ಮಣಿಪುರದಲ್ಲಿ ಭೂಕಂಪ; 5.2 ತೀವ್ರತೆ ದಾಖಲು
ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 5.2 ರಷ್ಟು ದಾಖಲಾಗಿದ್ದು, ಅಸ್ಸಾಂ, ನಾಗಾಲ್ಯಾಂಡ್ ರಾಜ್ಯಗಳಲ್ಲೂ ಭೂಮಿ ಕಂಪಿಸಿರುವ ಅನುಭವವಾಗಿದೆ.
ಇಂಫಾಲ್: ಈಶಾನ್ಯ ರಾಜ್ಯವಾದ ಮಣಿಪುರದಲ್ಲಿ ಗುರುವಾರ ಮಧ್ಯಾಹ್ನ 1.15ರ ಸಮಯದಲ್ಲಿ ಭಾರೀ ಭೂಕಂಪ ಸಂಭವಿಸಿದೆ.
ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 5.2 ರಷ್ಟು ದಾಖಲಾಗಿದ್ದು, ಅಸ್ಸಾಂ, ನಾಗಾಲ್ಯಾಂಡ್ ರಾಜ್ಯಗಳಲ್ಲೂ ಭೂಮಿ ಕಂಪಿಸಿರುವ ಅನುಭವವಾಗಿದೆ.
ಭಾರತ-ಮಾಯನ್ಮಾರ್ ಗಡಿಯಲ್ಲಿರುವ ನಾಗಾಲ್ಯಾಂಡ್'ನ ಫೇಕ್ ಜಿಲ್ಲೆಯ ಬಳಿಯಿರುವ ಭೂಕಂಪ ಅಧಿಕೇಂದ್ರದಲ್ಲಿ ದಾಖಲಾಗಿದ್ದು, 63.1ಕಿ.ಮೀ. ಆಳದಲ್ಲಿ ಮತ್ತು ಫೇಕ್ ನಿಂದ 26 ಕಿ.ಮೀ. ದೂರದಲ್ಲಿ ಭೂಕಂಪ ಸಂಭವಿಸಿದೆ ಎನ್ನಲಾಗಿದೆ. ಈ ಘಟನೆಯಲ್ಲಿ ಯಾವುದೇ ಸಾವು-ನೋವು, ಆಸ್ತಿಹಾನಿ ಆಗಿರುವ ಬಗ್ಗೆ ವರದಿಯಾಗಿಲ್ಲ.