ಅಸ್ಸಾಂನಲ್ಲಿ ರಿಕ್ಟರ್ ಮಾಪಕ 5.2 ತೀವ್ರತೆಯ ಭೂಕಂಪ
ನವದೆಹಲಿ: ಅಸ್ಸಾಂನ ಕೊಕ್ರಝಾರ್ ಜಿಲ್ಲೆಯಲ್ಲಿ ಶನಿವಾರ ಬೆಳಗ್ಗೆ ರಿಕ್ಟರ್ ಮಾಪಕದಲ್ಲಿ 5.2 ತೀವ್ರತೆಯ ಭೂಕಂಪ ಸಂಭವಿಸಿದೆ.
ಭಾರತೀಯ ಹವಾಮಾನ ಇಲಾಖೆಯ ಪ್ರಕಾರ, ಭೂಕಂಪನವು ಸಂಜೆ 6:44 ಗಂಟೆಗೆ 52 ಕಿಮೀ ಆಳದಲ್ಲಿ ಸಂಭವಿಸಿದೆ.ಇಲ್ಲಿಯವರೆಗೆ ಯಾವುದೇ ಹಾನಿ ಅಥವಾ ಅಪಘಾತದ ವರದಿಯಾಗಿಲ್ಲ ಎಂದು ತಿಳಿದು ಬಂದಿದೆ.
ಇತ್ತೀಚಿಗೆ ಈಶ್ಯಾನ್ಯ ಭಾರತ-ಮತ್ತು ಮಯನ್ಮಾರ್ ಪ್ರದೇಶದಲ್ಲಿ ಭೂಕಂಪವು ಸಾಮಾನ್ಯವೆನ್ನುವಂತೆ ಆಗಿದೆ. ಈ ಪ್ರದೇಶಗಳು ಭೂಕಂಪ ವಲಯದಲ್ಲಿ ಇರುವುದರಿಂದ ನಿರಂತರವಾಗಿ ಸಂಭವಿಸುತ್ತಲಿವೆ ಎಂದು ಹೇಳಲಾಗಿದೆ.