆಯ ನಾಚಿಕೆಗೇಡಿನ ಕೃತ್ಯ ಅಡುಗೆ ಕೋಣೆಯಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. 


COMMERCIAL BREAK
SCROLL TO CONTINUE READING

ಉದ್ಯಮಿ ನಿತಿನ್ ಗೌತಮ್ ಕುಟುಂಬಸ್ಥರ ದೂರಿನ ಮೇರೆಗೆ ಘಾಜಿಯಾಬಾದ್ ಪೊಲೀಸರು ಆರೋಪಿ ಮಹಿಳೆಯನ್ನು ಮಂಗಳವಾರ ಬಂಧಿಸಿದ್ದಾರೆ. ಹಲವು ವರ್ಷಗಳಿಂದ ಆಕೆ ಈ ಹೀನಕೃತ್ಯವನ್ನು ಮಾಡುತ್ತಿದ್ದಳು ಅಂತಾ ಉದ್ಯಮಿ ಕುಟುಂಬಸ್ಥರು ಆರೋಪಿಸಿದ್ದಾರೆ. 


ಇದನ್ನೂ ಓದಿ: ಬಾಬಾ ಸಿದ್ಧಿಕ್ಕಿ ಹತ್ಯೆಗೈದು, ಈಗ ಸಲ್ಮಾನ್‌ ಖಾನ್ ಟಾರ್ಗೆಟ್‌ ಮಾಡುತ್ತಿರುವ ಲಾರೆನ್ಸ್‌ ಬಿಷ್ಣೋಯ್‌ ಯಾರು? ಪೊಲೀಸ್‌ ಮಗ ರೌಡಿಯಾಗಿ ಬದಲಾಗಲು ಕಾರಣ?


ರಿಯಲ್ ಎಸ್ಟೇಟ್ ಉದ್ಯಮಿಯು ತನ್ನ ಕುಟುಂಬದೊಂದಿಗೆ ಕ್ರಾಸಿಂಗ್ ರಿಪಬ್ಲಿಕ್ ಪ್ರದೇಶದ ಸೊಸೈಟಿಯಲ್ಲಿ ವಾಸಿಸುತ್ತಿದ್ದರು. ಶಾಂತಿನಗರ ನಿವಾಸಿ, ಆರೋಪಿ ರೀನಾ ಸುಮಾರು 8 ವರ್ಷಗಳಿಂದ ತಮ್ಮ ಮನೆಯಲ್ಲಿ ಕೆಲಸ ಮಾಡುತ್ತಿದ್ದಳು ಅಂತಾ ಉದ್ಯಮಿಯ ಪತ್ನಿ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.  


ಕಳೆದ ಕೆಲವು ತಿಂಗಳಿಂದ ಉದ್ಯಮಿ ಕುಟುಂಬ ಸದಸ್ಯರು ಯಕೃತ್ತಿನ ಕಾಯಿಲೆಯಿಂದ ಬಳಲುತ್ತಿದ್ದರು. ಅವರು ಸೋಂಕು ಎಂದು ಭಾವಿಸಿ ವೈದ್ಯರನ್ನು ಸಂಪರ್ಕಿಸಿದ್ದರು. ಆದರೆ ಈ ಸೋಂಕಿಗೆ ಶಾಶ್ವತ ಪರಿಹಾರ ಪಡೆಯಲಿಲ್ಲ. ಇಡೀ ಕುಟುಂಬಸ್ಥರು ಸಹ ಯಕೃತ್ತಿನ ಕಾಯಿಲೆಯಿಂದ ಬಳಲುತ್ತಿದ್ದರು. ಹೀಗಾಗಿ ಅನುಮಾನಗೊಂಡ ಅವರು ಅಡುಗೆ ಮನೆಗೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದರು. ಅದರಲ್ಲಿ ಆರೋಪಿ ರೀನಾಳ ಕೃತ್ಯ ಸಂಪೂರ್ಣವಾಗಿ ಬಯಲಾಗಿದೆ. ರೀನಾಳ ಕೃತ್ಯದಿಂದ ಉದ್ಯಮಿಯ ಕುಟುಂಬಕ್ಕೆ ಆಘಾತವಾಗಿದೆ.  


ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹ 


ರಿಯಲ್ ಎಸ್ಟೇಟ್ ಉದ್ಯಮಿ ಸೇರಿದಂತೆ ಅವರ ಮನೆಯರು ರೀನಾಳ ಮೇಲೆ ಅಪಾರ ನಂಬಿಕೆ ಇಟ್ಟಿದ್ದರು. ಆಕೆಯನ್ನು ತಮ್ಮ ಕುಟುಂಬದ ಸದಸ್ಯಳಂತೆ ನಡೆಸಿಕೊಂಡಿದ್ದರು. ಆಕೆಯ ಕಷ್ಟಗಳಿಗೂ ನೆರವು ನೀಡಿದ್ದರಂತೆ. ಈ ಹಿಂದೆ ಅವರ ಮನೆಯಲ್ಲಿ ಹಲವಾರು ಬಾರಿ ನಗದು ಸೇರಿದಂತೆ ಬೆಲೆ ಬಾಳುವ ವಸ್ತುಗಳು ಕಳ್ಳತನವಾಗಿದ್ದರೂ ಸಹ ಮನೆಯ ಸದಸ್ಯರು ರೀನಾಳ ಮೇಲೆ ಅನುಮಾನ ಪಟ್ಟಿರಲಿಲ್ಲ. ಆದರೆ ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯಗಳನ್ನು ನೋಡಿದ ಅವರಿಗೆ ಬಹುದೊಡ್ಡ ಆಘಾತವಾಗಿದೆ. 8 ವರ್ಷಗಳ ನಂಬಿಕೆ ಕ್ಷಣಮಾತ್ರದಲ್ಲಿ ಛಿದ್ರವಾಗಿದೆ.


ಇದನ್ನೂ ಓದಿ: ಕೇಬಲ್ ಟಿವಿಯಲ್ಲಿ ಅಶ್ಲೀಲ ವಿಡಿಯೋ ಪ್ರಸಾರ..! ಬೆಚ್ಚಿಬಿದ್ದ ಸಿರೀಯಲ್‌ ನೋಡುತ್ತಿದ್ದ ಜನ.. ವಿಡಿಯೋ ಇಲ್ಲಿದೆ


ಆಕೆಯ ಹೀನ ಕೃತ್ಯದಿಂದ ಇಡೀ ಕುಟುಂಬಕ್ಕೆ ಆಘಾತಕ್ಕೆ ಒಳಗಾಗಿದೆ ಎಂದು ಉದ್ಯಮಿ ತಿಳಿಸಿದ್ದಾರೆ. ಆಕೆ ತನ್ನ ಮೂತ್ರವನ್ನು ಆಹಾರದಲ್ಲಿ ಬೆರೆಸಿ ಮನೆಯವರಿಗೆ ಉಣಿಸುತ್ತಿದ್ದಳು. ಹೀಗಾಗಿಯೇ ನಮ್ಮ ಮನೆಯವರೆಲ್ಲರೂ ಆನಾರೋಗ್ಯಕ್ಕೆ ತುತ್ತಾಗಿದ್ದರು. ಆಕೆಯ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು ಅಂತಾ ಅವರು ಆಗ್ರಹಿಸಿದ್ದಾರೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.