ನವದೆಹಲಿ:ದೇಶದ ಕೋಟ್ಯಂತರ ನಾಗರಿಕರು ಇಂದು ತಮ್ಮ ಆಧಾರ್ ಕಾರ್ಡ್ ಬಳಸುತ್ತಿದ್ದಾರೆ. ಒಂದು ವೇಳೆ ನೀವೂ ಕೂಡ ಆಧಾರ್ ಕಾರ್ಡ್ ಹೊಂದಿದ್ದರೆ, ಅದನ್ನು ಬಳಸಿ ನೀವು ಗಳಿಕೆ ಮಾಡಬಹುದಾಗಿದೆ. ಭಾರತೀಯ ಜೀವ ವಿಮಾ ನಿಗಮ ನಿಮಗೆ ಈ ಅವಕಾಶ ನೀಡುತ್ತಿದೆ. 


COMMERCIAL BREAK
SCROLL TO CONTINUE READING

ಸಣ್ಣ ಉಳಿತಾಯ ಯೋಜನೆಯಡಿ ಹಣ ಉಳಿತಾಯ ಮಾಡಿ
ಭಾರತೀಯ ಜೀವ ವಿಮಾ ನಿಗಮ, ವಿಮಾ ಪಾಲಸಿಯನ್ನು ಹೊರತುಪಡಿಸಿ ಸಣ್ಣ ಉಳಿತಾಯ ಯೋಜನೆಯನ್ನೂ ಸಹ ನಿರ್ವಹಿಸುತ್ತದೆ. ಆದರೆ, ನಾವು ಇಲ್ಲಿ ಹೇಳಲು ಹೊರಟಿರುವ ಯೋಜನೆ ಕೇವಲ ಪುರುಷರಿಗಾಗಿ ಮಾತ್ರ ಸೀಮಿತವಾಗಿದೆ. ಭಾರತೀಯ ಜೀವ ವಿಮಾ ನಿಗಮ ಆಧಾರ್ ಸ್ಥಂಭ (ಪ್ಲಾನ್ 843) ಬಿಡುಗಡೆಗೊಳಿಸಿದೆ. ಈ ಪ್ಲಾನ್ ನ ಮ್ಯಾಚ್ಯೂರಿಟಿ ಬಳಿಕ ಖಾತೆದಾರರಿಗೆ ಸುಮಾರು ನಾಲ್ಕು ಲಕ್ಷ  ರೂ., ಸಿಗಲಿದೆ


ಸಿಗಲಿದೆ ಎರಡು ರೀತಿಯ ಲಾಭ
ಈ ಕುರಿತು ಮಾಹಿತಿ ನೀಡಿರುವ ಸೇಬಿಯಾ ರಿಜಿಸ್ಟರ್ಡ್ ಟ್ಯಾಕ್ಸ್ ಹಾಗೂ ಹೂಡಿಕೆ ತಜ್ಞ ಜಿತೇಂದ್ರ ಸೋಲಂಕಿ, " ಭಾರತೀಯ ಜೀವ ವಿಮಾ ನಿಗಮದ ಆಧಾರ ಸ್ಥಂಬ ಯೋಜನೆ ಒಂದು ರೀತಿಯ ವಿಮಾ ಪಾಲಸಿಯಾಗಿದ್ದು, ಉಳಿತಾಯದ ಜೊತೆಗೆ ಸುರಕ್ಷತೆಯ ಲಾಭ ಕೂಡ ನೀಡುತ್ತದೆ. ಆದರೆ, ಕೇವಲ ಪುರುಷರು ಮಾತ್ರ ಈ ಪ್ಲಾನ್ ಅನ್ನು ಪಡೆಯಬಹುದಾಗಿದೆ ಮತ್ತು ಇದಕ್ಕಾಗಿ ಅವರು ಆಧಾರ್ ಕಾರ್ಡ್ ಹೊಂದುವುದು ಅವಶ್ಯಕವಾಗಿದೆ. ಈ ಯೋಜನೆಯಲ್ಲಿನ ಹೂಡಿಕೆಗೆ ಹಲವಾರು ಲಾಭಗಳಿವೆ.


