ನವದೆಹಲಿ: ರಿಕ್ಟರ್ ಮಾಪಕದಲ್ಲಿ 5.3 ರಷ್ಟು ಭೂಕಂಪನ ಶನಿವಾರದಂದು ರಾತ್ರಿ 10.45 ಕ್ಕೆ ರಿಕ್ಟರ್ ಮಾಪಕದಲ್ಲಿ ಸಂಭವಿಸಿದೆ ಎಂದು ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.


COMMERCIAL BREAK
SCROLL TO CONTINUE READING

ಭೂಕಂಪನವು 10.45 ಕ್ಕೆ 24 ಕಿ.ಮೀ. ಆಳದಲ್ಲಿ ಚಾಪೈ ಜಿಲ್ಲೆಯಲ್ಲಿನ ಅಕ್ಷಾಂಶ  23.9N ಮತ್ತು ರೇಖಾಂಶ 93.3E ನಲ್ಲಿ ಅಧಿಕೇಂದ್ರವು ನೆಲೆಗೊಂಡಿದೆ ಎಂದು IMD ತನ್ನ ವೆಬ್ಸೈಟ್ನಲ್ಲಿ ತಿಳಿಸಿದೆ.



ಭೂಕಂಪದ ಅನುಭವವು ಮಿಜೋರಾಂ ರಾಜಧಾನಿ ಐಜ್ವಾಲ್ ನಲ್ಲಿಯೂ ಉಂಟಾಗಿದೆ. ಭೂಕಂಪನದ ನಂತರ ಅಲ್ಲಿದ್ದ ಜನರು ಮನೆಯಿಂದ ಹೊರಬಂದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದುವರೆಗೂ ಯಾವುದೇ ಸಾವು ನೋವು ಅಥವಾ ಆಸ್ತಿಹಾನಿಯಾದ ಬಗ್ಗೆ ವರದಿಯಾಗಿಲ್ಲ ಎನ್ನಲಾಗಿದೆ .ಈ ಹಿಂದೆ ನವೆಂಬರ್ 7 ರಂದು ಮಣಿಪುರದಲ್ಲಿ ರಿಕ್ಟರ್ ಮಾಪಕದಲ್ಲಿ 4.1ರಷ್ಟು ಸಣ್ಣ ಪ್ರಮಾಣದ ಭೂಕಂಪ ಸಂಭವಿಸಿತ್ತು