ನವದೆಹಲಿ: ದೆಹಲಿಯಲ್ಲಿ ಭಾನುವಾರ ಮತ್ತೊಮ್ಮೆ ಭೂಮಿ ಕಂಪಿಸಿರುವ ಬಗ್ಗೆ ವರದಿಯಾಗಿದೆ. ದೆಹಲಿಯ ಪಂಜಾಬಿ ಬಾಗ್ ಪ್ರದೇಶದಲ್ಲಿ ಭೂಕಂಪ ದಾಖಲಾಗಿದೆ. ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರದ ಪ್ರಕಾರ, ಮಧ್ಯಾಹ್ನ 12.02 ಕ್ಕೆ ಸಂಭವಿಸಿರುವ ಭೂಕಂಪದ ತೀವ್ರತೆಯು ರಿಕ್ಟರ್ ಮಾಪಕದಲ್ಲಿ 2.1 ರಷ್ಟು ಅಳೆಯಲಾಗಿದೆ.


COMMERCIAL BREAK
SCROLL TO CONTINUE READING

ಸದ್ಯಕ್ಕೆ ಭಯಪಡಬೇಕಾಗಿಲ್ಲ:
ಮೂಲಗಳಿಂದ ಲಭ್ಯವಾಗಿರುವ ಮಾಹಿತಿಯ ಪ್ರಕಾರ, ಈ ಪ್ರದೇಶದಿಂದ ಯಾವುದೇ ರೀತಿಯ ಹಾನಿಯ ಬಗ್ಗೆ ವರದಿಯಾಗಿಲ್ಲ. ಆದರೆ ದೆಹಲಿಯಲ್ಲಿ (Delhi) ನಿರಂತರವಾಗಿ ಕಡಿಮೆ ತೀವ್ರತೆಯ ಸಣ್ಣ ನಡುಕ ಉಂಟಾಗುತ್ತಿರುವುದು ಖಂಡಿತವಾಗಿಯೂ ಕೆಲವು ಜನರ ಆತಂಕವನ್ನು ಹೆಚ್ಚಿಸಿದೆ.


COVID-19 Alert: ಈಶಾನ್ಯದ ಎರಡು ರಾಜ್ಯಗಳಲ್ಲಿ ಡೆಲ್ಟಾ ರೂಪಾಂತರ ವೈರಸ್ ಪತ್ತೆ


ದೆಹಲಿಯಲ್ಲಿ ಒಂದು ತಿಂಗಳೊಳಗೆ ಇದು ಎರಡನೇ ಬಾರಿಗೆ ಕಂಪಿಸಿದ ಭೂಮಿ:
ವಾಸ್ತವವಾಗಿ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ತಿಂಗಳೊಳಗೆ ಎರಡನೇ ಬಾರಿಗೆ ಭೂಮಿ ಕಂಪಿಸಿದ ಅನುಭವವಾಗಿದೆ. ಗಮನಿಸಬೇಕಾದ ಸಂಗತಿಯೆಂದರೆ ಸುಮಾರು ಇಪ್ಪತ್ತು ದಿನಗಳ ಹಿಂದೆ ಅಂದರೆ ಮೇ 30 ರಂದು ದೆಹಲಿಯಲ್ಲಿ ಭೂಕಂಪ (Earthquake) ಸಂಭವಿಸಿದೆ. ರಾಷ್ಟ್ರೀಯ ರಾಜಧಾನಿ ಪ್ರದೇಶದ ರೋಹಿಣಿ ಪ್ರದೇಶದಲ್ಲಿ ನಡುಕ ಉಂಟಾಗಿದ್ದು, ಇದು ರಿಕ್ಟರ್ ಮಾಪಕದಲ್ಲಿ 2.4 ರಷ್ಟಿದೆ.


ಇದನ್ನೂ ಓದಿ-  ರಾಜ್ಯಗಳು ಲಾಕ್ ಡೌನ್ ಸಡಿಲಿಕೆ ಮಾಡುತ್ತಿರುವ ಬೆನ್ನಲ್ಲೇ ಕೇಂದ್ರದಿಂದ ಎಚ್ಚರಿಕೆ


ದೆಹಲಿ ಐದು ಭೂಕಂಪನ ವಲಯಗಳಲ್ಲಿ ನಾಲ್ಕನೆ ಸ್ಥಾನದಲ್ಲಿದೆ. ದೆಹಲಿಯು ಭೂಕಂಪದ ಕೇಂದ್ರಬಿಂದುವಾಗಿರುವುದು ಅಪರೂಪ. ಆದಾಗ್ಯೂ, ಹೆಚ್ಚಿನ ಭೂಕಂಪನ ವಲಯವಾಗಿರುವ ಹಿಮಾಲಯನ್ ವ್ಯಾಪ್ತಿಯಲ್ಲಿ ಭೂಕಂಪ ಸಂಭವಿಸಿದಾಗ ನಗರವು ನಡುಕವನ್ನು ಅನುಭವಿಸುತ್ತದೆ.


ರಾಷ್ಟ್ರ ರಾಜಧಾನಿಯಲ್ಲಿ ದಾಖಲಾದ ಪ್ರಮುಖ ಭೂಕಂಪಗಳು ಬುಲಂದ್‌ಶಹರ್ ನಲ್ಲಿ ಅಕ್ಟೋಬರ್ 10, 1956 ರಂದು 6.7 ರ ತೀವ್ರತೆಯ  ಭೂಕಂಪ ಸಂಭವಿಸಿತ್ತು ಮತ್ತು ಮೊರ್ಡಾಬಾದ್‌ನಲ್ಲಿ  1966 ರ ಆಗಸ್ಟ್ 15 ರಂದು 5.8 ರ ತೀವ್ರತೆಯ ಸಂಭವಿಸಿವೆ. ಇವೆರಡೂ ಪಶ್ಚಿಮ ಉತ್ತರಪ್ರದೇಶದಲ್ಲಿವೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.