ಇಲ್ಲಿವೆ ಪ್ಲಾನ್ ಡೀಟೇಲ್ಸ್
8 ರಿಂದ 55 ವರ್ಷ ವಯಸ್ಸಿನ ವ್ಯಕ್ತಿಗಳು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದಾಗಿದೆ. ಮ್ಯಾಚೂರಿಟಿಯ ವೇಳೆ ವ್ಯಕ್ತಿಯ ವಯಸ್ಸು 70 ಕ್ಕಿಂತ ಹೆಚ್ಚಿಗೆ ಇರಬಾರದು. ಈ ಪಾಲಸಿಯಲ್ಲಿ ಅತಿ ಕಡಿಮೆ ಅಂದರೆ 7500 ರೂ. ಬೇಸಿಕ್ ಸಮ್ ಅಸ್ಯೋರ್ಡ್ ಸಿಗುತ್ತದೆ. ಅಷ್ಟೇ ಅಲ್ಲ ಅತ್ಯಧಿಕ ಸಮ್ ಅಸ್ಯೋರ್ಡ್ 3 ಲಕ್ಷ ರೂ.ಗಳವರೆಗೆ ಸಿಗಲಿದೆ. ಈ ಬೇಸಿಕ್ ಸಮ್ ಅಸ್ಯೋರ್ಡ್ 5 ಸಾವಿರ ರೂ. ಗುಣಂಕವನ್ನು  ಆಧರಿಸಿ ಸಿಗಲಿದೆ. 10 ರಿಂದ 20 ವರ್ಷಗಳ ಅವಧಿಗಾಗಿ ಈ ಪಾಲಸಿ ಸಿಗಲಿದೆ. ಪಾಲಸಿ ಜಾರಿಯಾದ ದಿನದಿಂದಲೇ ರಿಸ್ಕ್ ಕವರೇಜ್ ಅನ್ವಯಿಸುತ್ತದೆ.


ಪಾಲಸಿದಾರರ ಮರಣದ ಬಳಿಕ ನಾಮಿನಿಗೆ ಸಿಗಲಿದೆ ಲಾಭ
ಈ ಕುರಿತು ಮಾತನಾಡಿರುವ ಸೋಲಂಕಿ, ಒಂದು ವೇಳೆ ಪಾಲಸಿ ಧಾರಕರು ಪಾಲಸಿಯ ಅವಧಿಯಲ್ಲಿ ನಿಧನ ಹೊಂದಿದರೆ, ಪಾಲಸಿಧಾರಾಕಾರ ನಾಮಿನಿಗೆ ಪಾಲಸಿಯಲ್ಲಿ ನಮೂದಿಸಲಾಗಿರುವ ಎಲ್ಲ ಲಾಭಗಳು ಸಿಗಲಿವೆ. ಭವಿಷ್ಯದಲ್ಲಿ ಕುಟುಂಬಸ್ಥರಿಗೆ ಯಾವುದೇ ರೀತಿಯ ತೊಂದರೆ ಆಗಬಾರದು ಎಂಬ ಉದ್ದೇಶ ಇದು ಹೊಂದಿದೆ ಎಂದಿದ್ದಾರೆ.


ಮ್ಯಾಚುರಿಟಿ ಕ್ಯಾಲ್ಕುಲೇಟರ್
ವಾರ್ಷಿಕ ಪ್ರೀಮಿಯಂ: 10,314 ರೂ.(ಇದನ್ನು ನೀವು ವಾರ್ಷಿಕ, ಮಾಸಿಕ, 6 ಮಾಸಿಕ, ತ್ರೈಮಾಸಿಕ ಅಥವಾ ದಿನನಿತ್ಯ ಕೂಡ ಪಾವತಿಸಬಹುದು)
ಪ್ಲಾನ್ ಅವಧಿ:20 ವರ್ಷ
 ಸಮ್ ಅಸ್ಯೋರ್ಡ್: 3 ಲಕ್ಷ ರೂ.
ಲಾಯಲ್ಟಿ ಆಡಿಶನ್: 97,000 ರೂ.(ವಾರ್ಷಿಕ ಶೇ.4.5ರ ಲೆಕ್ಕದಲ್ಲಿ)


ಈ ರೀತಿ ಪಾಲಸಿ ಮ್ಯಾಚುರಿಟಿ ವೇಳೆ ಪಾಲಸಿ ಧಾರಕರಿಗೆ 3.97 ಲಕ್ಷ ರೂ.ಸಿಗಲಿದೆ. 8 ವರ್ಷದ ಮಕ್ಕಳ ಹೆಸರಿನಲ್ಲಿಯೂ ಸಹ ಈ ಪಾಲಸಿಯನ್ನು ಪಡೆಯಬಹುದು.