ಗುಜರಾತಿನ ಹಲವು ಭಾಗಗಳಲ್ಲಿ ಲಘು ಭೂಕಂಪ, ರಿಕ್ಟರ್ ಮಾಪನದಲ್ಲಿ 4.0 ತೀವ್ರತೆ ದಾಖಲು
ಬುಧವಾರ ರಾತ್ರಿ ಗುಜರಾತಿನ ಹಲವು ಭಾಗಗಳಲ್ಲಿ ಭೂಕಂಪದ ಅನುಭವವಾಗಿದ್ದು, ರಿಕ್ಟರ್ ಮಾಪನದಲ್ಲಿ 4.0 ತೀವ್ರತೆ ದಾಖಲಾಗಿದೆ. ಅಹಮದಾಬಾದ್, ಸಬರ್ಕಾಂತ, ಬನಸ್ಕಾಂತ, ಅರಾವಳಿ ಮತ್ತು ಅಂಬಾಜಿಗಳಲ್ಲಿ ಭೂಕಂಪದ ಅನುಭವವಾಗಿರುವ ಬಗ್ಗೆ ವರದಿಗಳಿವೆ.
ಅಹ್ಮದಾಬಾದ್: ಬುಧವಾರ ರಾತ್ರಿ ಗುಜರಾತಿನ ಹಲವು ಭಾಗಗಳಲ್ಲಿ ಭೂಕಂಪದ ಅನುಭವವಾಗಿದ್ದು, ರಿಕ್ಟರ್ ಮಾಪನದಲ್ಲಿ 4.0 ತೀವ್ರತೆ ದಾಖಲಾಗಿದೆ. ಅಹಮದಾಬಾದ್, ಸಬರ್ಕಾಂತ, ಬನಸ್ಕಾಂತ, ಅರಾವಳಿ ಮತ್ತು ಅಂಬಾಜಿಗಳಲ್ಲಿ ಭೂಕಂಪದ ಅನುಭವವಾಗಿರುವ ಬಗ್ಗೆ ವರದಿಗಳಿವೆ.
ಇನ್ಸ್ಟಿಟ್ಯೂಟ್ ಆಫ್ ಸೈಸ್ಮಲಾಜಿಕಲ್ ರಿಸರ್ಚ್ (ಐಎಸ್ಆರ್) ಪ್ರಕಾರ, ಬುಧವಾರ 10:31 ಕ್ಕೆ ಗುಜರಾತ್ನ ಬನಸ್ಕಾಂತದಲ್ಲಿ ಭೂಕಂಪ ಸಂಭವಿಸಿದೆ. ಇದು 3.1 ಕಿ.ಮೀ ಆಳದಲ್ಲಿ ಸಂಭವಿಸಿದೆ ಎಂದು ತಿಳಿಸಿದೆ.
ಭೂಕಂಪದ ಅನುಭವದ ಬಗ್ಗೆ ಹಲವು ಮಂದಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.
ಜನವರಿ 26, 2011 ರಂದು, ಗುಜರಾತಿನಲ್ಲಿ 7.7 ತೀವ್ರತೆ ಭೂಕಂಪ ಭೀಕರ ಅನುಭವಕ್ಕೆ ಸಾಕ್ಷಿಯಾಗಿದೆ. ಸರ್ಕಾರದ ಅಧಿಕೃತ ಅಂಕಿ ಅಂಶಗಳು ಈ ಭೂಕಂಪದಲ್ಲಿ 13,800 ಮಂದಿ ಸಾವನ್ನಪ್ಪಿದ್ದು ಮತ್ತು 166,000 ಗಾಯಗೊಂಡಿದ್ದರು ಎಂದು ಉಲ್ಲೇಖಿಸಿವೆ.