125-Ft Tall Ambedkar's Statue In Hyderabad: ಇಂದು ಏಪ್ರಿಲ್ 14ರಂದು ದೇಶಾದ್ಯಂತ ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಜಯಂತಿಯನ್ನು ಆಚರಿಸಲಾಗುತ್ತಿದೆ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಜನ್ಮದಿನದಂದು ಹೈದರಾಬಾದ್‌ನಲ್ಲಿ 125 ಅಡಿ ಎತ್ತರದ ಅಂಬೇಡ್ಕರ್ ಪ್ರತಿಮೆಯನ್ನು ಅನಾವರಣಗೊಳಿಸಲು ಸಿದ್ಧತೆ ನಡೆದಿದೆ. 


COMMERCIAL BREAK
SCROLL TO CONTINUE READING

ರಾಜ್ಯ ಸಚಿವಾಲಯದ ಪಕ್ಕದಲ್ಲಿ ಬುದ್ಧನ ಪ್ರತಿಮೆಯ ಎದುರು ಮತ್ತು ತೆಲಂಗಾಣ ಹುತಾತ್ಮರ ಸ್ಮಾರಕದ ಪಕ್ಕದಲ್ಲಿ ಅಂಬೇಡ್ಕರ್ ಅವರ 125 ಅಡಿಗಳ  ಎತ್ತರದ ಪ್ರತಿಮೆಯನ್ನು ನಿರ್ಮಿಸಲಾಗಿದ್ದು,  ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರು ಈ ಎತ್ತರದ ಅಂಬೇಡ್ಕರ್ ಪ್ರತಿಮೆಯನ್ನು ಆನಾವರಣಗಿಳಿಸಲಿದ್ದಾರೆ.  ಈ ಕಾರ್ಯಕ್ರಮಕ್ಕೆ  ಅಂಬೇಡ್ಕರ್ ಅವರ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ಅವರನ್ನು  ಏಕೈಕ ಮುಖ್ಯ ಅತಿಥಿಯಾಗಿ ಆಹ್ವಾನಿಸಲಾಗಿದೆ ಎಂದು ತಿಳಿದುಬಂದಿದೆ. 


ಇದನ್ನೂ ಓದಿ- ನನ್ನ ರಾಜಕೀಯ ಬದುಕು ಅಂಬೇಡ್ಕರ್ ಚಿಂತನೆಯ ಫಲ: ಸಿದ್ದರಾಮಯ್ಯ


ಹೈದರಾಬಾದ್‌ನಲ್ಲಿ  ಅನಾವರಣಗೊಳ್ಳಲಿರುವ 125 ಅಡಿ ಎತ್ತರದ ಅಂಬೇಡ್ಕರ್ ಪ್ರತಿಮೇಯ ಬಗ್ಗೆ ಇಲ್ಲಿವೆ ಕೆಲವು ಆಸಕ್ತಿದಾಯಕ ಸಂಗತಿಗಳು:
>> ತೆಲಂಗಾಲ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಬಾಬಾ ಸಾಹೇಬ್ ಅಂಬೇಡ್ಕರ್ ಪ್ರತಿಮೆಯನ್ನು ಸ್ಥಾಪಿಸುವ ನಿರ್ಧಾರವನ್ನು ತೆಗೆದುಕೊಂಡಾಗಿನಿಂದ ಇದರ  ತಾಂತ್ರಿಕ ಮತ್ತು ಉತ್ಪಾದನಾ ಕ್ರಮಗಳನ್ನು ಅಂತಿಮಗೊಳಿಸಲು ಸರಿ ಸುಮಾರು 2 ವರ್ಷಗಳು ಬೇಕಾಯಿತು. 


>> ಹೈದರಾಬಾದ್‌ನಲ್ಲಿ  ಲೋಕಾರ್ಪಣೆಗೊಳ್ಳಲಿರುವ 125 ಅಡಿ ಎತ್ತರದ ಅಂಬೇಡ್ಕರ್ ಪ್ರತಿಮೆ ಭಾರತದ ಅತಿ ಎತ್ತರದ ಅಂಬೇಡ್ಕರ್ ಪ್ರತಿಮೆಯಾಗಲಿದೆ.


>> ಅಂಬೇಡ್ಕರ್ ಅವರ ಅತಿ ಎತ್ತರದ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರಾದ ಪ್ರತಿಮೆಯ ಶಿಲ್ಪಿ 98 ವರ್ಷದ ರಾಮ್ ವಾಂಜಿ ಸುತಾರ್ ಅವರನ್ನು ಸಹ ಆಹ್ವಾನಿಸಲಾಗಿದೆ. 


>> ಡಾ. ಬಿ. ಆರ್. ಅಂಬೇಡ್ಕರ್ ಅವರ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ಅವರನ್ನೂ ಕಾರ್ಯಕ್ರಮಕ್ಕೆ ಏಕೈಕ ಮುಖ್ಯ ಅತಿಥಿಯಾಗಿ ಆಹ್ವಾನಿಸಲಾಗಿದೆ ಎಂದು ಅಧಿಕೃತ ಪ್ರಕಟನೆಯಿಂದ ತಿಳಿದುಬಂದಿದೆ. 


