ಪಶ್ಚಿಮ ಬಂಗಾಳದಲ್ಲಿ 4.0 ತೀವ್ರತೆಯಲ್ಲಿ ಭೂಕಂಪ
ಪಶ್ಚಿಮ ಬಂಗಾಳದಲ್ಲಿ ಸೋಮವಾರ ಬೆಳಿಗ್ಗೆ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 4.0 ತೀವ್ರತೆ ದಾಖಲಾಗಿದೆ.
ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಸೋಮವಾರ ಬೆಳಿಗ್ಗೆ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 4.0 ತೀವ್ರತೆ ದಾಖಲಾಗಿದೆ.
ಪಶ್ಚಿಮ ಬಂಗಾಳದ ಪುರುಲಿಯಾ ಜಿಲ್ಲೆಯಲ್ಲಿ ಬೆಳಿಗ್ಗೆ 2.55 ಗಂಟೆಗೆ ಭೂಕಂಪನ ಸಂಭವಿಸಿದೆ. ಭೂಕಂಪದ ಕೇಂದ್ರಬಿಂದುವು ಭೂಮಿಯ ಮೇಲ್ಮೈಯಿಂದ ಅಕ್ಷಾಂಶ 23.1 ಡಿಗ್ರಿ ಉತ್ತರಕ್ಕೆ 22 ಕಿ.ಮೀ ಮತ್ತು ಪೂರ್ವಕ್ಕೆ 86.5 ಡಿಗ್ರಿ ರೇಖಾಂಶದಲ್ಲಿತ್ತು ಎನ್ನಲಾಗಿದೆ. ಆದರೆ, ಘಟನೆಯಲ್ಲಿ ಯಾವುದೇ ಸಾವು ನೋವುಗಳು ವರದಿಯಾಗಿಲ್ಲ.
ಕಳೆದ ಮೂರು ತಿಂಗಳಲ್ಲಿ ಪುರುಲಿಯಾದಲ್ಲಿ ಎರಡನೇ ಬಾರಿಗೆ ಭೂಕಂಪ ಸಂಭವಿಸಿದೆ. ಮೇ ತಿಂಗಳಲ್ಲಿ, ಈ ಪ್ರದೇಶದಲ್ಲಿ ಲಘು ಭೂಕಂಪ ಸಂಭವಿಸಿದ್ದು, ಪಶ್ಚಿಮ ಬಂಗಾಳದ ಬಂಕುರಾ ಜಿಲ್ಲೆ ಮತ್ತು ದುರ್ಗಾಪುರದ ಕೆಲ ಪ್ರದೇಶಗಳಲ್ಲೂ ಕಂಪನ ಉಂಟಾಗಿತ್ತು.