Actor and politician Kamal Haasan : ಹಿಂದಿ ಭಾಷೆಯನ್ನು ಇತರರ ಮೇಲೆ ಹೇರುವುದು ಮೂರ್ಖತನ ಎಂದು ನಟ ಕಮಲ್ ಹಾಸನ್ ಹೇಳಿದ್ದಾರೆ. ಈ ಮೂಲಕ ಹಿಂದಿ ಹೇರಿಕೆ ಸಂಬಂಧಿಸಿದಂತೆ ಮತ್ತೆ ವಿವಾದ ಶುರುವಾಗಿದೆ.


COMMERCIAL BREAK
SCROLL TO CONTINUE READING

ಈ ಬಗ್ಗೆ ಕಮಲ್ ಹಾಸನ್ ಕೇರಳದ ಸಿಪಿಐ-ಎಂ ಸಂಸದ ಜಾನ್ ಬ್ರಿಟಾಸ್ ಅವರ ಟ್ವೀಟ್ ಅನ್ನು ಮರುಟ್ವೀಟ್ ಮಾಡಿ,  ಹಿಂದಿ ಹೇರಿಕೆಯನ್ನು ವಿರೋಧಿಸುತ್ತೇವೆ. ಹಿಂದಿ ಹೇರುವ ನೀಚ ಉದ್ದೇಶ ಅದನ್ನು ಹಾಳು ಮಾಡುತ್ತದೆ ಎಂದು ಬರೆದುಕೊಂಡಿದ್ದಾರೆ. ಸಂಸದ ಜಾನ್ ಬ್ರಿಟೊಸ್ ಅವರು ಸಂಸತ್ತಿನಲ್ಲಿ ಹಿಂದಿಯನ್ನು ಗೇಲಿ ಮಾಡಿ ನೀಡಿದ ಹೇಳಿಕೆಯ ವಿಡಿಯೋವನ್ನು ಟ್ವೀಟ್ ಮಾಡಿದ್ದರು.


ಇದನ್ನೂ ಓದಿ : 


ಹಿಂದಿ ಹೇರಿಕೆಗೆ ಸಿಪಿಐ-ಎಂ ತೆಗಳಿಕೆ


ಸಿಪಿಐ-ಎಂ ಸಂಸದ ಜಾನ್ ಬ್ರಿಟೊಸ್ ತಮ್ಮ ವೀಡಿಯೊವನ್ನು ಟ್ವೀಟ್ ಮಾಡಿ. ಹಿಂದಿಯನ್ನು ಈ ದೇಶದ ಮೇಲೆ ಹೇರುವ ಕೆಟ್ಟ ಉದ್ದೇಶವು ಅದನ್ನು ಹಾಳುಮಾಡುತ್ತದೆ. ಸುಂದರ್ ಪಿಚೈ ಹಿಂದಿಯಲ್ಲಿ ಐಐಟಿ ಪರೀಕ್ಷೆ ಬರೆದಿದ್ದರೆ ಅವರು ಗೂಗಲ್‌ನ ಮೇಲಿರುತ್ತಿದ್ದರೇ? ಎಂದು ಪ್ರಶ್ನಿಸಿದ್ದಾರೆ.


ಈ ಬಗ್ಗೆ ಟ್ವೀಟ್ ಮಾಡಿದ ಕಮಲ್ ಹಾಸನ್ 


ಸಂಸದ ಜಾನ್ ಬ್ರಿಟ್ಟೋಸ್ ಅವರ ಟ್ವೀಟ್ ಅನ್ನು ಮರುಟ್ವೀಟ್ ಮಾಡಿದ ಕಮಲ್ ಹಾಸನ್, 'ಕೇರಳವೂ ಅದನ್ನೇ ಪ್ರತಿಬಿಂಬಿಸುತ್ತದೆ ಮತ್ತು ಇದು ಭಾರತದ ಅರ್ಧದಷ್ಟು ಜನರ ಮಾತಾಗಿದೆ. ಎಚ್ಚರಿಕೆ, ಪೊಂಗಲ್ ಬರಲಿದೆ. ಓಹ್! ನಿಮ್ಮ ತಿಳುವಳಿಕೆಗಾಗಿ "ಎಚ್ಚರಿಕೆಯಿಂದ ಇರಿ" ಕ್ಷಮಿಸಿ' ಎಂದು ಬರೆದುಕೊಂಡಿದ್ದಾರೆ


ಭಾರತ್ ಜೋಡೋ ಯಾತ್ರೆಯಲ್ಲಿ ಭಾಗಿಯಾಗಿದ್ದ ಕಮಲ್ ಹಾಸನ್ 


ಇತ್ತೀಚೆಗೆ ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆ ದೆಹಲಿ ತಲುಪಿದಾಗ ಕಮಲ್ ಹಾಸನ್ ಕೂಡ ಭಾಗವಹಿಸಿದ್ದರು. ಕೆಂಪುಕೋಟೆಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಕಮಲ್ ಹಾಸನ್ ಕೂಡ ಭಾಷಣ ಮಾಡಿದರು. ದೆಹಲಿಯಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು ಹಿಂದಿ ಅಥವಾ ಇಂಗ್ಲಿಷ್‌ನಲ್ಲಿ ಭಾಷಣ ಮಾಡದೆ ತಮಿಳಿನಲ್ಲಿ ಭಾಷಣ ಮಾಡಿದರು.


ಇದನ್ನೂ ಓದಿ : 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.