ಭಾರತವು ವಿವಿಧ ಸಂಸ್ಕೃತಿಗಳು ಮತ್ತು ಸುದೀರ್ಘ ಇತಿಹಾಸವನ್ನು ಹೊಂದಿರುವ ದೇಶವಾಗಿದೆ. ಅಂತಹ ದೇಶವನ್ನು ತಿಳಿದುಕೊಳ್ಳಲು ಭಾರತೀಯ ರೈಲ್ವೆಯ ಮೂಲಕ ಉತ್ತಮ ಮಾರ್ಗವಾಗಿದೆ. ಭಾರತೀಯ ರೈಲ್ವೆಯು 7000 ಕ್ಕೂ ಹೆಚ್ಚು ನಿಲ್ದಾಣಗಳನ್ನು ಹೊಂದಿರುವ ವಿಶ್ವದ ಅತಿದೊಡ್ಡ ರೈಲು ಜಾಲವಾಗಿದೆ ಮತ್ತು ಪ್ರತಿದಿನ 2.3 ಕೋಟಿಗೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸುತ್ತಾರೆ. ಇದು ತುಂಬಾ ದೊಡ್ಡ ಸಂಸ್ಥೆಯಾಗಿದ್ದು, ಪ್ರಯಾಣಿಕರು ಅನುಸರಿಸಬೇಕಾದ ಕೆಲವು ನಿಯಮಗಳು ಮತ್ತು ನಿಬಂಧನೆಗಳನ್ನು ಹೊಂದಿದೆ.


COMMERCIAL BREAK
SCROLL TO CONTINUE READING

ಧೂಮಪಾನ:


ರೈಲುಗಳು, ಪ್ಲಾಟ್‌ಫಾರ್ಮ್‌ಗಳು ಮತ್ತು ನಿಲ್ದಾಣಗಳಲ್ಲಿ ಬೀಡಿ ಸಿಗರೇಟ್ ಸೇದುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಯಾರಾದರೂ ಹೀಗೆ ಮಾಡಿ ಸಿಕ್ಕಿಬಿದ್ದರೆ, ಅವರಿಗೆ ದಂಡ ಅಥವಾ ಶಿಕ್ಷೆ ಅಥವಾ ಎರಡನ್ನೂ ವಿಧಿಸಬಹುದು.


ಇದನ್ನೂ ಓದಿ : ಬೆಂಗಳೂರಿನ ರಸ್ತೆ ಗುಂಡಿ ಸರಿ ಪಡಿಸಲು ನೂತನ ಆ್ಯಪ್‌ ಬಿಡುಗಡೆ ಮಾಡಿದ ಬಿಬಿಎಂಪಿ..! ನೀವು ಕೂಡ ದೂರು ನೀಡಬಹುದು..!


ಮದ್ಯಪಾನ:


ರೈಲು ಅಥವಾ ನಿಲ್ದಾಣದಲ್ಲಿ ಮದ್ಯಪಾನ ಮಾಡಿ ಸಿಕ್ಕಿಬಿದ್ದರೆ ದಂಡ ವಿಧಿಸಬಹುದು ಅಥವಾ ಕಠಿಣ ಕ್ರಮ ಎದುರಿಸಬೇಕಾಗುತ್ತದೆ.


ಪ್ಲಾಟ್‌ಫಾರ್ಮ್ ಟಿಕೆಟ್:


ರೈಲು ಟಿಕೆಟ್ ಅಥವಾ ಪ್ಲಾಟ್‌ಫಾರ್ಮ್ ಟಿಕೆಟ್ ಇಲ್ಲದೆ ಯಾರಾದರೂ ನಿಲ್ದಾಣದಲ್ಲಿ ಕಂಡುಬಂದರೆ ಅವರಿಗೆ ದಂಡ ವಿಧಿಸಲಾಗುತ್ತದೆ. 


ನಿಷೇಧಿತ ವಸ್ತುಗಳು:


ರೈಲ್ವೇ ನಿಲ್ದಾಣದಲ್ಲಿ ಗ್ಯಾಸ್ ಸಿಲಿಂಡರ್, ಸ್ಫೋಟಕ ವಸ್ತು ಇತ್ಯಾದಿ ನಿಷೇಧಿತ ವಸ್ತುಗಳಿದ್ದರೆ. ಬೇರೆಯವರಿಗೆ ಅಪಾಯ ತಂದೊಡ್ಡುವ ಮತ್ತು ರೈಲ್ವೇ ನಿಷೇಧಿಸಿರುವ ಇಂತಹ ಸರಕುಗಳನ್ನು ಯಾರಾದರೂ ಸಾಗಿಸಿದರೆ, ಸಿಕ್ಕಿಬಿದ್ದರೆ ಶಿಕ್ಷೆ ಮತ್ತು ದಂಡ ಎರಡನ್ನೂ ವಿಧಿಸಬಹುದು.


ಇದನ್ನೂ ಓದಿ : ಮೋದಿ ಟೀಕಿಸಿ ಸಿದ್ದರಾಮಯ್ಯ ಹೊಗಳಿದ ಯುವಕ:ಹಿಗ್ಗಾಮುಗ್ಗ ಥಳಿಸಿದ ಗುಂಪು


ರೈಲ್ವೇ ಹಳಿಗಳ ಮೇಲೆ ನಡೆಯುವುದು


ಆತ್ಮಹತ್ಯೆಗೆ ಸಮಾನ. ರೈಲು ಬಂದಾಗ ನೀವು ಸಾಯಬಹುದು. ಯಾವುದೇ ವ್ಯಕ್ತಿ ರೈಲ್ವೆ ಹಳಿಯಲ್ಲಿ ತಿರುಗಾಡುವುದು ಅಥವಾ ರೈಲು ನಿಲ್ದಾಣದಲ್ಲಿ ಹಳಿ ದಾಟಿ ಬೇರೆ ಪ್ಲಾಟ್‌ಫಾರ್ಮ್‌ಗೆ ಹೋಗುವುದು ಕಂಡುಬಂದರೆ ಅವರನ್ನು ಶಿಕ್ಷಿಸಬಹುದು. 


ರೈಲು ನಿಲ್ದಾಣ ಸಾರ್ವಜನಿಕ ಸ್ಥಳವಾಗಿದ್ದು, ಇಲ್ಲಿ ಎಲ್ಲರೂ ನಿಯಮಗಳನ್ನು ಪಾಲಿಸಬೇಕು. ರೈಲ್ವೆ ನಿಲ್ದಾಣದಲ್ಲಿ ನಿಯಮಗಳನ್ನು ಉಲ್ಲಂಘಿಸಿದರೆ, ನೀವು ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ, ಯಾವಾಗಲೂ ಸುರಕ್ಷಿತವಾಗಿ ಪ್ರಯಾಣಿಸಿ ಮತ್ತು ನಿಯಮಗಳನ್ನು ಅನುಸರಿಸಿ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.