ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ರೊಂದಿಗಿನ ಮೈತ್ರಿ ಸಾಧ್ಯತೆ ಇಲ್ಲ ಎಂದು ರಾಷ್ಟ್ರೀಯ ಜನತಾದಳ(ಆರ್ಜೆಡಿ)ದ ನಾಯಕ ತೇಜಶ್ವಿ ಯಾದವ್ ಮಂಗಳವಾರದಂದು ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಈ ಕುರಿತಾಗಿ ಮಾಧ್ಯಮದೊಂದಿಗೆ ಮಾತನಾಡಿದ ತೇಜಸ್ವಿ ಯಾದವ್ " ನಿತೀಶ್ ಕುಮಾರ್ ಗೆ  ಮೈತ್ರಿಯ ಬಾಗಿಲು ಶಾಶ್ವತವಾಗಿ ಮುಚ್ಚಲ್ಪಟ್ಟಿವೆ."ಎಂದು ತಿಳಿಸಿದರು. ತೇಜಸ್ವಿಯವರ ಹೇಳಿಕೆ ಇತ್ತೀಚಿಗೆ ಬಿಹಾರದ  ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ಮಾಂಜಿ ಅವರು ಒಂದು ವೇಳೆ ನಿತೀಶ್ ಕುಮಾರ್ ತಮ್ಮ ಹುದ್ದೆಯನ್ನು ತ್ಯಜಿಸುತ್ತೇನೆಂದರೆ ಆ ಹುದ್ದೆ  ತೇಜಸ್ವಿ ಸೂಕ್ತ ವ್ಯಕ್ತಿ ಎಂದು ಹೇಳಿದ ನಂತರ ಬಂದಿದೆ.
 
ಫೆಬ್ರವರಿಯಲ್ಲಿ ಮಾಂಜಿ ಯವರು ಆರ್ಜೆಡಿ ನೇತೃತ್ವದ ಮಹಾ ಮೈತ್ರಿಗಾಗಿ ಎನ್ಡಿಎ ಯನ್ನು ತೊರೆದಿದ್ದರು. ಕಳೆದ ಬಿಹಾರದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಯು ಮತ್ತು ಆರ್ಜೆಡಿ ಮೈತ್ರಿ ಮಾಡಿಕೊಂಡು ಭರ್ಜರಿ ಗೆಲುವು ಸಾಧಿಸಿದ್ದರು. ಆದರೆ ಕಾಲಾಂತರದಲ್ಲಿ ನಿತೀಶ್ ಕುಮಾರ್ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡರು.


ಈಗಾಗಲೇ ಆರ್ಜೆಡಿ 2020ರಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಎಂದು ತೇಜಶ್ವಿ ಯಾದವ್ ರನ್ನು ಘೋಷಿಸಿದೆ.