ಶಿಮ್ಲಾ: ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಪ್ರಕಾರ ಸೋಮವಾರ 3.0 ತೀವ್ರತೆಯ ಭೂಕಂಪನವು ಶಿಮ್ಲಾದಲ್ಲಿ ಭುಗಿಲೆದ್ದಿದೆ.


COMMERCIAL BREAK
SCROLL TO CONTINUE READING

ಸೋಮವಾರ ರಾತ್ರಿ 10: 23 ರ ಸುಮಾರಿಗೆ ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ಭೂಕಂಪ ಸಂಭವಿಸಿದ್ದು,  ಈವರೆಗೆ ಯಾವುದೇ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿಗೆ ಹಾನಿಯಾಗಿಲ್ಲ.


ಭೂಕಂಪದ ಸಂದರ್ಭದಲ್ಲಿ ಏನು ಮಾಡಬೇಕು?
ಭೂಕಂಪದಂತಹ ನೈಸರ್ಗಿಕ ವಿಪತ್ತಿನಿಂದ ತಪ್ಪಿಸಿಕೊಳ್ಳುವುದು ಕಷ್ಟ ಮತ್ತು ಅದನ್ನು ತಪ್ಪಿಸಲು ಸಾಧ್ಯವಿಲ್ಲ. ಆದರೆ ಕೆಲವು ತಾರ್ಕಿಕ ಕ್ರಿಯೆಗಳನ್ನು ಬಳಸಿಕೊಂಡು ಈ ಸ್ವಾಭಾವಿಕ ಹಾನಿಗಳ ಸಮಯದಲ್ಲಿ ನಿಮ್ಮನ್ನು ನೀವು ರಕ್ಷಿಸಿಕೊಳ್ಳಬಹುದು.


- ಭೂಕಂಪದ ಸಮಯದಲ್ಲಿ ಎಲಿವೇಟರ್ ಅನ್ನು ಬಳಸಬಾರದು.
- ಹೊರಗೆ ಹೋಗಲು ಎಲಿವೇಟರ್ ಬದಲಿಗೆ ಮೆಟ್ಟಿಲುಗಳನ್ನು ಬಳಸಿ.
- ನೀವು ಎಲ್ಲಾದರೂ ಸಿಕ್ಕಿಹಾಕಿಕೊಂಡಿದ್ದರೆ ಓಡುವುದು ಸೂಕ್ತವಲ್ಲ. 
- ನೀವು ಕಾರು ಅಥವಾ ಯಾವುದೇ ವಾಹನವನ್ನು ಚಾಲನೆ ಮಾಡುತ್ತಿದ್ದರೆ, ಅದನ್ನು ತಕ್ಷಣ ನಿಲ್ಲಿಸಿ.
- ನೀವು ಚಾಲನೆ ಮಾಡುತ್ತಿದ್ದರೆ, ಕಟ್ಟಡ, ಸ್ತಂಭಗಳು, ಫ್ಲೈಓವರ್, ರಸ್ತೆ ಸೇತುವೆಯಿಂದ ದೂರ ಸಾಗಿ ಬಳಿಕ ವಾಹನವನ್ನು ನಿಲ್ಲಿಸಿ.
- ಭೂಕಂಪದ ಅನುಭವವಾದ ತಕ್ಷಣವೇ ಸುರಕ್ಷಿತ ಮತ್ತು ತೆರೆದ ಮೈದಾನದ ಬಳಿ ಸೇರಲು ಪ್ರಯತ್ನಿಸಿ. 
- ದೊಡ್ಡ ಕಟ್ಟಡಗಳು, ಮರಗಳು, ವಿದ್ಯುತ್ ಸ್ತಂಭಗಳಿಂದ ದೂರವಿರಿ.