ನವದೆಹಲಿ: ಕಾಂಗ್ರೆಸ್ ಪಕ್ಷವು ವಂಶಪಾರಂಪರ್ಯ ರಾಜಕೀಯಕ್ಕೆ ಆಧ್ಯತೆ ನೀಡಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಡೆಗಣಿಸಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಟೀಕಿಸಿದರು.


COMMERCIAL BREAK
SCROLL TO CONTINUE READING

ಹೈದರಾಬಾದ್ ನಲ್ಲಿ ಭಾರತೀಯ ಜನತಾ ಯುವ ಮೋರ್ಚಾವನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವ ಗಡ್ಕರಿ "ನಾವು ಬಡವರನ್ನು ಹೊಂದಿರುವ ಶ್ರೀಮಂತ ದೇಶವಾಗಿದ್ದು, ಈ ಹಿಂದೆ ಆಳ್ವಿಕೆ ನಡೆಸಿದವರು ತಮ್ಮ ಸ್ವಂತ ಕುಟುಂಬಗಳಿಗೆ ಪ್ರಾಮುಖ್ಯತೆ ನೀಡುತ್ತಿದ್ದರು.ಪ್ರಧಾನಿ ಪ್ರಧಾನ ಮಂತ್ರಿಗೆ ಜನ್ಮ ನೀಡಿರೆ, ಮುಖ್ಯಮಂತ್ರಿ ಮುಖ್ಯಮಂತ್ರಿಗೆ ಜನ್ಮ ನೀಡುತ್ತಿದ್ದರು. ಹೀಗೆ ... ಪ್ರಜಾಪ್ರಭುತ್ವವು ಅಸ್ತಿತ್ವದಲ್ಲಿರಲಿಲ್ಲ ಆದರೆ ಅದನ್ನು ನಾವು ಬದಲಾಯಿಸಿದ್ದೇವೆ" ಎಂದು ಗಡ್ಕರಿ ಹೇಳಿದರು.


ಇದೇ ವೇಳೆ ಗಡ್ಕರಿ ಬಿಜೆಪಿ ನಾಯಕತ್ವವನ್ನು ಶ್ಲಾಘಿಸಿ ಪಕ್ಷವು ಒಬ್ಬ ವ್ಯಕ್ತಿಯ ಹೆಸರನ್ನು ಎಂದಿಗೂ ನಡೆಸುವುದಿಲ್ಲ ಎಂದು ಹೇಳಿದರು."ಬಿಜೆಪಿಯು ಒಂದು ಕುಟುಂಬದ ಪಕ್ಷವಲ್ಲ, ಜಾತಿ, ಧರ್ಮ, ಭಾಷೆ ಆಧಾರದ ಮೇಲೆ ರಾಜಕೀಯ ಮಾಡುವ ಪಕ್ಷವಲ್ಲ. ಅಟಲ್ ಬಿಹಾರಿ ವಾಜಪೇಯಿ ಪಕ್ಷದ ನಮ್ಮ ಅತಿ ದೊಡ್ಡ ನಾಯಕರಾಗಿದ್ದರು.ಆದರೆ ಬಿಜೆಪಿ ಎಂದಿಗೂ ಕೂಡ, ಯಾವುದೇ ನಿರ್ದಿಷ್ಟ ವ್ಯಕ್ತಿಯ ಹೆಸರಿನ ಮೇಲೆ ನಡೆಸುವುದಿಲ್ಲ.ಬದಲಾಗಿ ಅದು ಚಿಂತನೆ ಮತ್ತು ತತ್ವಗಳ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತದೆ "ಎಂದು ಗಡ್ಕರಿ ತಿಳಿಸಿದರು.