ನವದೆಹಲಿ:ಕಳೆದ ಶುಕ್ರವಾರ ಬಾಗ್ದಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಅಮೆರಿಕ ನಡೆಸಿದ ವೈಮಾನಿಕ ದಾಳಿಯಲ್ಲಿ ಇರಾನ್‌ನ ಉನ್ನತ ಮಿಲಿಟರಿ ಕಮಾಂಡರ್ ಖಾಸೀಮ್ ಸುಲೇಮಾನಿ ಅವರನ್ನು ಹತ್ಯೆಗೈಯಲ್ಲಾಗಿತ್ತು. ಬಳಿಕ ಇದೀಗ ಇರಾಕ್‌ನಲ್ಲಿನ ಯುಎಸ್ ಮಿಲಿಟರಿ ನೆಲೆಗಳ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದೆ. ಕೊಲ್ಲಿ ರಾಷ್ಟ್ರಗಳಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಬುಧವಾರ ಇರಾಕ್‌ಗೆ ಹೋಗುವ ಪ್ರಯಾಣಿಕರಿಗೆ ಮಾರ್ಗಸೂಚಿಗಳನ್ನು ಹೊರಡಿಸಿದೆ.


COMMERCIAL BREAK
SCROLL TO CONTINUE READING

ಇರಾಕ್ ಗೆ ಅನಗತ್ಯ ಪ್ರಯಾಣ ಬೆಳೆಸುವುದರಿಂದ ದೂರ ಇರಿ ಎಂದು ಕೇಂದ್ರ ಸರ್ಕಾರ ಭಾರತೀಯ ನಾಗರಿಕರಿಗೆ ಎಚ್ಚರಿಕೆ ನೀಡಿದೆ. ಇರಾಕ್ ನಲ್ಲಿ ನೆಲೆಸಿರುವ NRI ಸಮುದಾಯದವರಿಗೂ ಕೂಡ ಎಚ್ಚರಿಕೆ ವಹಿಸುವಂತೆ ಸರ್ಕಾರ ತಿಳಿಸಿದೆ. ಭಾರತೀಯ ವಾಯುಯಾನ ಸಂಸ್ಥೆಗಳಿಗೂ ಕೂಡ ಎಚ್ಚರಿಕೆಯ ಸಂದೇಶ ರವಾನಿಸಿರುವ ಸರ್ಕಾರ, ಗಲ್ಫ್ ರೂಟ್ ಗಳ ಪ್ರಯಾಣ ಕೈಗೊಳ್ಳದಂತೆ ಮನವಿ ಮಾಡಿದೆ.


ಬುಧವಾರ ಬೆಳಗ್ಗೆ(ಸ್ಥಳೀಯ ಕಾಲಮಾನದ ಪ್ರಕಾರ) ಮಧ್ಯ ಇರಾಕ್ ನ ಅಲ್-ಅಸಾದ್ ವಾಯುನೆಲೆಯ ಮೇಲೆ ಇರಾನ್ ಒಂದು ಡಜನ್ ಗೂ ಅಧಿಕ ರಾಕೆಟ್ ಗಳ ಮೂಲಕ ದಾಳಿ ನಡೆಸಿದೆ. ಇಲ್ಲಿ ಅಮೇರಿಕ ತನ್ನ ಹಲವಾರು ಸೈನಿಕರನ್ನು ನಿಯೋಜನೆಗೊಳಿಸಿತ್ತು. ಇದು ಇರಾನ್ ವತಿಯಿಂದ ನಡೆಸಲಾದ ಮೊಟ್ಟಮೊದಲ ಪ್ರತಿದಾಳಿಯಾಗಿತ್ತು. ಕಳೆದ ವಾರ ಅಮೇರಿಕ ನಡೆಸಿದ್ದ ಡ್ರೋನ್ ದಾಳಿಯಲ್ಲಿ ಇರಾನಿನ ಕುದ್ಸ್ ಪೋರ್ಸ್ ಕಮಾಂಡರ್ ಜನರಲ್ ಕಾಸೀಂ ಸುಲೇಮಾನಿ ಹತ್ಯೆಗೈಯಲಾಗಿದ್ದು, ಆ ಬಳಿಕ ಅಮೇರಿಕ ಮತ್ತು ಇರಾನ್ ಮಧ್ಯೆ ಬಿಗುವಿನ ವಾತಾವರಣ ನಿರ್ಮಾಣಗೊಂಡಿದೆ.