ಒಂದು ವೇಳೆ ನೀವೂ ಮೊಬೈಲ್ ಫೋನ್ ಬಳಸುತ್ತಿದ್ದರೆ ಈ ಸುದ್ದಿ ನಿಮಗಾಗಿ. ನಿಮ್ಮ ಬಳಿಯೂ ಮೊಬೈಲ್ ಫೋನ್ ಇದ್ದು, ಅದರಿಂದ ನೀವು ಕಮರ್ಷಿಯಲ್ ಕಾಲ್ ಮಾಡಿದರೆ ಟೆಲಿಕಾಂ ವಿಭಾಗ ನಿಮ್ಮ ಮೊಬೈಲ್ ಸಂಖ್ಯೆಯನ್ನು ಬ್ಲಾಕ್ list ಮಾಡಲಿದೆ. ಜೊತೆಗೆ ನಿಮ್ಮ ಪ್ರೈಮರಿ ಮೊಬೈಲ್ ಸಂಖ್ಯೆಯಿಂದ ನೀವೂ ಕಮರ್ಷಿಯಲ್ ಮೆಸೇಜ್ ಕಳುಹಿಸಿದರೂ ಕೂಡ ನಿಮ್ಮ ನಂಬರ್ ನಿಷ್ಕ್ರೀಯಗೊಳ್ಳಲಿದೆ.


COMMERCIAL BREAK
SCROLL TO CONTINUE READING

BSNL ನೀಡಿದೆ ಈ ಮಾಹಿತಿ
ದೇಶದ ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿಯಾಗಿರುವ BSNL ಈ ಕುರಿತು ತನ್ನ ಬಳಕೆದಾರರಿಗೆ ಎಚ್ಚರಿಕೆಯ ಸಂದೇಶ ರವಾನಿಸಿದೆ. ಈ ಕುರಿತು ಹೇಳಿಕೆ ನೀಡಿರುವ ಕಂಪನಿ, ಅನ್ಲಿಮಿಟೆಡ್ ಕಾಲಿಂಗ್ ಪ್ಲಾನ್ ಹೊದಿರುವ ಗ್ರಾಹಕರು ಒಂದು ವೇಳೆ ತಮ್ಮ ಪ್ರೈಮರಿ ನಂಬರ್ ನಿಂದ ಕಮರ್ಷಿಯಲ್ ಕಾಲಿಂಗ್ ಮಾಡಿದರೆ ಅವರ ಮೊಬೈಲ್ ಸಂಖ್ಯೆ ಬ್ಲಾಕ್ ಲಿಸ್ಟ್ ಆಗುವ ಸಾಧ್ಯತೆ ಇದೆ ಎಂದು ಹೇಳಿದೆ.


ಮಾರ್ಗಸೂಚಿಗಳನ್ನು ಜಾರಿಗೊಳಿಸಿದ TRAI
ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ(TRAI) ನ  TCCCPR 2018 ಮಾರ್ಗಸೂಚಿಗಳ ಪ್ರಕಾರ ಯಾವುದೇ BSNL ಬಳಕೆದಾರ ತಮ್ಮ ಲ್ಯಾಂಡ್ ಲೈನ್ ಅಥವಾ ಮೊಬೈಲ್ ಸಂಖ್ಯೆ ಮೂಲಕ ಕಮರ್ಷಿಯಲ್ ಕಾಲ್ ಮಾಡಬಾರದು ಎಂದು ಹೇಳಿದೆ. ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ BSNL ಕೂಡ ಈ ಕುರಿತು ಮಾಹಿತಿ ನೀಡಿದೆ. ತನ್ನ ಹೇಳಿಕೆಯಲ್ಲಿ TRAI ಯಾವುದೇ BSNL ಬಳಕೆದಾರ ನಿಯಮಗಳನ್ನು ಉಲ್ಲಂಘಿಸಿದ್ದೆ ಆದಲ್ಲಿ ಅವರ ನಂಬರ್ ಅನ್ನು ಕಂಪನಿವತಿಯಿಂದ ಬ್ಲಾಕ್ ಲಿಸ್ಟ್ ಮಾಡಿಸಲಾಗುವುದು ಎಂದಿದೆ.


