ನವದೆಹಲಿ: ಬುಧವಾರದಂದು ಅಫ್ಘಾನಿಸ್ತಾನದ-ತಜಾಕಿಸ್ಥಾನ್  ಪರ್ವತ ಗಡಿ ಪ್ರದೇಶದಲ್ಲಿ  ಸುಮಾರು 6.2 ರಷ್ಟು ಭೂಕಂಪ ಸಂಭವಿಸಿದ ಪರಿಣಾಮ ಭಾರತದ ಹಿಮಾಚಲ ಪ್ರದೇಶ, ಪಂಜಾಬ್, ಹರಿಯಾಣ,ದೆಹಲಿ ಕಾಶ್ಮೀರ ಪ್ರದೇಶಗಳಲ್ಲಿ  ಭೂಮಿ ನಡುಗಿದ ಅನುಭವವಾಗಿದೆ.




COMMERCIAL BREAK
SCROLL TO CONTINUE READING

ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆಯ ಪ್ರಕಾರ, ಭೂಕಂಪವು ಅಫಘಾನ್ ರಾಜಧಾನಿಯಾದ ಕಾಬುಲ್ನಲ್ಲಿನ ಕಟ್ಟಡಗಳನ್ನು ಅಲುಗಾಡಿಸಿತು, ಆದರೆ ಯಾವುದೇ ರೀತಿಯ  ಹಾನಿ ಅಥವಾ ಸಾವು ನೋವುಗಳು ಸಂಭವಿಸಿಲ್ಲ  ಎಂದು ಹೇಳಲಾಗಿದೆ. ಖೋರೋ ಪ್ರಾಂತೀಯ ದಕ್ಷಿಣಕ್ಕೆ ಸುಮಾರು 67 ಕಿಮೀ (42 ಮೈಲುಗಳು) ದೂರದಲ್ಲಿ 96 ಕಿಮೀ (60 ಮೈಲುಗಳು) ಆಳದಲ್ಲಿ ಈ ಭೂಕಂಪ ಸಂಭವಿಸಿದೆ ಎಂದು ಹೇಳಲಾಗಿದೆ.