ನವದೆಹಲಿ: ಅಕ್ಟೋಬರ್ 31 ರಂದು, ಜಮ್ಮು ಮತ್ತು ಕಾಶ್ಮೀರವನ್ನು ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ನ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಲಾಗಿದೆ. ಈ ಬಗ್ಗೆ  #ಜೀ ನ್ಯೂಸ್ ನ # ಇಂಡಿಯಾಕಾಡಿಎನ್ಎ ಕಾನ್ಕ್ಲೇವ್ನಲ್ಲಿ ಮಾತನಾಡಿರುವ ಕೇಂದ್ರ ಸಚಿವ ಜನರಲ್ ವಿ.ಕೆ. ಸಿಂಗ್, ನಾನು ಮೊದಲು ಕಾಶ್ಮೀರಕ್ಕೆ ಬಂದಾಗ ನಾನು 10 ವರ್ಷದವನಿದ್ದೆ. ನೀವು ಭಾರತದಿಂದ ಬಂದಿದ್ದೀರಾ ಎಂದು ಕಾಶ್ಮೀರದ ಜನರು ಕೇಳುತ್ತಿದ್ದರು. ಈ ಬಗ್ಗೆ ತಂದೆಯವರ ಬಳಿ ಪ್ರಶ್ನಿಸಿದಾಗ, ಕಾಶ್ಮೀರದಲ್ಲಿ 370 ನೇ ವಿಧಿಯ ಪರಿಚಯದಿಂದಾಗಿ, ಇಲ್ಲಿನ ಜನರಲ್ಲಿ ಇಂತಹ ಭಾವನೆ ಉದ್ಭವಿಸಿದೆ ಎಂದು ಹೇಳಿದರು. ಈ ಹಿನ್ನೆಲೆಯಲ್ಲಿ, 370 ನೇ ವಿಧಿ ರದ್ಧತಿ ಬಹಳ ಮುಖ್ಯ ಎಂದು ಹೇಳಿದರು.


COMMERCIAL BREAK
SCROLL TO CONTINUE READING

ಈ ಆರ್ಟಿಕಲ್ ನಿಂದಾಗಿ ಕಾಶ್ಮೀರದ ಕೆಲ ಜನರು ತಮ್ಮನ್ನು ಭಾರತದವರೆಂದು ಭಾವಿಸಿರಲಿಲ್ಲ. ಈಗ ಈ ಆರ್ಟಿಕಲ್ ಅನ್ನು ತೆಗೆದುಹಾಕಿರುವುದನ್ನು ದೇಶಭಕ್ತರು ವಿರೋಧಿಸುವುದಿಲ್ಲ ಎಂದು ಸಿಂಗ್ ಹೇಳಿದರು. ಕೆಲವರು ತಮ್ಮ ಪಕ್ಷದ ಸ್ವಾರ್ಥವನ್ನು ಮಾತ್ರ ನೋಡುತ್ತಾರೆ. ಆದರೆ ಕಾಶ್ಮೀರ ಪಾಕಿಸ್ತಾನಕ್ಕೆ ದೊಡ್ಡ ವಿಷಯವಾಗಿದೆ ಎಂಬುದನ್ನು ನೆನಪಿಡಬೇಕು ಎಂದವರು ತಿಳಿಸಿದರು.


ಕೇಂದ್ರ ಸಚಿವ ಜನರಲ್ ವಿ.ಕೆ. ಸಿಂಗ್ ಅವರು ಕಾಶ್ಮೀರದ ಬಗೆಗಿನ ಅಭಿಪ್ರಾಯದ ಬಗ್ಗೆ ಒಂದು ಉಪಾಖ್ಯಾನವನ್ನು ವಿವರಿಸುವಾಗ, ಒಮ್ಮೆ ಪಂಡಿತ್ ನೆಹರೂ ಅವರು ಶೇಖ್ ಅಬ್ದುಲ್ಲಾ ಅವರ ಮುಂದೆ ಈ ಮಾತನ್ನು ಪ್ರಸ್ತಾಪಿಸಿದಾಗ, ಕಾಶ್ಮೀರ ಭಾರತದ ಒಂದು ಭಾಗವಾಗಿದೆ ಮತ್ತು ನಾವು ಅದರ ಪ್ರತಿನಿಧಿ ಎಂದು ಹೇಳಿದರು. ಅಂತಹ ಪರಿಸ್ಥಿತಿಯಲ್ಲಿ, ನಾವು ಭಾರತದ ನಿವಾಸಿಗಳು ಎಂದು ಹೇಳುತ್ತಿದ್ದರೆ, ಅಭಿಪ್ರಾಯದ ಅಗತ್ಯವಿಲ್ಲ. ಆದರೆ ಇದರ ಹೊರತಾಗಿಯೂ, ಪಂಡಿತ್ ನೆಹರೂ ಅವರು ಶ್ರೀನಗರದ ಲಾಲ್ ಚೌಕ್‌ನಲ್ಲಿ ತಮ್ಮ ಭಾಷಣದಲ್ಲಿ ಇದನ್ನು ಉಲ್ಲೇಖಿಸಿದ್ದಾರೆ. ಅದರ ನಂತರ ಇದನ್ನು ವಿಶ್ವಸಂಸ್ಥೆಯಲ್ಲೂ ಉಲ್ಲೇಖಿಸಲಾಗಿದೆ. ಇಂತಹ ತಪ್ಪುಗಳಿಂದಾಗಿ, ಆರ್ಟಿಕಲ್ 370 ಹೆಸರಿನ ತಾತ್ಕಾಲಿಕ ವ್ಯವಸ್ಥೆಯು 70 ವರ್ಷಗಳವರೆಗೆ ಮುಂದುವರೆದಿದೆ ಮತ್ತು ಕಾಶ್ಮೀರ ಸಮಸ್ಯೆಯ ಪರಿಹರಿಸಲಾಗಿರಲಿಲ್ಲ ಎಂದು ವಿ.ಕೆ. ಸಿಂಗ್ ಹೇಳಿದರು.