ಇದಕ್ಕಾಗಿ BSNL ಸಿದ್ಧಪಡಿಸಿದೆ DLT ಪೋರ್ಟಲ್
ಈ ಹೊಸ ನಿಯಮಗಳನ್ನು ಜಾರಿಗೊಳಿಸಲು BSNL ಸಂಸ್ಥೆ DLT (Distributed Ledger Technology) ಪೋರ್ಟಲ್ ಸಿದ್ಧಪಡಿಸಿದೆ. ಈ ಪೋರ್ಟಲ್ ನಲ್ಲಿ ಈ ನಿಯಮಗಳ ಕುರಿತು ಸಂಸ್ಥೆ ಮಾಹಿತಿ ನೀಡಿದೆ. ನಿಯಮಗಳ ಪ್ರಕಾರ ಯಾವುದೇ ಟೆಲಿಮಾರ್ಕೆಟಿಂಗ್ ಅಥವಾ ಬಿಸಿನೆಸ್ ಕಂಪನಿ ಬಳಕೆದಾರರಿಗೆ ಕಮರ್ಷಿಯಲ್ ಕಾಲ್ ಮಾಡಲು ಬಯಸಿದರೆ ಅವರು ಮೊದಲು DLT ಪೋರ್ಟಲ್ ಗೆ ಭೇಟಿ ನೀಡಿ ತನ್ನ ಹೆಸರು ನಮೂದಿಸಬೇಕು. ಬಳಿಕ ಬಳಕೆದಾರರು ಒಂದು ವಿಶಿಷ್ಟ ಸರಣಿಯ ನಂಬರ್ ಹಾಗೂ SMS ಪೈಪ್ ನ ಬಳಕೆ ಮಾಡಬಹುದಾಗಿದೆ.


ಈ ಕಂಪನಿಯ ಬಳಕೆದಾರರೂ ಕೂಡ ಕಮರ್ಷಿಯಲ್ ಕಾಲ್ ಮಾಡುವಂತಿಲ್ಲ
BSNL ಸೇರಿದಂತೆ ರಿಲಯನ್ಸ್, ವೊಡಾಫೋನ್-ಐಡಿಯಾ, ಏರ್ಟೆಲ್ ಜೊತೆಗೆ ಇತರೆ ಎಲ್ಲ ಟೆಲಿಕಾಂ ಸೇವೆ ಒದಗಿಸುವ ಕಂಪನಿಯ ಬಳಕೆದಾರರಿಗೂ ಕೂಡ ಈ ನಿಯಮ ಅನ್ವಯಿಸಲಿದೆ. ಒಂದು ವೇಳೆ ಈ ಕಂಪನಿಗಳೂ ಕೂಡ ತಮ್ಮ ಬಳಕೆದಾರರಿಗೆ ಅನ್ಲಿಮಿಟೆಡ್ ಕಾಲಿಂಗ್ ಸೌಲಭ್ಯ ನೀಡಿದರೆ, ಈ ಸೇವೆ ಬಳಸುವ ಬಳಕೆದಾರರೂ ಕೂಡ ಸೇವೆ ದುರ್ಬಳಕೆಯಾಗದಂತೆ ನೋಡಿಕೊಳ್ಳಬೇಕು.


ಕಾಲ್ ರಿಸಿವ್ ಮಾಡುವ ಮೊದಲು ಪ್ರೆಫೆರೆನ್ಸ್ ಸೆಟ್ ಮಾಡಬೇಕು
ಒಂದು ವೇಳೆ ನಿಮ್ಮ ಮೊಬೈಲ್ ಸಂಖ್ಯೆಗೆ ಈ ಕಾಲಗಳು ಬಂದರೆ, ಕಾಲ್ ರಿಸೀವ್ ಮಾಡುವ ಮೊದಲು ನೀವು ಪ್ರೆಫೆರೆನ್ಸ್ ಸೆಟ್ ಮಾಡಬೇಕು. ಆ ಬಳಿಕ ಮಾತ್ರವೇ ನೀವು ಕಾಲ್ ರಿಸೀವ್ ಮಾಡಬಹುದು. ಬಳಕೆದಾರರ ಪ್ರಾಡಕ್ಟ್ ಕೆಟಗರಿ, ದಿನ, ಸಮಯ ಹಾಗೂ ಕಮ್ಯೂನಿಕೇಶನ್ ವಿಧಾನಕ್ಕೆ ಅನುಗುಣವಾಗಿ ನೀವು ಈ ಕೆಲಸ ಮಾಡಬಹುದು. ಒಂದು ವೇಳೆ ಬಳಕೆದಾರರು ಈ ರೀತಿಯ ಕಾಲ್ ಗಳನ್ನು ಬಯಸದೆ ಹೋದ ಸಂದರ್ಭದಲ್ಲಿ ಅವರಿಗೆ ಮಾರ್ಕೆಟಿಂಗ್ ಕಾಲ್ ಗಳನ್ನು ಬ್ಲಾಕ್ ಮಾಡುವ ಸೌಲಭ್ಯ ಕೂಡ ಇರಲಿದೆ.