ಬಾಲಿವುಡ್ ಸೂಪರ್ಸ್ಟಾರ್ ಅಮಿತಾಭ್ ಬಚ್ಚನ್ ಅವರ ಛಾಯಾಚಿತ್ರದೊಂದಿಗೆ ಅಡ್ಮಿಟ್ ಕಾರ್ಡ್ ಅನ್ನು ಉತ್ತರ ಪ್ರದೇಶದ ಒಂದು ವಿಶ್ವವಿದ್ಯಾನಿಲಯವು ನೀಡಿದೆ. ಸುದ್ದಿ ಸಂಸ್ಥೆ ANI ಪ್ರಕಾರ, ಉತ್ತರ ಪ್ರದೇಶದ ಫೈಜಾಬಾದ್ನ ಡಾ. ರಾಮ್ ಮನೋಹರ್ ಲೋಹಿಯಾ ಅವಧ್ದ್ ವಿಶ್ವವಿದ್ಯಾಲಯವು ಬ್ಯಾಚುಲರ್ ಆಫ್ ಎಜುಕೇಶನ್ (ಬಿ.ಎಡ್) ವಿದ್ಯಾರ್ಥಿಗೆ ಈ ಪ್ರವೇಶ ಪತ್ರವನ್ನು ನೀಡಿದೆ.


COMMERCIAL BREAK
SCROLL TO CONTINUE READING

ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯ ರವೀಂದ್ರ ಸಿಂಗ್ ಸ್ಮಾರಕ್ ಮಹಾವಿದ್ಯಾಲಯದ ಬಿ.ಎಡ್ ವಿದ್ಯಾರ್ಥಿಗೆ ವಿಶ್ವವಿದ್ಯಾನಿಲಯವು ಈ ಅಡ್ಮಿಟ್ ಕಾರ್ಡ್ ನೀಡಲಾಗಿದೆ.


ವಿಶ್ವ ವಿದ್ಯಾನಿಲಯದ ಆಡಳಿತದಿಂದ ಆಗಿರುವ ಎಡವಟ್ಟಿನ ಬಗ್ಗೆ ಕಳವಳ ವ್ಯಕ್ತಪಡಿಸಿರುವ ವಿದ್ಯಾರ್ಥಿ, "ನನ್ನ ಛಾಯಾಚಿತ್ರವನ್ನು ಅಪ್ಲಿಕೇಶನ್ ಫಾರ್ಮ್ ನೊಂದಿಗೆ ನೀಡಿ ನಾನು ಅರ್ಜಿಯನ್ನು ಭರ್ತಿ ಮಾಡಿದ್ದೇನೆ. ಆದರೂ ಅಡ್ಮಿಟ್ ಕಾರ್ಡ್ ಈ ರೀತಿ ಬಂದಿದೆ. ನನ್ನ ಮಾರ್ಕ್ ಶೀಟ್ ಕೂಡ ಅಮಿತಾಭ್ ಬಚ್ಚನ್ ಜೀ ಅವರ ಛಾಯಾಚಿತ್ರದೊಂದಿಗೆ ಬರಲಿದೆಯೇನೋ ಎಂದು ನನಗೆ ಚಿಂತೆಯಾಗಿದೆ" ಎಂದಿದ್ದಾರೆ.



ಆದಾಗ್ಯೂ, ವಿದ್ಯಾರ್ಥಿ ಸ್ವತಃ ಅಥವಾ ಇಂಟರ್ನೆಟ್ ಕೆಫೆ ಅವರು ಪರೀಕ್ಷೆ ಫಾರ್ಮ್ ಭರ್ತಿ ಮಾಡುವಾಗ ದೋಷ ಉಂಟಾಗಿರಬಹುದೆಂದು ಕಾಲೇಜು ಆಡಳಿತ ಮಂಡಳಿ ತಿಳಿಸಿದೆ. ಅಲ್ಲಿ ದೋಷವನ್ನು ಬದ್ಧವಾಗಿದೆ ಎಂದು ಹೇಳಿದರು. ರವೀಂದ್ರ ಸಿಂಗ್ ಸ್ಮಾರಕ್ ಮಹಾವಿದ್ಯಾಲಯದ ಹಿರಿಯ ಅಧಿಕಾರಿ ಜಿ.ಮಿಶ್ರಾ ಅವರು ಪರೀಕ್ಷೆಗೆ ಕೂರಲು ವಿದ್ಯಾರ್ಥಿಗೆ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ ಎಂದು ಹೇಳಿದರು.


ಸುದ್ದಿ ಸಂಸ್ಥೆ ಎಎನ್ಐಗೆ ಮಾತನಾಡಿದ ಮಿಶ್ರಾಮ್ "ವಿದ್ಯಾರ್ಥಿ ಫಾರ್ಮ್ ಭರ್ತಿ ಮಾಡುವಾಗ ವಿದ್ಯಾರ್ಥಿ ಅಥವಾ ಇಂಟರ್ನೆಟ್ ಕೆಫೆಯಲ್ಲಿ ಈ ರೀತಿ ದೋಷ ಸಂಭವಿಸಿರುವ ಸಾಧ್ಯತೆ ಇದೆ. ಅವರಿಗೆ ಪರೀಕ್ಷೆ ಬರೆಯಲು ಅನುವು ಮಾಡಿಕೊಡಲಾಗಿದೆ. ನಾವು ಈ ಬಗ್ಗೆ ಪರೀಕ್ಷಾ ಕೇಂದ್ರದ ಮುಖ್ಯಸ್ಥರೊಂದಿಗೆ ಮಾತನಾಡಿದ್ದೇವೆ. ಮಾರ್ಕ್ ಶೀಟ್ ನೀಡುವುದರಲ್ಲಿ ಯಾವುದೇ ರೀತಿಯ ಎಡವಟ್ಟು ಆಗದಂತೆ ಪ್ರಯತ್ನಿಸಲಾಗುವುದು" ಎಂದು ತಿಳಿಸಿದರು.