CORONAVIRUS: ಇನ್ಮುಂದೆ ನೀವು ಯಾರಿಗಾದರು ಕರೆ ಮಾಡಿದಾಗ ನಿಮಗೆ ರಿಂಗ್ ಟೋನ್ ಬದಲಾಗಿ ಕೊರೊನಾ ವೈರಸ್ ಕುರಿತಾದ ಎಚ್ಚರಿಕೆಯ ಸಂದೇಶ ಕೇಳಿ ಬರುವ ಎಲ್ಲ ಸಾಧ್ಯತೆಗಳಿವೆ. ಕೊರೊನಾ ವೈರಸ್ ಕುರಿತು ಜಾಗರೂಕತೆ ಮೂಡಿಸುವ ನಿಟ್ಟಿನಲ್ಲಿ ಟೆಲಿಕಾಂ ವಿಭಾಗ ದೇಶಾದ್ಯಂತ ದೂರಸಂಪರ್ಕ ಸೇವೆ ಒದಗಿಸುವ ಕಂಪನಿಗಳಿಗೆ ಆಡಿಯೋ ಸಂದೇಶವನ್ನು ನೀಡಿದ್ದು, ಈ ಸಂದೇಶವನ್ನು ರಿಂಗ್ ಟೋನ್ ಜಾಗದಲ್ಲಿ ಅಳವಡಿಸಲು ನಿರ್ದೇಶನಗಳನ್ನು ನೀಡಿದೆ. PTI ಸುದ್ದಿಸಂಸ್ಥೆ ಪ್ರಕಟಿಸಿರುವ ವರದಿಯೊಂದರ ಪ್ರಕಾರ, ದೂರಸಂಪರ್ಕ ವಿಭಾಗ ಶುಕ್ರವಾರ ಟೆಲಿಕಾಂ ಸೇವೆ ಒದಗಿಸುವ ಕಂಪನಿಗಳಿಗೆ ಇ-ಮೇಲ್ ವೊಂದನ್ನು ರವಾನಿಸಿದ್ದು,  ಈ ಆಡಿಯೋ ಸಂದೇಶದ ಉಪಯೋಗ 'ರಿಂಗ್ ಬ್ಯಾಕ್ ಟೋನ್' ರೂಪದಲ್ಲಿ ಅಳವಡಿಸಲು ಸೂಚಿಸಿದೆ.


COMMERCIAL BREAK
SCROLL TO CONTINUE READING

ದೂರ ಸಂಪರ್ಕ ಸೇವೆ ಒದಗಿಸುವ ಒಂದು ಕಂಪನಿ ನೀಡಿರುವ ಮಾಹಿತಿ ಪ್ರಕಾರ ಹಣ ನೀಡಿ ಕಾಲರ್ ಟ್ಯೂನ್ ಬಳಸುತ್ತಿರುವ ಗ್ರಾಹಕರ ನಂಬರ್ ಗಳ ಮೇಲೆ ಈ ಆಡಿಯೋ ಸಂದೇಶ ಲಭ್ಯ ಇರುವುದಿಲ್ಲ ಎಂದು ಮಾಹಿತಿ ನೀಡಿದ್ದಾರೆ. ಕೊರೊನಾ ವೈರಸ್ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ವಿವಿಧ ಕಾರ್ಪೋರೆಟ್ ಕಂಪನಿಗಳು ವಿವಿದ ರೀತಿಯ ಉಪಾಯಗಳನ್ನು ಮಾಡುತ್ತಿವೆ.


ಪೇಟಿಎಂ, ಟ್ವಿಟ್ಟರ್ ಗಳಂತಹ ಕೆಲ ಕಂಪನಿಗಳು ತನ್ನನೌಕರರಿಗೆ ಮನೆಯಿಂದಲೇ ಕೆಲಸ ಮಾಡುವ ಆಪ್ಶನ್ ನೀಡಿವೆ. ಅಷ್ಟೇ ಅಲ್ಲ ಕೆಲ ದೊಡ್ಡ ದೊಡ್ಡ ಕಂಪನಿಗಳು ತಮ್ಮ ಕಂಪನಿಯಲ್ಲಿ ಬಯೋಮೆಟ್ರಿಕ್ ಯಂತ್ರಗಳ ಉಪಯೋಗದ ಮೇಲೂ ಕೂಡ ನಿರ್ಭಂಧನೆ ವಿಧಿಸಿವೆ. ದೇಶಾದ್ಯಂತ ಕ್ಯಾಬ್ ಸೇವೆ ಒದಗಿಸುವ ಓಲಾ ಕಂಪನಿ ಕೂಡ ತನ್ನ ಕ್ಯಾಬ್ ಗಳ ಡ್ರೈವರ್ ಗಳಿಗೆ ಸ್ಯಾನಿಟೈಸರ್ ಹಾಗೂ ಫೆಸ್ ಮಾಸ್ಕ್ ಗಳನ್ನು ವಿತರಿಸಿದೆ.


ಕೊರೊನಾ ವೈರಸ್ ಕುರಿತು ದೇಶಾದ್ಯಂತ ಜಾಗರೂಕತೆ ಮೂಡಿಸುವ ಅಗತ್ಯವಿದೆ. ಸರ್ಕಾರದ ವತಿಯಿಂದ ಟೆಲಿಕಾಂ ಕಂಪನಿಗಳಿಗೆ ನೀಡಲಾಗಿರುವ ನಿರ್ದೇಶನಗಳಲ್ಲಿ ಇದೂ ಕೂಡ ಶಾಮೀಲಾಗಿದೆ. ಕೊರೊನಾ ವೈರಸ್ ಗೆ ಸಂಬಂಧಿಸಿದ ಈ ಆಡಿಯೋ ಸಂದೇಶದಿಂದ ದೇಶಾದ್ಯಂತ ಇರುವ ಕೋಟ್ಯಂತರ ನಾಗರಿಕರಿಗೆ ನೇರವಾಗಿ ಕೊರೊನಾ ವೈರಸ್ ಕುರಿತು ಮಾಹಿತಿ ಸಿಗಲಿದೆ.