Earthquake in North East : ಅರುಣಾಚಲ ಪ್ರದೇಶದಲ್ಲಿ  ಗುರುವಾರ ಭೂಮಿ ಕಂಪಿಸಿದೆ. ಈಶಾನ್ಯ ರಾಜ್ಯಗಳಲ್ಲಿ ಬೆಳಗ್ಗೆ ಪ್ರಬಲ ಭೂಕಂಪನದ ಅನುಭವವಾಗಿದೆ. ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 5.7ರಷ್ಟು ದಾಖಲಾಗಿದೆ.


COMMERCIAL BREAK
SCROLL TO CONTINUE READING

ಆದರೆ, ಭೂಕಂಪದಿಂದ ದೊಡ್ಡ ಮಟ್ಟದ ಹಾನಿ ಸಂಭವಿಸಿಲ್ಲ ಎಂದು ವರದಿಯಾಗಿದೆ. ಸ್ವಲ್ಪ ಸಮಯದ ಹಿಂದೆ ಕೂಡಾ, ಈ ಪ್ರದೇಶದಲ್ಲಿ ಪ್ರಬಲ  ಭೂಕಂಪದ ಅನುಭವವಾಗಿತ್ತು.


ಇದನ್ನೂ ಓದಿ : India Post Recruitment 2022 : ಅಂಚೆ ಇಲಾಖೆಯಲ್ಲಿ 188 ಹುದ್ದೆಗಳಿಗೆ ಅರ್ಜಿ ಆಹ್ವಾನ : ವಿವರಗಳಿಗೆ ಇಲ್ಲಿ ಪರಿಶೀಲಿಸಿ


ಭೂಕಂಪದ ಮುನ್ಸೂಚನೆ ನೀಡಲಾಗಿತ್ತು :
ಬುಧವಾರ ಮುಂಜಾನೆ ದೇಶದ ರಾಜಧಾನಿ ದೆಹಲಿ ಸೇರಿದಂತೆ ದೇಶದ ಇತರ ಭಾಗಗಳಲ್ಲಿ ತಡರಾತ್ರಿ ಭೂಮಿ ನಡುಗಿತ್ತು. ಇದಾದ ನಂತರ  ಹಿಮಾಲಯ ಪ್ರದೇಶದಲ್ಲಿ  ಪ್ರಬಲ ಭೂಕಂಪವಾಗುವ ಸಂಭವ ಇದೆ ಎಂದು ಹೇಳಲಾಗಿತ್ತು. 


ವಿಜ್ಞಾನಿಗಳು ಏನು ಹೇಳುತ್ತಾರೆ?:
ಭೂಗರ್ಭಶಾಸ್ತ್ರಜ್ಞ ಡಾ.ಅಜಯ್ ಪೌಲ್ ಮಾತನಾಡಿ, ಹಿಮಾಲಯದ ಅಡಿಯಲ್ಲಿ ಶಕ್ತಿಯ ಶೇಖರಣೆಯಿಂದಾಗಿ ಭೂಕಂಪಗಳು ಸಂಭವಿಸುವುದು ಸಾಮಾನ್ಯ ಮತ್ತು ಇದೊಂದು ನಿರಂತರ ಪ್ರಕ್ರಿಯೆಯಾಗಿದೆ. ಇಡೀ ಹಿಮಾಲಯದ ಪ್ರದೇಶವು ಭೂಕಂಪಗಳಿಗೆ ಬಹಳ ಸೂಕ್ಷ್ಮವಾದ ಪ್ರದೇಶವಾಗಿದ್ದು, ಇಲ್ಲಿ ಯಾವಾಗಲೂ ಪ್ರಬಲ ಭೂಕಂಪವಾಗುವ ಸಾಧ್ಯತೆ ಹೆಚ್ಚಿರುತ್ತದೆ. ಈ ಭೂಕಂಪವು ರಿಕ್ಟರ್ ಮಾಪಕದಲ್ಲಿ ಏಳು ಅಥವಾ ಅದಕ್ಕಿಂತ ಹೆಚ್ಚು ತೀವ್ರತೆ ಹೊಂದುವ ಸಾಧ್ಯತೆಯಿದೆ ಎಂದು  ಹೇಳಿದ್ದಾರೆ.  ಆದರೂ, ಈ ಅಸ್ಪಷ್ಟ ಶಕ್ತಿಯ ಬಿಡುಗಡೆ ಅಥವಾ ಭೂಕಂಪ ಸಂಭವಿಸುವುದನ್ನು ಊಹಿಸಲು ಸಾಧ್ಯವಿಲ್ಲ ಎಂದು ಡಾ ಪಾಲ್ ಹೇಳಿದ್ದಾರೆ. ಹಾಗಾಗಿ ಭೂಕಂಪ  ಯಾವ ಸಂದರ್ಭದಲ್ಲಿ ಸಂಭವಿಸಬಹುದು ಎನ್ನುವುದನ್ನು ನಿಖರವಾಗಿ ಹೇಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. 


ಇದನ್ನೂ ಓದಿ : Patra Chawl Case: ಪತ್ರಾ ಚಾಲ್ ಪ್ರಕರಣ ವಿಚಾರಣೆ: ಸಂಜಯ್ ರಾವತ್ ಗೆ ಜಾಮೀನು ಮಂಜೂರು


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.