>> ಅಂಬೇಡ್ಕರ್ ಪ್ರತಿಮೆ ಅನಾವರಣ ಸಭೆಗೆ ರಾಜ್ಯದ ಎಲ್ಲಾ 119 ಕ್ಷೇತ್ರಗಳಿಂದ 35,000 ಕ್ಕೂ ಹೆಚ್ಚು ಜನರು ಪ್ರತಿ ವಿಧಾನಸಭಾ ಕ್ಷೇತ್ರದಿಂದ 300 ಜನರೊಂದಿಗೆ ಪಾಲ್ಗೊಳ್ಳುವಂತೆ ವ್ಯವಸ್ಥೆ ಮಾಡಲಾಗಿದೆ.  ಸಾರ್ವಜನಿಕರಿಗೆ 750 ಸರ್ಕಾರಿ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳನ್ನು ನಿರ್ವಹಿಸಲಾಗುವುದು ಎಂದು ತಿಳಿದುಬಂದಿದೆ. 


>> ಹೈದರಾಬಾದ್ ತಲುಪುವ ಮೊದಲು 50 ಕಿ.ಮೀ ಒಳಗೆ ವಿಧಾನಸಭೆ ಸಂಕೀರ್ಣಕ್ಕೆ ಬರುವ ಜನರಿಗೆ ಆಹಾರದ ವ್ಯವಸ್ಥೆಯನ್ನು ಕೂಡ ಕಲ್ಪಿಸಲಾಗಿದೆ. 


>> ಒಂದು ಲಕ್ಷ ಸಿಹಿ ಪ್ಯಾಕೆಟ್‌ಗಳು, 1.50 ಲಕ್ಷ ಬೆಣ್ಣೆ ಹಾಲಿನ ಪ್ಯಾಕೆಟ್‌ಗಳು ಮತ್ತು ಅಷ್ಟೇ ಸಂಖ್ಯೆಯ ನೀರಿನ ಪ್ಯಾಕೆಟ್‌ಗಳನ್ನು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಲಾಗುವುದು ಎಂದು ಅಧಿಕೃತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. 


ಇದನ್ನೂ ಓದಿ- ಕಾಂಗ್ರೆಸ್‌ಗೆ ಅಂಬೇಡ್ಕರ್‌ ಮೇಲಾಗಲಿ, ಸಂವಿಧಾನದ ಮೇಲಾಗಲಿ ಪ್ರೀತಿ ಇಲ್ಲ : ಸಿಎಂ ಬೊಮ್ಮಾಯಿ


ಡಾ. ಬಿ.ಆರ್. ಅಂಬೇಡ್ಕರ್ ಅವರ ಬಗೆಗಿನ ಕೆಲವು ಪ್ರಮುಖ ಸಂಗತಿಗಳು: 
ಭಾರತೀಯ ಸಂವಿಧಾನದ ಪಿತಾಮಹ, ಎಲ್ಲರ ಪ್ರೀತಿಯ ಬಾಬಾಸಾಹೇಬ್ ಅಂಬೇಡ್ಕರ್ 1891 ರ ಏಪ್ರಿಲ್ 14 ರಂದು ಜನಸಿದರು. ಅವರ  ಪೂರ್ಣ ಹೆಸರು ಭೀಮರಾವ್ ರಾಮ್‌ಜಿ ಅಂಬೇಡ್ಕರ್. ಬಿ. ಆರ್ ಅಂಬೇಡ್ಕರ್ ಅವರ ಮೂಲ ಮನೆತನದ ಹೆಸರು ಅಂಬಾವಾಡೇಕರ್. ಅವರ ಶಿಕ್ಷಕರು ಶಾಲೆಯ ದಾಖಲೆಗಳಲ್ಲಿ ಅವರ ಕೊನೆಯ ಹೆಸರನ್ನು 'ಅಂಬಾವಡೇಕರ್' ನಿಂದ ಅವರ ಸ್ವಂತ ಉಪನಾಮ 'ಅಂಬೇಡ್ಕರ್' ಎಂದು ಬದಲಾಯಿಸಿದ್ದರು. 


ಚಿಕ್ಕ ವಯಸ್ಸಿನಿಂದಲೂ ಓದುವುದರಲ್ಲಿ ತುಂಬಾ ಆಸಕ್ತಿ ಹೊಂದಿದ್ದ ಬಿ.ಆರ್. ಅಂಬೇಡ್ಕರ್ ಅವರು ಹಿಂದಿ, ಪಾಲಿ, ಸಂಸ್ಕೃತ, ಇಂಗ್ಲಿಷ್, ಫ್ರೆಂಚ್, ಜರ್ಮನ್, ಮರಾಠಿ, ಪರ್ಷಿಯನ್, ಗುಜರಾತಿ ಮುಂತಾದ ಭಾಷೆಗಳಲ್ಲಿ ಪ್ರವೀಣರಾಗಿದ್ದಾರೆ. ಅವರು 64 ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ 8 ವರ್ಷಗಳ ಕೋರ್ಸ್ ಅನ್ನು ಕೇವಲ 2 ವರ್ಷ ಮತ್ತು 3 ತಿಂಗಳಲ್ಲಿ ಪೂರ್ಣಗೊಳಿಸಿದರು. ಇದಕ್ಕಾಗಿ ದಿನದ 21 ಗಂಟೆ ಅಧ್ಯಯನ ಮಾಡುತ್ತಿದ್ದರು.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.