ನವದೆಹಲಿ: ಗುಜರಾತಿನ ಸಬರ್ಕಂತಾ ಜಿಲ್ಲೆಯ ದೇರೋಲ್ ಗ್ರಾಮದ ಬಳಿ ವ್ಯಾಗನಾರ್ ಕಾರಿಗೆ ಬೆಂಕಿ ಹತ್ತಿಕೊಂಡು 40 ವರ್ಷ ವಯಸ್ಸಿನ ಕಾರಿನ ಚಾಲಕ ಮೃತಪಟ್ಟಿದ್ದಾನೆ.ಮೃತಪಟ್ಟಿರುವ ಚಾಲಕನನ್ನು  ಪರೇಶ್ ದೇಸಾಯಿ ಎಂದು ತಿಳಿದುಬಂದಿದೆ.


COMMERCIAL BREAK
SCROLL TO CONTINUE READING

ಈ ಘಟನೆಯ ಕುರಿತಾಗಿ ಪ್ರತಿಕ್ರಿಯಿಸಿರುವ ಹಿಮ್ಮತ್ ನಗರದ ಗ್ರಾಮೀಣ ವಿಭಾಗದ ಪೊಲೀಸರು " ದೇಸಾಯಿ ಕಾರನ್ನು ಓಡಿಸುತ್ತಿದ್ದಾಗ  ಕಾರಿಗೆ  ಇದ್ದಕಿದ್ದಂತೆ ಬೆಂಕಿ ಹತ್ತಿಕೊಂಡಿದೆ .ಈ ಸಂದರ್ಭದಲ್ಲಿ ಕಾರಿನಿಂದ ಹೊರ ಬರಲು ಸಾಧ್ಯವಾಗದೆ ಮೃತಪಟ್ಟಿದ್ದಾನೆ. ಕಾರು ಸುತ್ತು ಕರಕಲವಾಗಿದೆ" ಎಂದು  ಅವರು ತಿಳಿಸಿದ್ದಾರೆ.


ದೇಸಾಯಿಯವರು ಮೂಲತ ಉದ್ಯಮಿಯಾಗಿದ್ದು ಅವರು ಮೆಹ್ಸಾನಾ ಜಿಲ್ಲೆಯ ವಿಜಾಪುರದಿಂದ ಹಿಮ್ಮತ್ ನಗರಕ್ಕೆ ಪ್ರಯಾಣ ಬೆಳೆಸಿದ್ದರು ಎಂದು ಹೇಳಲಾಗಿದೆ.ಅಪಘಾತದ ಸಾವಿನ ಪ್ರಕರಣವನ್ನು ಹಿಮತ್ನಗರದ (ಗ್ರಾಮೀಣ) ಪೊಲೀಸ್ ಠಾಣೆಯಲ್ಲಿ ನೋಂದಾಯಿಸಲಾಗಿದೆ ಮತ್ತು ದೇಸಾಯಿಯ ದೇಹವನ್ನು ಕುಟುಂಬದ ಸದಸ್ಯರಿಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.