ನವದೆಹಲಿ: ಹೊಸ ವರ್ಷ ಪ್ರಾರಂಭವಾಗುತ್ತಿದ್ದಂತೆ ದೆಹಲಿ-NCRನಲ್ಲಿ ಭೂಕಂಪನದ  ಅನುಭವವಾಗಿದೆ. ಈ ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 3.8 ರಷ್ಟು ದಾಖಲಾಗಿದೆ. ಭೂಕಂಪ ಸಂಭವಿಸಿದ ತಕ್ಷಣ ಭೂಮಿ ಕಂಪಿಸಲಾರಂಭಿಸಿದ್ದು, ಜನರು ಗಾಬರಿಗೊಂಡು ಮನೆಯಿಂದ ಹೊರಬಂದಿದ್ದಾರೆ. ಭೂಮಿ ಕಂಪಿಸಿದ್ದರಿಂದ ಹೊಸ ವರ್ಷದ ಸಂಭ್ರಮದಲ್ಲಿದ್ದ ಜನರು ಬೆಚ್ಚಿಬಿದ್ದಿದ್ದಾರೆ. ಈ ಭೂಕಂಪದಿಂದ ಯಾವುದೇ ಪ್ರಾಣಹಾನಿ ಅಥವಾ ಆಸ್ತಿ-ಪಾಸ್ತಿ ನಷ್ಟದ ಬಗ್ಗೆ ವರದಿಯಾಗಿಲ್ಲ.


COMMERCIAL BREAK
SCROLL TO CONTINUE READING

 5 ಕಿಮೀ ಆಳದಲ್ಲಿ ಕಂಪನ


ಭೂಕಂಪನದ ರಾಷ್ಟ್ರೀಯ ಕೇಂದ್ರದ ಪ್ರಕಾರ ಭಾನುವಾರ ನಸುಕಿನ ಜಾವ 1.19ಕ್ಕೆ ಈ ಭೂಕಂಪ ಸಂಭವಿಸಿದೆ. ದೆಹಲಿಯ ಪಕ್ಕದಲ್ಲಿರುವ ಹರಿಯಾಣದ ಜಜ್ಜರ್ ಜಿಲ್ಲೆ ಇದರ ಕೇಂದ್ರವಾಗಿತ್ತು. ಅಲ್ಲಿ ಭೂಮಿ ಹಠಾತ್ತನೆ 5 ಕಿಮೀ ಆಳದಲ್ಲಿ ಕಂಪಿಸಿದ್ದು, ಝಜ್ಜರ್, ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭೂಮಿ ಕಂಪಿಸಿದೆ. ಭೂಕಂಪದ ತೀವ್ರತೆ ಕಡಿಮೆಯಾದ ಕಾರಣ ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಮಗ್ನರಾಗಿದ್ದ ಬಹುತೇಕ ಜನರಿಗೆ ಇದರ ಅನುಭವವಾಗಿಲ್ಲ. ಅಧಿಕಾರಿಗಳು ಹೇಳಿರುವ ಪ್ರಕಾರ, ಈ ಭೂಕಂಪದಲ್ಲಿ ಯಾವುದೇ ಸಾವು-ನೋವು ಸಂಭವಿಸಿದ ಬಗ್ಗೆ ತಿಳಿದುಬಂದಿಲ್ಲ.


ಇದನ್ನೂ ಓದಿ: LPG Price Hike: ಹೊಸ ವರ್ಷದ ಮೊದಲ ದಿನವೇ ಬಿಗ್ ಶಾಕ್: ಗ್ಯಾಸ್ ಸಿಲಿಂಡರ್ ಬೆಲೆ ರೂ.25 ಹೆಚ್ಚಳ


ಸೋಷಿಯಲ್ ಮೀಡಿಯಾದಲ್ಲಿ ಮೀಮ್‍ಗಳ ಕಚಗುಳಿ


ಹೊಸ ವರ್ಷದಂದು ದೆಹಲಿ-NCRನಲ್ಲಿ ಭೂಕಂಪ ಸಂಭವಿಸಿದ ತಕ್ಷಣ, ಸಾಮಾಜಿಕ ಮಾಧ್ಯಮಗಳಲ್ಲಿ ಮೀಮ್‌ಗಳ ಮಹಾಪೂರವೇ ಹರಿದುಬರುತ್ತಿದೆ. ಇಂಟರ್ನೆಟ್ ಬಳಕೆದಾರರು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಚಿತ್ರವನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿ, ‘ನಾನು ಈ ಭೂಕಂಪನವನ್ನು ಒಪ್ಪುವುದಿಲ್ಲ, ಪುರಾವೆ ತೋರಿಸು’ ಎಂದು ವ್ಯಂಗ್ಯವಾಡಿದ್ದಾರೆ.


ಮತ್ತೊಬ್ಬ ಬಳಕೆದಾರರು ‘ಇಂದು ಜನರು ಹೊಸ ವರ್ಷವನ್ನು ಬರಮಾಡಿಕೊಳ್ಳಲು ಸಂಗೀತದ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ. ಹೀಗಾಗಿ ಭೂಮಿ ಕಂಪಿಸಿದೆ. ನೀವು ನಿಧಾನವಾಗಿ ನೃತ್ಯ ಮಾಡಿ ಎನೂ ತೊಂದರೆಯಾಗುವುದಿಲ್ಲವೆಂದು’ ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಹಾಸ್ಯನಟ ರಾಜ್‌ಪಾಲ್ ಯಾದವ್ ಅವರ ಚಿತ್ರವನ್ನು ಟ್ವೀಟ್ ಮಾಡಿ, ‘ಇದು ಯಾವಾಗ ಸಂಭವಿಸಿತು?’ ಎಂದು ಪ್ರಶ್ನಿಸಿದ್ದಾರೆ.


ಇದನ್ನೂ ಓದಿ: 1 January 2023: ಟೋಲ್ ಟ್ಯಾಕ್ಸ್, ಕ್ರೆಡಿಟ್ ಕಾರ್ಡ್, LPG ಸೇರಿ ಹಲವು ನಿಯಮಗಳಲ್ಲಿ ಬದಲಾವಣೆ: ನಿಮ್ಮ ಜೇಬಿಗೆ ಪರಿಣಾಮ ಖಂಡಿತ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.