ಲಡಾಖ್:  ಲಡಾಖ್ ನಲ್ಲಿ ಇಂದು (ಮಂಗಳವಾರ) ಬೆಳಗ್ಗೆ ಭೂಕಂಪನದ (Earthquake)ಅನುಭವವಾಗಿದೆ. ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ (Richter Scale) 4.3ರಷ್ಟು ದಾಖಲಾಗಿದೆ.  ಭೂಕಂಪದಿಂದಾಗಿ ಈ ಪ್ರದೇಶದಲ್ಲಿ ಆತಂಕ ಸೃಷ್ಟಿಯಾಗಿದೆ.


COMMERCIAL BREAK
SCROLL TO CONTINUE READING

ಭೂಕಂಪದ ಕೇಂದ್ರಬಿಂದು ಎಲ್ಲಿತ್ತು?
ಇಂದು ಬೆಳಗ್ಗೆ 8.35ಕ್ಕೆ ಲಡಾಖ್‌ನಲ್ಲಿ (Ladakh)ಭೂಮಿ ಕಂಪಿಸಿದೆ. ಭೂಕಂಪದ ಕೇಂದ್ರಬಿಂದು ಭೂಮಿಯಿಂದ 10 ಕಿ.ಮೀ. ಕೆಳಗಿತ್ತು ಎನ್ನಲಾಗಿದೆ.  National Center For Seismology ಪ್ರಕಾರ, ಭೂಕಂಪದ (Earthquake) ತೀವ್ರತೆ ರಿಕ್ಟರ್ ಮಾಪಕದಲ್ಲಿ 4.3 ರಷ್ಟು ದಾಖಲಾಗಿದೆ. 


ಇದನ್ನೂ ಓದಿ ಕರೋನ ಸಂಪೂರ್ಣ ನಿರ್ನಾಮವಾಗುವ ದಿನ ಬಹಳ ಹತ್ತಿರ , WHO ಹೇಳಿದ್ದೇನು ?


ಭೂಕಂಪದ ಸಮಯದಲ್ಲಿ ಅಲುಗಾಡಿದ ಸೀಲಿಂಗ್ ಫ್ಯಾನ್ :
ಭೂಕಂಪನದ ಅನುಭವವಾದ (effects of earthquake)ಹಿನ್ನೆಲೆಯಲ್ಲಿ ಭಯಭೀತರಾದ ಜನ ಮನೆಗಳಿಂದ ಹೊರಬಂದಿದ್ದಾರೆ. ಭೂಕಂಪದ ವೇಳೆ ಸೀಲಿಂಗ್ ಫ್ಯಾನ್ ಹಾಗೂ ಮನೆಯಲ್ಲಿಟ್ಟಿದ್ದ ವಸ್ತುಗಳು ಅಲುಗಾಡುತ್ತಿರುವುದು ಕಂಡು ಬಂದಿದೆ. ಆದರೆ, ಇದುವರೆಗೆ ಯಾವುದೇ ಪ್ರಾಣಹಾನಿ ಅಥವಾ ಆಸ್ತಿ ಹಾನಿಯಾದ ಬಗ್ಗೆ ವರದಿಯಾಗಿಲ್ಲ. 


ಭೂಕಂಪ ಏಕೆ ಸಂಭವಿಸುತ್ತದೆ?
ಭೂಮಿಯೊಳಗೆ 7 ಪದರಗಳಿರುತ್ತವೆ.  ಅವು ನಿರಂತರವಾಗಿ ತಿರುಗುತ್ತಿರುತ್ತವೆ. ಈ ಪದರಗಳು  ಎಲ್ಲಿ ಹೆಚ್ಚು ಡಿಕ್ಕಿ ಹೊಡೆಯುತ್ತವೆಯೋ ಆ ವಲಯವನ್ನು ಫಾಲ್ಟ್ ಲೈನ್ ಎಂದು ಕರೆಯಲಾಗುತ್ತದೆ. ಪುನರಾವರ್ತಿತ ಘರ್ಷಣೆಯಿಂದಾಗಿ, ಪದರಗಳ ಮೂಲೆಗಳು ತಿರುಚಲ್ಪಡುತ್ತದೆ. ಹೆಚ್ಚಿನ ಒತ್ತಡವು ನಿರ್ಮಾಣವಾದಾಗ, ಪದರಗಳು ಒಡೆಯುತ್ತವೆ. ಆಗ ಒಳಗಿನ ಶಕ್ತಿಯು ಹೊರ ಬರಲು ಒಂದು ಮಾರ್ಗವನ್ನು ಕಂಡುಕೊಳ್ಳುತ್ತದೆ. ಹೀಗಾದಾಗ ಭೂಮಿ ಕಂಪಿಸುತ್ತದೆ.


ಇದನ್ನೂ ಓದಿ Liquor Rules: ಈ ರಾಜ್ಯದಲ್ಲೀಗ ಮದ್ಯಪಾನ, ಮದ್ಯ ಮಾರಾಟ ಮಾಡುವ ವಯಸ್ಸಿನ ಮಿತಿ ಇಳಿಕೆ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.