ನವದೆಹಲಿ: ದೇಶದಲ್ಲಿ 5ಜಿ ರೋಲ್ ಔಟ್ ಗೆ ಆಕ್ಷೇಪ ವ್ಯಕ್ತಪಡಿಸಿರುವ ಬಾಲಿವುಡ್ ನಟಿ ಜೂಹಿ ಚಾವ್ಲಾ ದೆಹಲಿ ಹೈಕೋರ್ಟ್ ನಲ್ಲಿ ಇದರ ವಿರುದ್ಧವಾಗಿ ಅರ್ಜಿ ಸಲ್ಲಿಸಿದ್ದಾರೆ.


COMMERCIAL BREAK
SCROLL TO CONTINUE READING

ಈಗ ಇದರ ಕುರಿತಾಗಿ ದೆಹಲಿ ಹೈಕೋರ್ಟ್ ವಿಚಾರಣೆ ನಡೆಸಿರುವ ಸಂದರ್ಭದಲ್ಲಿ ನಟಿ ಜೂಹಿ ನ್ಯಾಯಾಲಯದ ವಿಚಾರಣೆಯ ಲಿಂಕ್ ನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ನಂತರ ಹಲವಾರು ಅಭಿಮಾನಿಗಳು ಸೇರಿಕೊಂಡರು.


ಇದನ್ನೂ ಓದಿ- ಭೋಜನದ ನಂತರ ಸಾಮಾನ್ಯವಾಗಿ ಮಾಡುವ ಈ ತಪ್ಪನ್ನು ಸರಿಪಡಿಸಿಕೊಳ್ಳಿ


1990 ರ ದಶಕದಲ್ಲಿ ಬಾಲಿವುಡ್‌ನ ಅಗ್ರಗಣ್ಯ ತಾರೆಯಾಗಿದ್ದ ಜುಹಿ ಚಾವ್ಲಾ (Juhi Chawla) 5 ಜಿ ವಿರುದ್ಧ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ಇದು ಜನರ ಮೇಲೆ ಹಾಗೂ ಪರಿಸರದ ಮೇಲೆ ಶಾಶ್ವತ ಹಾನಿಯನ್ನುಂಟುಮಾಡುತ್ತದೆ ಎಂದು ವಾದಿಸಿದ್ದಾರೆ.ನ್ಯಾಯಮೂರ್ತಿ ಜೆ.ಆರ್ ಮಿಧಾ ಅವರು ಜುಹಿ ಚಾವ್ಲಾ ಮತ್ತು ಇತರ ಇಬ್ಬರು ಅರ್ಜಿದಾರರು ಮೊದಲು ಸರ್ಕಾರವನ್ನು ಸಂಪರ್ಕಿಸಿ ನಂತರ ನ್ಯಾಯಾಲಯಕ್ಕೆ ಬರಬೇಕು ಎಂದು ವಿಚಾರಣೆ ವೇಳೆ ಹೇಳಿದ್ದಾರೆ.ಈ ವಿಚಾರದ ಕುರಿತಾಗಿ ಯಾವುದೇ ಆರ್ಡರ್ ನೀಡಿಲ್ಲ, ಆದರೆ ಜೂಹಿ ಚಾವ್ಲಾ ಅವರ ಹಿಟ್ ಚಿತ್ರಗಳಿಂದ ಹಾಡುವ ಅಭಿಮಾನಿ ವಿರುದ್ಧ ನೋಟಿಸ್ ಜಾರಿ ಮಾಡಲಾಗಿದೆ.


 

 

 

 



 

 

 

 

 

 

 

 

 

 

 

A post shared by Juhi Chawla (@iamjuhichawla)


ಇದನ್ನೂ ಓದಿ-ಹೊರಗಿನಿಂದ ಮನೆಗೆ ಬರುವಾಗ ಈ ವಿಚಾರಗಳ ಬಗ್ಗೆ ಇರಲಿ ಎಚ್ಚರ..!


ವಿಚಾರಣೆ ಪ್ರಾರಂಭವಾದ ತಕ್ಷಣ ಮತ್ತು ಅವರು ಲಾಗಿನ್ ಆದಾಗ ಯಾರೋ 1993 ರಲ್ಲಿ ಅವರ "ಹಮ್ ಹೈ ರಾಹಿ ಪ್ಯಾರ್ ಕೆ" ಚಲನಚಿತ್ರದ "ಘೂಂಗ್ಹಾಟ್ ಕಿ ಆಡ್ ಸೆ" ಹಾಡನ್ನು ಹಾಡಲು ಪ್ರಾರಂಭಿಸಿದರು. ಈ ಸಂದರ್ಭದಲ್ಲಿ ನ್ಯಾಯಾಧೀಶ ಮಿಧಾ 'ದಯವಿಟ್ಟು ಮ್ಯೂಟ್ ಮಾಡಿ' ಎಂದು ವಿನಂತಿಸಿಕೊಂಡರು.ಇದಾದ ನಂತರ ಯಾರೂ ಮತ್ತೆ ಹಾಡನ್ನು ಹಾಡಲು ಆರಂಭಿಸಿದಾಗ ಅವರನ್ನು ವಿಚಾರಣೆಯಿಂದ ತೆಗೆದು ಹಾಕಲಾಯಿತು. ಮೂರನೇ ಬಾರಿಗೆ ನ್ಯಾಯಾಧೀಶರು ವ್ಯಕ್ತಿಯನ್ನು ಗುರುತಿಸಿ ತಿರಸ್ಕಾರ ನೋಟಿಸ್ ನೀಡುವಂತೆ ಸೂಚಿಸಿದರು.


ಇದನ್ನೂ ಓದಿ: Model Tenancy Act: ಮಾದರಿ ಹಿಡುವಳಿ ಕಾಯ್ದೆಗೆ ಕೇಂದ್ರ ಸರ್ಕಾರದ ಅನುಮತಿ


ಜುಹಿ ಚಾವ್ಲಾ, ವೀರೇಶ್ ಮಲಿಕ್ ಮತ್ತು ಟೀನಾ ವಚಾನಿ ಅವರ 5 ಜಿ ಮೊಕದ್ದಮೆ 'ಈ ಯೋಜನೆಗಳು ಜಾರಿಗೆ ಬಂದಿದ್ದೆ ಆದಲ್ಲಿ 'ಭೂಮಿಯ ಮೇಲಿನ ಯಾವುದೇ ವ್ಯಕ್ತಿ, ಪ್ರಾಣಿ, ಪಕ್ಷಿ, ಕೀಟ ಮತ್ತು ಸಸ್ಯವು ಇದರಿಂದ ತಪ್ಪಿಸಲು ಸಾಧ್ಯವಾಗುವುದಿಲ್ಲ, ದಿನದ 24 ಗಂಟೆ, 365 ವರ್ಷದ ದಿನಗಳು, ಆರ್ಎಫ್ ವಿಕಿರಣದ ಮಟ್ಟಗಳಿಗೆ ಇಂದು ಇರುವದಕ್ಕಿಂತ 10x ರಿಂದ 100x ಪಟ್ಟು ಹೆಚ್ಚಾಗಲಿವೆ" ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.