UAN, AADHAAR ಸಂಖ್ಯೆಗಳ ಕುರಿತು ಗಂಭೀರ ಎಚ್ಚರಿಕೆ ನೀಡಿದ EPFO
ಕೊರೊನಾ ಲಾಕ್ ಡೌನ್ ಹಿನ್ನೆಲೆ ಎಲ್ಲ ಜನರು ತಮ್ಮ ಮನೆಗಳಲಿಯೇ ಬಂಧಿಯಾಗಿದ್ದು, ತಮ್ಮ ಅನುಕೂಲಕ್ಕಾಗಿ ಆನ್ಲೈನ್ ಸೇವೆಗಳನ್ನು ಹೆಚ್ಚಾಗಿ ಬಳಸುತ್ತಿದ್ದಾರೆ. ಆದರೆ, ಇದೆ ಅವಧಿಯಲ್ಲಿ ಸೈಬರ್ ಕ್ರೈಂ ಘಟನೆಗಳೂ ಕೂಡ ಹೆಚ್ಚಾಗುತ್ತಿವೆ. ಇಂತಹುದರಲ್ಲಿ ಜನರ ಒಂದು ತಪ್ಪು ಭಾರಿ ಹಾನಿಗೆ ಎಡೆಮಾಡಿಕೊಡಲಿದೆ.
ನವದೆಹಲಿ: ಕೊರೊನಾ ಲಾಕ್ ಡೌನ್ ಹಿನ್ನೆಲೆ ಎಲ್ಲ ಜನರು ತಮ್ಮ ಮನೆಗಳಲಿಯೇ ಬಂಧಿಯಾಗಿದ್ದು, ತಮ್ಮ ಅನುಕೂಲಕ್ಕಾಗಿ ಆನ್ಲೈನ್ ಸೇವೆಗಳನ್ನು ಹೆಚ್ಚಾಗಿ ಬಳಸುತ್ತಿದ್ದಾರೆ. ಆದರೆ, ಇದೆ ಅವಧಿಯಲ್ಲಿ ಸೈಬರ್ ಕ್ರೈಂ ಘಟನೆಗಳೂ ಕೂಡ ಹೆಚ್ಚಾಗುತ್ತಿವೆ. ಇಂತಹುದರಲ್ಲಿ ಜನರ ಒಂದು ತಪ್ಪು ಭಾರಿ ಹಾನಿಗೆ ಎಡೆಮಾಡಿಕೊಡಲಿದೆ. ಈ ಹಿನ್ನೆಲೆಯಲ್ಲಿ ನೌಕರರ ಭವಿಷ್ಯ ನಿಧಿ ಪ್ರಾಧಿಕಾರ(EPFO) ತನ್ನ ಖಾತೆದಾರಿಗೆ ಎಚ್ಚರಿಕೆಯೊಂದನ್ನು ನೀಡಿದೆ. ಈ ಕುರಿತು ತನ್ನ ಟ್ವಿಟ್ಟರ್ ಖಾತೆಯಲ್ಲಿ ಎಚ್ಚರಿಕೆಯನ್ನು ನೀಡಿರುವ EPFO ಸ್ಮಾರ್ಟ್ ಫೋನ್ ಅಥವಾ ಸಾಮಾಜಿಕ ಮಾಧ್ಯಮಗಳ ಮೇಲೆ ಕಾನ್ಫಿಡೆನ್ಸಿಯಲ್ ಮಾಹಿತಿಗಳನ್ನು ಹಂಚಿಕೊಳ್ಳದಂತೆ ಎಚ್ಚರಿಕೆ ನೀಡಿದೆ.
ಇದಕ್ಕೆ ಸಂಬಂಧಿಸಿದಂತೆ ಬರೆದುಕೊಂಡಿರುವ EPFO, ಸಂಘಟನೆ ಎಂದಿಗೂ ಕೂಡ ತನ್ನ ಖಾತೆದಾರರಿಗೆ ಸಾಮಾಜಿಕ ಮಾಧ್ಯಮ ಹಾಗೂ ಫೋನ್ ಗಳ ಮೇಲೆ UAN, PAN, ಬ್ಯಾಂಕ್ ಅಕೌಂಟ್ ಗಳಂತಹ ವೈಯಕ್ತಿಕ ಮಾಹಿತಿ ಕೇಳುವುದಿಲ್ಲ ಹಾಗೂ ಯಾವುದೇ ಬ್ಯಾಂಕ್ ನಲ್ಲಿ ಹಣ ಜಮಾ ಮಾಡಲು ಹೇಳುವುದಿಲ್ಲ. ಹೀಗಾಗಿ ವಂಚಕರಿಂದ ಎಚ್ಚರಿಕೆ ವಹಿಸುವಂತೆ ಸೂಚಿಸಿದೆ ಮತ್ತು ಇಂತಹ ವ್ಯಕ್ತಿಗಳಿಗೆ ಯಾವುದೇ ವಿವರ ನೀಡದಂತೆ ಹೇಳಿದೆ.
ಬ್ಯಾಂಕ್ ಗಳೂ ಕೂಡ ಈ ಮನವಿ ಮಾಡಿವೆ
ಇದಕ್ಕೂ ಮೊದಲು ವಿವಿಧ ಬ್ಯಾಂಕ್ ಗಳೂ ಕೂಡ ತನ್ನ ಗ್ರಾಹಕರಿಗೆ ಈ ಕುರಿತು ಮನವಿ ಮಾಡಿದ್ದು, ಬ್ಯಾಂಕ್ ನೌಕರರು ಗ್ರಾಹಕರಿಗೆ ಎಂದಿಗೂ ಕೂಡ ಫೋನ್, ಎಸ್.ಎಂ.ಎಸ್, ಇ-ಮೇಲ್ ಇತ್ಯಾದಿಗಳ ಮೂಲಕ ಬ್ಯಾಂಕ್ ಖಾತೆ ವಿವರ, ಇಂಟರ್ನೆಟ್ ಬ್ಯಾಂಕಿಂಗ್ ವಿವರ, ಯುಸರ್ ಐಡಿ, ಪಾಸ್ವರ್ಡ್, CVV ನಂಬರ್, OTP ನಂಬರ್ ಇತ್ಯಾದಿಗಳ ಮಾಹಿತಿ ಕೇಳುವುದಿಲ್ಲ. ಹೀಗಾಗಿ ಈ ವಿವರಗಳನ್ನು ಹಂಚಿಕೊಳ್ಳುವುದರಿಂದ ದೂರವಿರಿ ಎಂದು ಎಚ್ಚರಿಕೆ ನೀಡಿವೆ. ಅಷ್ಟೇ ಅಲ್ಲ ಸಾಮಾಜಿಕ ಮಾಧ್ಯಮಗಳ ಮೂಲಕ ಕೂಡ ವೈಯಕ್ತಿಕ ಮಾಹಿತಿ ಹಂಚಿಕೊಳ್ಳದಂತೆ ಮನವಿ ಮಾಡಿದೆ.