ಸೈಕಲ್ ಏರಿ ಬಂದು ಅಧಿಕಾರ ಸ್ವೀಕರಿಸಿದ ಆರೋಗ್ಯ ಸಚಿವ ಡಾ.ಹರ್ವವರ್ಧನ್
ಡಾ.ಹರ್ಷವರ್ಧನ್ ಮೇ 2014 ರಲ್ಲಿ ಕೇಂದ್ರ ಆರೋಗ್ಯ ಸಚಿವರಾಗಿ ನೇಮಕಗೊಂಡರು, ಆದರೆ ನಂತರ ಅವರು ಭೂ ವಿಜ್ಞಾನ ಮತ್ತು ತಂತ್ರಜ್ಞಾನದ ಸಚಿವಾಲಯದ ಜವಾಬ್ದಾರಿಯನ್ನು ವಹಿಸಿಕೊಂಡರು.
ನವದೆಹಲಿ: ಕೇಂದ್ರ ಆರೋಗ್ಯ ಸಚಿವ ಮತ್ತು ಚಾಂದನಿ ಚೌಕ್ ಪಾರ್ಲಿಮೆಂಟರಿ ಕ್ಷೇತ್ರದ ಸಂಸದ ಡಾ. ಹರ್ಷವರ್ಧನ್ ಸೋಮವಾರ ಸೈಕಲ್ ಏರಿ ಬಂದು ಆರೋಗ್ಯ ಸಚಿವಾಲಯ ತಲುಪಿದರು. ಮಾಲಿನ್ಯದ ವಾತಾವರಣ ಮತ್ತು ದೇಶದ ಜನತೆಗೆ ಆರೋಗ್ಯಕರ ಸಂದೇಶವನ್ನು ನೀಡಲು ಈ ಹೆಜ್ಜೆಯನ್ನು ತೆಗೆದುಕೊಳ್ಳಲಾಗಿದೆ ಎಂದು ಡಾ. ಹರ್ಷವರ್ಧನ್ ಹೇಳಿದ್ದಾರೆ.
ಸೈಕಲ್‌ನಲ್ಲಿ ಬಂದು ಕೇಂದ್ರ ಸರ್ಕಾರದ ನೂತನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಗಿ ಡಾ. ಹರ್ಷವರ್ಧನ್ ಇಂದು ಅಧಿಕಾರ ಸ್ವೀಕರಿಸಿದ್ದಾರೆ.
ವೈದ್ಯ ಮತ್ತು ರಾಜಕಾರಣಿ ಡಾ.ಹರ್ಷವರ್ಧನ್ ಮತ್ತೊಮ್ಮೆ ಆರೋಗ್ಯ ಸಚಿವಾಲಯದ ಅಧಿಕಾರ ವಹಿಸಿಕೊಂಡಿದ್ದಾರೆ. ಹಿಂದಿನ ಸರಕಾರದಲ್ಲಿ, ಮೇ 2014 ರಲ್ಲಿ ಆರೋಗ್ಯ ಸಚಿವರಾಗಿದ್ದ ಡಾ.ಹರ್ಷವರ್ಧನ್ ನಂತರ ಮೇ 2017 ರಲ್ಲಿ ಭೂ ವಿಜ್ಞಾನ ಮತ್ತು ತಂತ್ರಜ್ಞಾನದ ಸಚಿವಾಲಯದ ಜವಾಬ್ದಾರಿ ವಹಿಸಿಕೊಂಡಿದ್ದರು. ನಂತರ, ಹರ್ಷವರ್ಧನ್ ಬದಲಿಗೆ, ಜೆ.ಪಿ. ನಡ್ಡ ಆರೋಗ್ಯ ಸಚಿವರಾಗಿದ್ದರು.